ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ. ಕಿತ್ತೂರಿನ ಉತ್ಸವ ನಿಮಿತ್ಯ ಕೈಗಾರಿಕಾ ವಸ್ತು ಪ್ರದರ್ಶನ ಮಳಿಗೆಗಳಿಗೆ ಅರ್ಜಿ

ಚನ್ನಮ್ಮನ ಕಿತ್ತೂರು ಉತ್ಸವದ ನಿಮಿತ್ಯ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಅರ್ಜಿ ಆಹ್ವಾನ 



ರಾಣಿ ಚನ್ನಮ್ಮನ ಕಿತ್ತೂರು :


ಭಾರತದ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ರಾಣಿ ಚೆನ್ನಮ್ಮಾಜಿಯವರ 200ನೇ ವರ್ಷದ ವಿಜಯೋತ್ಸವದ 2024ರ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ ಅಕ್ಟೋಬರ್ 23 24 25 ರಂದು ಜರುಗುವ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರು ಉತ್ಸವದ ಸಮಯದಲ್ಲಿ ಜಿಲ್ಲೆಯಲ್ಲಿ ತಯಾರಾಗುವ ಖಾದಿ ಗ್ರಾಮೋದ್ಯೋಗ, ಗೃಹ ಕೈಗಾರಿಕೆ, ಕರಕುಶಲ ವಸ್ತುಗಳು, ಕೈಮಗ್ಗದ ವಸ್ತುಗಳು ಮತ್ತು ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದ್ದು ಉತ್ಸವದಲ್ಲಿ 2 ರಿಂದ 3 ಲಕ್ಷ ಜನರು ಭೇಟಿ ನೀಡುವರಿದ್ದು ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಅವಕಾಶವಿದ್ದು ವಿವಿಧ ಸೂಕ್ಷ್ಮ, ಸಣ್ಣ ಕೈಗಾರಿಕಾ ಘಟಕಗಳು, ಕುಶಲ ಕಾರ್ಮಿಗಳು, ಸ್ವ ಸಹಾಯ ಸಂಘ ಸಂಸ್ಥೆಗಳು ಸರಕಾರಿ ಇಲಾಖೆಯವರು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಪ್ರಯೋಜನ ಪಡೆಯಲು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಬೆಳಗಾವಿ ಹಾಗೂ ಅಧ್ಯಕ್ಷರು ಕಿತ್ತೂರು ಉತ್ಸವ ವಸ್ತು ಪ್ರದರ್ಶನ ಸಮಿತಿಯಿಂದ ಕೋರಲಾಗಿದೆ.
ಸರಕಾರಿ ಇಲಾಖೆಯವರು 5000ರೂ, ಸೂಕ್ಷ್ಮ ಸಣ್ಣ ಕೈಗಾರಿಕಾ ಘಟಕದವರು 4500ರೂ, ಆಹಾರ ಮಳಿಗೆಯವರು 7500ರೂ, ಸ್ವ ಸಹಾಯ ಸಂಘಗಳು ಹಾಗೂ ಕುಶಲಕರ್ಮಿಗಳಿಗೆ 1500ರೂ ದಂತೆ ಪ್ರತಿ ಮಳಿಗೆಗೆ ದರ ನಿಗದಿ ಪಡಿಸಿದ್ದು ಉತ್ಸವದಲ್ಲಿ ಮಳಿಗೆಯನ್ನು ಪಡೆಯಲು ಇಚ್ಛಿಸುವವರು ದಿನಾಂಕ 19/10/2024ರ ಒಳಗಾಗಿ ಡಿ ಡಿ ಮುಖಾಂತರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ ಬೆಳಗಾವಿ ಕಚೇರಿ ದೂರವಾಣಿ ಸಂಖ್ಯೆ 0831-2440187, ಸಹಾಯಕ ನಿರ್ದೇಶಕರು ಬೆಳಗಾವಿ ಎ ಐ ಪಠಾಣ 9448866919, ಶಿವಾನಂದ ಕಮ್ಮಾರ 9902412428 ಸಂಪರ್ಕಿಸಿ.

 

Post a Comment

0 Comments