ವರದಿ ಅಥಣಿ
ಅಕ್ರಮ ಮರುಳು ಸಾಗಾಟ 30 ಕ್ಕೂ ಅಧಿಕ ವಾಹನ ವಶ !
ಅಥಣಿ ತಾಲೂಕಿನ ಮಹಿಷವಾಡಗಿಯಲ್ಲಿ ಅಕ್ರಮವಾಗಿ ಮರುಳು ತುಂಬುತ್ತಿದ್ದ 30 ಕ್ಕೂ ಅಧಿಕ ವಾಹನಗಳನ್ನು ಅಥಣಿ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಧ್ಯ 26 ಟ್ರ್ಯಾಕ್ಟರ್, 4 ಜೆಸಿಪಿ, 2 ಹೈವಾ (ಟಿಪ್ಪರ್)ಗಳನ್ನು ವಶ ಪಡಿಸಿಕೊಂಡು ಅಥಣಿ ಡಿವೈಎಸ್ಪಿ ಕಛೇರಿ ಆವರಣದಲ್ಲಿ ವಾಹನಗಳನ್ನು ಇರಿಸಿದ್ದಾರೆ.
ಈ ದಾಳಿಯಲ್ಲಿ ಸಿಪಿಐ ರವೀಂದ್ರ ನಾಯಕೋಡಿ, ಪಿಎಸ್ಐ ಶಿವಶಂಕರ ಮುಖರಿ, ರಾಕೇಶ ಬಗಲಿ, ಚಂದ್ರಕಾಂತ ಸಾಗನೂರ, ಸಿಬ್ಬಂದಿಗಳಾದ ರಮೇಶ ಹಾದಿಮನಿ, ಜಿ ಎಚ್ ಹೊನವಾಡ, ಶ್ರೀಧರ ಬಾಂಗಿ, ಮಾಂತೇಶ ಖೋತ, ಕೆ ಬಿ ಶಿರಗೂರ ಟಿ ಬಿ ಪಾಟೀಲ, ಸದಾಶಿವ ಅರಬ್ಯಾನವಾಡಿ, ಕೆ ಎಚ್ ಡಾಂಗೆ ಸೇರಿದಂತೆ ಇತರರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
0 Comments