ಎಮ್ ಕೆ ನ್ಯೂಸ್ ಸುದ್ದಿ ಚೆನ್ನಮ್ಮ ಕಿತ್ತೂರು ಇಂದು ನಿಚ್ಚನಕಿ ಗ್ರಾಮದಲ್ಲಿ 192ನೇ ರಾಯಣ್ಣನ ಪುಣ್ಯಸ್ಮರಣೆ ಅಂಗವಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೋರಾಟ, ಶೌರ್ಯ, ದೇಶಭಕ್ತಿ ಇಂದಿಗೂ ಅಜರಾಮರವಾಗಿವೆ. ಅವರೊಬ್ಬ ಪ್ರತಿಮ ದೇಶಭಕ್ತ’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯ  ರಾಜ್ಯಾದ್ಯಕ್ಷ ಮಹಾಂತೇಶ ಕರಬಸನ್ನವರ ಹೇಳಿದರು. 
         ಕಿತ್ತೂರು ತಾಲ್ಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ 192 ನೇಯ ಪುಣ್ಯ ಸ್ಮರಣೆ ನಿಮಿತ್ತವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ  ಮಾತನಾಡಿದರು.
         ಹಾಲುಮತ ಸಮಾಜದಲ್ಲಿ ಜನಿಸಿ, ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ರಾಯಣ್ಣನನ್ನು ಜ. 26ರಂದು ಬ್ರಿಟಿಷರು ಗಲ್ಲಿಗೇರಿಸಿದ್ದರು. ಅವರ ಸ್ಮರಣಾರ್ಥ ಈ ದಿನ ಆಚರಿಸಲಾಗುತ್ತಿದೆ’ ಎಂದರು.
      ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶ ಭಕ್ತ’ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 192 ನೇಯ ಪುಣ್ಯ ಸ್ಮರಣೆಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯಿಂದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಕರಬಸನ್ನವರ ಹೇಳಿದರು.
     ಜನವರಿ 26 ರಂದು ಬೆಳಿಗ್ಗೆ 10:30 ಕ್ಕೆ ಕಿತ್ತೂರಿನ ಚೆನ್ನಮ್ಮನ ವರ್ತುಲದಲ್ಲಿ ರಾಯಣ್ಣನ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ‌. ರಾಯಣ್ಣ ಮತ್ತು ಅವರ ಇತಿಹಾಸದ ಕುರಿತು ವಿಶೇಷವಾದ ಬೋಧನೆಯನ್ನು ನುರಿತ ಮಹನೀಯರಿಂದ ತಿಳಿಸಲಾಗುತ್ತದೆ.
    ಮತ್ತು ಸುಂದರವಾದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದರು. 
  ಇದೇ ಸಂದರ್ಭದಲ್ಲಿ ದಯಾನಂದ ವರಗನ್ನವರ, ಎಲ್ಲಪ್ಪ ವರಗನ್ನವರ, ಸುರೇಶ ಘರೆನ್ನವರ, ಬಸವರಾಜ ಘರೆನ್ನವರ, ಮಡಿವಾಳಪ್ಪ ವರಗನ್ನವರ, ವಿಠ್ಠಲ ಧರೆನ್ನವರ,  ರಾಮಪ್ಪ ಧರೆನ್ನವರ, ಅಶೋಕ ವರಗನ್ನವರ, ಪ್ರವೀಣ ಬುಲಬುಲೆ, ಕಾರ್ಯದರ್ಶಿ ರವಿ ಎನ್ ವರಗನ್ನವರ, ಹಾಗೆ ಇತರರು ಉಪಸ್ಥಿತರಿದ್ದರು.

Post a Comment

0 Comments