ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರಿನಲ್ಲಿ ಕನ್ನಡ ಜ್ಯೋತಿಗೆ ಭವ್ಯ ಸ್ವಾಗತ

 

ಇದು ಮುಂಜಾನೆ ಚನ್ನಮನ ಕಿತ್ತೂರಿಗೆ ಆಗಮಿಸಲಿರುವ ಕನ್ನಡ ಜ್ಯೋತಿ ರಥದ ಸ್ವಾಗತಕ್ಕೆ ಎಲ್ಲರೂ ಬನ್ನಿರಿ
                   ಡಾ.ಎಸ್.ಬಿ.ದಳವಾಯಿ.
ಚನ್ನಮ್ಮನ ಕಿತ್ತೂರು;- ಡಿ. 2೦ ರಿಂದ 23 ರ ವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯು ದಿನಾಂಕ 22 ರಿಂದ ಆರಂಭವಾಗಿ ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಸಂಚರಿಸಿ ಬುಧವಾರ ದಿನಾಂಕ 2 ರಂದು ಮುಂಜಾನೆ ಬೆಳಗಾವಿ ಜಿಲ್ಲೆ ಪ್ರವೇಶಿಸಿದೆ. 
      ಚನ್ನಮ್ಮನ ಕಿತ್ತೂರಿಗೆ ಇಂದು  ದಿನಾಂಕ 3 ರಂದು ಗುರುವಾರ ಮುಂಜಾನೆ ಒಂಭತ್ತು ಗಂಟೆಗೆ ಕೋಟೆ ಆವರಣದ ಎದುರಿಗೆ ಇರುವ ಅರಳೀಕಟ್ಟೆಗೆ ಆಗಮಿಸಲಿದೆ. ಈ ಕನ್ನಡ ಜ್ಯೋತಿ ಹೊತ್ತ ರಥವನ್ನು ಕಿತ್ತೂರು ನಾಡಿನ ಎಲ್ಲ ಕನ್ನಡ ಅಭಿಮಾನಿಗಳು ಮತು ಜನತೆ ಸಡಗರದಿಂದ ಸ್ವಾಗತಿಸಿ ಸಂಭ್ರಮಿಸಬೇಕೆಂದು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ರಥವು ಅರಳೀಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಣಿ ಚನ್ನಮ್ಮ ವೃತ್ತದವರೆಗೆ ಸಾಗಿ ಅಲ್ಲಿಂದ ಖಾನಾಪೂರ ತಾಲೂಕಿಗೆೆ ಬೀಳ್ಕೊಡಲ್ಪಡುತ್ತದೆ. ಈ ಕನ್ನಡ ಜ್ಯೋತಿ ರಥ ಯಾತ್ರೆಯಲ್ಲಿ ಎಲ್ಲರೂ ಸಡಗರದಿಂದ ಭಾಗವಹಿಸಿ ಶೋಭೆ ತರಬೇಕೆಂದು ಮನವಿ ಮಾಡಲಾಗಿದೆ. ರಥ ಯಾತ್ರೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನ ಎಲ್ಲ ಜನ ಪ್ರತಿನಿಧಿಗಳು,ಅಧಿಕಾರಿಗಳು,ವಿವಿಧ ಸಂಘಟನೆಯ ಪದಾಧಿಕಾರಿಗಳು,ಜನತೆ, ಶಾಲಾ ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಳ್ಗೊಳ್ಳಲಿದ್ದಾರೆ.

Post a Comment

0 Comments