ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯತಿ ಭರ್ಜರಿ ಗೆಲುವು ಸಾಧಿಸಿದೆ. ಠಾಕ್ರೆ ಸಹೋದರರಿಗೆ ತೀವ್ರ ಹಿನ್ನಡೆಯಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಯುಬಿಟಿ ಹಿನ್ನಡೆಯಲ್ಲಿದೆ. ಮತ ಎಣಿಕೆ ಕಾರ್ಯ ಸಂಪೂರ್ಭವಾಗಿ ಮುಕ್ತಾಯವಾಗಿಲ್ಲವಾದರೂ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಮ್ಯಾಜಿಕ್ ಸಂಖ್ಯೆಯನ್ನೂ ದಾಟಿ ಜಯಭೇರಿಯತ್ತ ಮುನ್ನುಗ್ಗಿದೆ.ಸದ್ಯದ ಮಾಹಿತಿ ಪ್ರಕಾರ 227 ವಾರ್ಡ್ ಗಳ ಪೈಕಿ ಬಿಜೆಪಿ 129 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಿವಸೇನಾ ಉದ್ಧವ್ ಠಾಕ್ರೆ ಬಣ 72, ಕಾಂಗ್ರೆಸ್ 15, ಎನ್ ಸಿಪಿ 2, ಹಾಗೂ ಇತರರು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಕಾರಣಕ್ಕೆ ಹಲವು ವರ್ಷಗಳ ಬಳಿಕ ಠಾಕ್ರೆ ಸಹೋದರರು ಒಂದಾಗಿ ಚುನಾವಣೆ ಎದುರಿಸಿದ್ದರು. ಆದರೆ ಠಾಕ್ರೆ ಸಹೋದರರಿಗೆ ಹಿನ್ನಡೆಯಾಗಿದ್ದು, ಬಿಜೆಪಿಯ ಮಹಾಯತಿ ಜಯಭೇರಿ ಭಾರಿಸಿದೆ.ಸದ್ಯದ ಮಾಹಿತಿ ಪ್ರಕಾರ 227 ವಾರ್ಡ್ ಗಳ ಪೈಕಿ ಬಿಜೆಪಿ 129 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಿವಸೇನಾ ಉದ್ಧವ್ ಠಾಕ್ರೆ ಬಣ 72, ಕಾಂಗ್ರೆಸ್ 15, ಎನ್ ಸಿಪಿ 2, ಹಾಗೂ ಇತರರು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಕಾರಣಕ್ಕೆ ಹಲವು ವರ್ಷಗಳ ಬಳಿಕ ಠಾಕ್ರೆ ಸಹೋದರರು ಒಂದಾಗಿ ಚುನಾವಣೆ ಎದುರಿಸಿದ್ದರು. ಆದರೆ ಠಾಕ್ರೆ ಸಹೋದರರಿಗೆ ಹಿನ್ನಡೆಯಾಗಿದ್ದು, ಬಿಜೆಪಿಯ ಮಹಾಯತಿ ಜಯಭೇರಿ ಭಾರಿಸಿದೆ.
0 Comments