ಈ ಸಂಬಂಧ ಧಾರವಾಡ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಾದ್ಯಂತ ಚಳಿ ಮತ್ತು ಶೀತಗಾಳಿಗೆ ಮಕ್ಕಳ ಅನಾರೋಗ್ಯ ಉಲ್ಬಣಗೊಳ್ಳುತ್ತಿದೆ, ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಜ್ವರ, ತಲೆ ನೋವು, ಮೈ-ಕೈ ನೋವು, ನೆಗಡಿ, ಕೆಮ್ಮು ಸಹಿತ ಶೀತ ಸಂಬಂಧಿ ಸಮಸ್ಯೆ ಜೊತೆಗೆ ಉಸಿರಾಟದ ತೊಂದರೆ ಸಹ ಉಂಟಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಅವಧಿಯನ್ನು ಮುಂಜಾನೆ 10 ಗಂಟೆಯಿಂದ ಪ್ರಾರಂಭಿಸುವುದು ಒಳ್ಳೆಯದೆನ್ನುವುದು ನಮ್ಮೆಲ್ಲರ ಹಾಗೂ ಸಮಸ್ತ ಪಾಲಕರ ಅಭಿಪ್ರಾಯವಾಗಿದೆ. ಕೆಲವು ಶಾಲೆಗಳು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತಿರುವುದರಿಂದ ಮಕ್ಕಳು 6 ಗಂಟೆಗೆ ಎದ್ದು, ತಮ್ಮ ತಮ್ಮ ಶಾಲಾ ಬಸ್ಸ್‌ಗಳಿಗಾಗಿ ಇಂತಹ ಕೊರೆಯುವ ಚಳಿಯಲ್ಲಿ ಎದ್ದು, ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ವರ್ಷ ಚಳಿಗಾಲದಲ್ಲಿ ಶಾಲಾ ಅವಧಿಯನ್ನು ಬದಲಿಸಲು ತಾವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. ತಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ನಾನು, ನಾಡಿನ ಮಕ್ಕಳು ಹಾಗೂ ಪಾಲಕರು ಎದುರು ನೋಡುತ್ತಿದ್ದೇವೆ ಎಂದು ಬಬಲೇಶ್ವರ ಬರೆದಿದ್ದಾರೆ.
0 Comments