kittur vijay news.ಟಿ-20 ವಿಶ್ವಕಪ್ ಸರಣಿಗೆ ಭಾರತದ 15 ಜನರ ತಂಡ ಪ್ರಕಟ.

ಕಿತ್ತೂರು ವಿಜಯ ಸುದ್ದಿ. ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಗೆ ಭಾರತದ 15 ಜನರ ತಂಡ ಪ್ರಕಟಿಸಲಾಗಿದೆ. 
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವಕಾಶ ಸಿಗದೇ, ಸೈಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚು ಹರಿಸಿದ್ದ ಇಶಾನ್ ಕಿಶನ್ ಮತ್ತು ರಿಂಕು ಸಿಂಗ್‌ಗೆ ತಂಡದಲ್ಲಿ ಚಾನ್ಸ್ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಅಕ್ಷ‌ರ್ ಪಟೇಲ್ ಅವರನ್ನು ಉಪನಾಯಕರನ್ನಾಗಿ ಹೆಸರಿಸಲಾಗಿದೆ.ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ನಾಯಕ.ಜನವರಿ ಮತ್ತು ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಅಂತ್ಯದವರೆಗೆ ಅಕ್ಷ‌ರ್ ಪಟೇಲ್ ಭಾರತೀಯ ಟಿ20ಐ ತಂಡದ ಉಪನಾಯಕರಾಗಿದ್ದರು. 

ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಎಷ್ಯಾಕಪ್‌ನಲ್ಲಿ ಗಿಲ್‌ಗೆ ಉಪನಾಯಕನ ಪಟ್ಟ ಕಟ್ಟಲಾಗಿತ್ತು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಶುಬ್‌ಮನ್ ಗಿಲ್, ಉಪನಾಯಕರಾಗಿದ್ದರು. ಆದರೆ ಈಗ ಅಕ್ಷ‌ರ್ ಪಟೇಲ್‌ ನನ್ನು ಉಪನಾಯಕನನ್ನಾಗಿ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಶನಿವಾರ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮೆಗಾ ಈವೆಂಟ್‌ಗಾಗಿ 15 ಜನರ ತಂಡವನ್ನು ಪ್ರಕಟಿಸಿದರು.

ಸೂರ್ಯಕುಮಾರ್ ಯಾದವ್ (ಸಿ), ಅಕ್ಸರ್ ಪಟೇಲ್ (ವಿಸಿ), ಸಂಜು ಸ್ಯಾಟ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಇಶಾನ್ ಕಿಶನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಟೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ರಿಂಕು ಸಿಂಗ್

Post a Comment

0 Comments