ಕಿತ್ತೂರು ಪೊಲೀಸ್ ಠಾಣೆ ಪ್ರಕಟಣೆ
ಈ ಮೂಲಕ ಎಲ್ಲ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ, ಇತ್ತೀಚಿನ ದಿನಗಳಲ್ಲಿ
ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾರಣ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಈ ಕೆಳಗಿನ
ಸಲಹೆ ಸೂಚನೆಗಳನ್ನು ಪಾಲಿಸಲು ತಿಳಿಸಲಾಗಿದೆ.
1. ಮನೆ ಕೀಲಿ ಹಾಕಿ ಹೊರಡುವ ಮುಂಚೆ ಆಜುಬಾಜು ಜನರಿಗೆ ತಿಳಿಸುವುದು.
3.
2. ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳದೇ ಶೇಫ್ ಲಾಕರಗಳಲ್ಲಿ ಇಡುವುದು.
ಆಭರಣಗಳನ್ನು ಬಂಗಾರ/ಬೆಳ್ಳಿ ತೊಳೆದುಕೊಡುವುದಾಗಿ ಬಂದು ಹೇಳಿ
ತೊಳೆದುಕೊಳ್ಳುವಾಗ ತಮಗೆ ಬೇರೆ ಕೆಲಸ ಹೇಳಿ ನೀವು ಬರುವುದರೊಳಗಾಗಿ ಅಲ್ಲಿಂದ
ಹೋಗುವ ಮತ್ತು ಆಭರಣಗಳನ್ನು ಬದಲಾಯಿಸುವ ಸಾದ್ಯತೆ ಇರುತ್ತದೆ.
4. ಹೆಣ್ಣು ಮಕ್ಕಳು ಬಸ್ಸಿನಲ್ಲಿ ಪ್ರಯಾಣಿಸುವಾಗ ಬೆಲೆಬಾಳುವ ಆಭರಣಗಳನ್ನು ಹಣವನ್ನು
ಕೊರಳಲ್ಲಿ ಮತ್ತು ಬ್ಯಾಗಗಳಲ್ಲಿ ಇಟ್ಟುಕೊಳ್ಳಬಾರದು, ಏಕೆಂದರೆ ಕಳ್ಳರು ಗದ್ದಲದಲ್ಲಿ ಹತ್ತಿ ನಿಮಗೆ
ಗೊತ್ತಾಗದೇ ಹಾಗೆ ಕಳ್ಳತನ ಮಾಡಿ ಮದ್ಯದಲ್ಲಿ ಇಳಿಯುವ ಸಾದ್ಯತೆ ಹೆಚ್ಚಾಗಿರುತ್ತದೆ.
5. ಸಾರ್ವಜನಿಕರು ತಮ್ಮ ಮನೆಗಳನ್ನು ಕದಾಹಾಕಿಕೊಂಡು ಹೋಗುವ ಸಂದರ್ಭದಲ್ಲಿ ತಮ್ಮ
ಮನೆಯಲ್ಲಿ ಬೆಲೆಬಾಳುವ ಆಭರಣ ಮತ್ತು ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಹೋಗುವುದು
ಇಲ್ಲವೇ ತಮ್ಮ ವಿಶ್ವಾಸ ಇರುವ ಆತ್ಮೀಯರಲ್ಲಿ ಕೊಟ್ಟು ಹೋಗುವುದು ಬಹಳ ಉತ್ತಮ.
6. ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಹೆಣ್ಣುಮಕ್ಕಳು ಕೊರಳಲ್ಲಿ ಬಂಗಾರದ
ಆಭರಣಗಳನ್ನು ಸಾರ್ವಜನಿರಿಗೆ ಕಾಣುವ ಹಾಗೆ ಹಾಕಿಕೊಂಡು ಹೋಗುವುದನ್ನು ಕಳ್ಳರು
ನೋಡಿ ಮೋಟಾರ ಸೈಕಲಗಳಮೇಲೆ ಬಂದು ಹರಿದುಕೊಂಡು ಹೋಗುವ ಸಾದ್ಯತೆ ಹೆಚ್ಚಾಗಿದ್ದು
ಹೀಗಾಗಿ ಆಭರಣಗಳನ್ನು ಜನರಿಗೆ ಕಾಣದಂತೆ ಹಾಕಿಕೊಳ್ಳುವುದು ಉತ್ತಮ.
7. ಸಾರ್ವಜನಿಕರು ದಾರಿಗಳಲ್ಲಿ ವಾಹನ ಹತ್ತಲು ನಿಲ್ಲುವಾಗ ಅಪರಚಿತ ವಾಹನ ಸವಾರರು
ನಿಮ್ಮನ್ನು ಡ್ರಾಪ್ ಮಾಡುವುದಾಗಿ ಕರೆದುಕೊಂಡು ಹೋಗಿ ಮದ್ಯದಲ್ಲಿ ವಾಹನ ತರುಬಿ ನಿಮ್ಮಲ್ಲಿ
ಇರುವ ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಳ್ಳುವ ಸಲುವಾಗಿ ಜೀವ ಹಾಣಿ ಮಾಡುವ ಸಾದ್ಯತೆ
ಇದ್ದು ಅಪರಿಚಿತರ ವಾಹನದ ಮೇಲೆ ಹತ್ತಬಾರದು.
8. ತಮ್ಮ ಸಣ್ಣ ವಯಸ್ಸಿನ ಮಕ್ಕಳ ಮೈಮೇಲೆ ಬಂಗಾರದ ಆಭರಣಗಳನ್ನು ಹಾಕಿ ಶಾಲೆಗೆ
ಮತ್ತು ಆಟ ಆಡಲು ಕಳುಹಿಸಬಾರದು.
9. ಸಾರ್ವಜನಿಕರು ಮೋಟಾರ ಸೈಕಲಗಳನ್ನು ತರಬುವಾಗ ಹ್ಯಾಂಡಲ್ ಲಾಕ್ ಮಾಡಿ
ನಿಲ್ಲಿಸುವುದು.
10. ಬ್ಯಾಂಕನಿಂದ ಹಣ ತೆಗೆದುಕೊಂಡು ಹೋಗುವಾಗ ಎಚ್ಚರ ವಹಿಸುವುದು.
0 Comments