ಕಿತ್ತೂರು ವಿಜಯ ಸುದ್ದಿ. ರಾಣಿ ಚನ್ನಮ್ಮನ ವಿಜಯೋತ್ಸವದ ಸಿದ್ಧತೆ. ನಡೆಸಿದ ಶಾಸಕ ಬಾಬಾ ಸಾಹೇಬ್ ಪಾಟೀಲ

ಐತಿಹಾಸಿಕ ಕಿತ್ತೂರು ವಿಜಯೋತ್ಸದ ಸಿದ್ದತೆ ಪರಿಶೀಲನೆ!!ಶಾಸಕ ಪಾಟೀಲ
ಚನ್ನಮ್ಮನ ಕಿತ್ತೂರು:- ಮುಂಬರುವ ದಿನಗಳಲ್ಲಿ ಕೋಟೆ ಆವರಣದಲ್ಲಿ ನಡೆಯುವ ವೀರ ರಾಣಿ ಕಿತ್ತೂರು ಚನ್ನಮ್ಮನ 2೦೦ ನೇ ಉತ್ಸವದ ವರ್ಷಾಚರಣೆ
ಕೆಲವೇ ದಿನಗಳಲ್ಲಿ ರಾಷ್ಟ್ರವೇ

ಕಣ್ತೇರೆದು ನೋಡುವಂತಾಗುವಂತಹ ಉತ್ಸವದ ತಯಾರಿಯ ಕುರಿತು ಅಧಿಕಾರಿಗಳೊಂದಿಗೆ  ಶಾಸಕ ಬಾಬಾಸಾಹೇಬ ಪಾಟೀಲ ಚರ್ಚಿಸಿ ಪರಿಶೀಲಿಸಿದರು.
 ನಂತರ ಮಾತನಾಡಿ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಅಧಿಕಾರಿಗಳು ತಮನೆ ಕೊಟ್ಟ ಜವಾಬ್ದಾರಿಯುತ ಕೆಲಸಗಳನ್ನು ಸಭೆ ನಡೆಸುವ ಮೂಲಕ ಸಿದ್ದತೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದ ಹಾಗೇ ಅಧಿಕಾರಿಗಳು ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳುವಂತೆ ಖಡಕ್ಕಾಗಿ ಆದೇಶ ನೀಡಿದರು. 
 ಕಂದಾಯ ಸಚಿವ ಕೃಷ್ಣಭೈರೇಗೌಡ ಅ.8 ರಂದು ಕಿತ್ತೂರಿಗೆ ಬರುವವರಿದ್ದಾರೆ. ಆ ಸಂದರ್ಭದಲ್ಲಿ ಥೀಮ್‌ಪಾರ್ಕ್ ಹಾಗೂ ಕೋಟೆ ರಕ್ಷಿಸುವ ಗೋಡೆ ಕುಸಿದಿರುವುದು  ಮರುನಿರ್ಮಾಣ ಮಾಡಲು ಪೂಜೆ ನೇರವೇರಿಸಲಿದ್ದಾರೆಂದು ತಿಳಿಸಿದರು. 
 ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಮಾತನಾಡಿ ಈಗಾಗಲೇ ಎಲ್ಲ ಸಿದ್ದತೆಗಳು ತಯಾರಿಯಲ್ಲಿದ್ದು ಇನ್ನೇನು ಸ್ವಲ್ಪ ದಿನದಲ್ಲಿ ಈ ಕಾರ್ಯ ಪೂರ್ಣಗೊಂಡು ವಿಜಯೋತ್ಸವ  ಮಾಡಲು  ತಯಾರಿಯಲ್ಲಿದ್ದು ಉತ್ಸವವನ್ನು ರಾಷ್ಟ್ರವೇ ಕಣ್ತೇರೆದು ನೋಡುವಂತೆ ಅರ್ಥಪೂರ್ಣವಾಗಿ ಕಿತ್ತೂರು ಉತ್ಸವ ಆಚರಿಸೋಣವೆಂದರು.  
 ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ತಾಪಂ ಇಓ ಕಿರಣ ಗೋರ್ಪಡೆ, ಲೋಕೋಪಯೋಗಿ ಎಇಇ ಸಂಜೀವ ಮಿರಜಕರ, ಪ್ರಾಚ್ಯ ವಸ್ತು ಅಭಿಯಂತರ ಶ್ರೀಖಂಡೆ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಕ್ಯೂರೇಟರ್ ರಾಘವೇಂದ್ರ, ಅಶಪಾಕ ಹವಾಲ್ದಾರ, ಅಪ್ಪಾಸಾಹೇಬ ಶಿಲ್ಲೇದಾರ, ಕೃಷ್ಣಾ ಬಾಳೇಕುಂದ್ರಿ, ಬಸವರಾಜ ಸಂಗೋಳ್ಳಿ, ಅಶೋಕ ಮಾಳಗಿ, ಸುನೀಲ ಘೀವಾರಿ, ಸಿ.ಬಿ.ಪಾಟೀಲ, ಜಯಸಿದ್ರಾಮ ಮಾರಿಹಾಳ, ಸೇರಿದಂತೆ ಇನ್ನೂ  ಅನೇಕ ಗಣ್ಯರು ಉಪಸ್ತಿತರಿದ್ಧರು.

 

Post a Comment

0 Comments