ಕಿತ್ತೂರು ವಿಜಯ ಸುದ್ದಿ. ಮಾಸಿಕ ಶಿವಾನುಭವ ಕಾರ್ಯಕ್ರಮ 200 ವರ್ಷದ ರಾಣಿ ಚನ್ನಮ್ಮ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಪ್ರೊ ಪಾರ್ವತಿ ಲದ್ದಿ ಮಠ .

ಕಿತ್ತೂರು ವಿಜಯ  ಸುದ್ದಿ ಚನ್ನಮ್ಮನ ಕಿತ್ತೂರು ಶಿವಾನುಭವ ಕಾರ್ಯಕ್ರಮ 

ರಾಣಿ ಚನ್ನಮ್ಮ ಮತ್ತು ಅವರ ಸಹಚರರ ಇತಿಹಾಸ, ತ್ಯಾಗ ಬಲಿದಾನ ಗಳನ್ನು ಯುವ ಪೀಳಿಗೆಗೆ ತಿಳಿಸುವದರ ಮೂಲಕ ಅರ್ಥಪೂರ್ಣವಾಗಿ ಕಿತ್ತೂರು ವಿಜಯೋತ್ಸವದ 200 ನೆಯ ವರ್ಷಾಚರಣೆ ಯನ್ನು ಆಚರಿಸೋಣ.

 .ಪ್ರೊ. ಪಾರ್ವತಿ ಲದ್ದಿಮಠ ಚನ್ನಮ್ಮನ ಕಿತ್ತೂರು:- ರಾಣಿ ಚನ್ನಮ್ಮ ಮತ್ತು ಅವರ ಸಹಚರರ ಇತಿಹಾಸ, ತ್ಯಾಗ ಬಲಿದಾನ ಗಳನ್ನು ಯುವ ಪೀಳಿಗೆಗೆ ತಿಳಿಸುವದರ ಮೂಲಕ ಅರ್ಥಪೂರ್ಣವಾಗಿ ಕಿತ್ತೂರು ವಿಜಯೋತ್ಸವದ 200 ನೆಯ ವರ್ಷಾಚರಣೆ ಯನ್ನು ಆಚರಿಸೋಣ ಎಂದು ಕಿತ್ತೂರಿನ ಆರ್.ಜಿ.ಎಸ್.ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪಾರ್ವತಿ ಲದ್ದಿಮಠ ತಿಳಿಸಿದರು.ಅವರು ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಸಿಕ ಶಿವಾನುಭವ, ಸುವರ್ಣ ಕರ್ನಾಟಕ ಸಂಭ್ರಮ, ಮಾಜಿ ಸೈನಿಕರಿಗರ ಸನ್ಮಾನ ಮತ್ತು ಕಿತ್ತೂರು ವಿಜಯೋತ್ಸವದ ಪ್ರಯುಕ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ “ಕಿತ್ತೂರು ವಿಜಯೋತ್ಸವದ 200 ನೆಯ ವರ್ಷಾಚರಣೆ" ಕುರಿತು ಉಪನ್ಯಾಸ ನೀಡುತ್ತಾ ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ನಡೆಯಲಿರುವ ರಾಜ್ಯ ಮಟ್ಟದ ಚನ್ನಮ್ಮನ ಉತ್ಸವವನ್ನು ಕೇವಲ ಹಬ್ಬ ಅಥವಾ ಜಾತ್ರೆಯನ್ನಾಗಿ ಆಚರಿಸದೆ ಚನ್ನಮ್ಮನ ಕಿತ್ತೂರಿನ ಐತಿಹಾಸಿಕ ಅರಮನೆ-ಗುರುಮನೆ ಗಳ ಕುರಿತು ಸಂಶೋಧನೆ ನಡೆಯುವಂತಾಗಲಿ ಎಂದು ಶುಭ ಕೋರಿದರು. ಕಿತ್ತೂರಿನ ವೀರ ರಾಣಿ ಕಿತ್ತೂರು ಚನ್ನಮ್ಮ ನಾಡಿನ ದೇಶದ ಮತ್ತು ವಿಶ್ವದ ಎಲ್ಲ ಮಹಿಳೆಯರಿಗೆ ಪ್ರೇರಕಶಕ್ತಿ ಆಗಿದ್ದಾಳೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇಂದು ಮಾತನಾಡಲು ಕಲ್ಮಠದ ಪೂಜ್ಯರು ಅವಕಾಶ ಕಲ್ಪಿಸಿರುವದಕ್ಕೆ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮಳ ಆಶೀರ್ವಾದವೇ ಕಾರಣ ಎಂದು ತಿಳಿಸುತ್ತಾ ಬಲಿಷ್ಠ ಬ್ರಿಟಿಷರು ಒಡ್ಡಿದ ಆಮಿಷಕ್ಕೆ ಒಳಗಾಗದೆ ಕಿತ್ತೂರಿನ ರಕ್ಷಣೆಗೆ ತನ್ನ ಸೈನಿಕರನ್ನು ಒಗ್ಗೂಡಿಸಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಮಹಾ ತಾಯಿಯ ಪರಾಕ್ರಮ ಕುರಿತು ಮಾರ್ಮಿಕವಾಗಿ ಮಾತನಾಡಿದರು.

ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಮಾಜಿ ಸೈನಿಕರೂ ಆದ ಶ್ರೀ ಆನಂದ ಬೆಣ್ಣೆ ಕಿತ್ತೂರು ರಾಣಿ ಚನ್ನಮ್ಮ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ| ಎಸ್.ಪಿ.ಹಿರೇಮಠ, ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀ ಬಸವರಾಜ ಬಿದರಿ, ಇವರುಗಳನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಡಾ। ಎಸ್.ಪಿ.ಹಿರೇಮಠ ಇವರು ತಾವು ಸೈನ್ಯದಲ್ಲಿದ್ದಾಗಿನ ಅನುಭವವನ್ನು ಹಂಚಿಕೊಳ್ಳುವದರ ಜೊತೆಗೆ ಭಾರತ ಸೇನೆಯ ಪ್ರಥಮ ದಂಡ ನಾಯಕರಾಗಿದ್ದ ಕೊಡಗಿನವರಾದ ಫಿಲ್ಡ್ ಮಾರ್ಷಲ್ ಜನರಲ್ ಕೆ.ಎಂ.ಕರಿಯಪ್ಪನವರ ಸೇವೆಯನ್ನು ಸ್ಮರಿಸಿದರು. ಚನ್ನಮ್ಮನ ಕಿತ್ತೂರಿನ ರಾಜಗುರು ಶಿಕ್ಷಣ ಸಂಸ್ಥೆ ಮತ್ತು ಸಂಕಲ್ಪ ನೃತ್ಯಾಲಯ ಗಳ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಆಕರ್ಷಿಸಿದವು.ಇವರುಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅಧ್ಯಕ್ಷೀಯ ನುಡಿಗಳಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಎಸ್.ಎಫ್ .ಬೈಲಪ್ಪನವರ ಈ ಸುಂದರ ಸಮಾರಂಭವನ್ನು

ಹಮ್ಮಿಕೊಂಡು ರಾಣಿ ಚನ್ನಮ್ಮಳ ಇತಿಹಾಸವನ್ನು ಮತ್ತೆ ಮೆಲಕು ಹಾಕುವದರ ಜೊತೆಗೆ ನಿವೃತ್ತ ಸೈನಿಕರನ್ನು

ಸನ್ಮಾನಿಸಿರುವದಕ್ಕೆ ಸಂತಸ ವ್ಯಕ್ತ ಪಡಿಸುತ್ತ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಕಾರ್ಯಕ್ರಮದ ಸಂಘಟಕರುತಿಳಿಸಿಕೊಟ್ಟಿರುವದಕ್ಕೆ ಅಭಿನಂದಿಸಿದರು.ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಣಿ ಚನ್ನಮ್ಮಳ ವಿಜಯೋತ್ಸವದ 200 ನೆಯ ವರ್ಷಾಚರಣೆಯು ಆರ್ಥ ಪೂರ್ಣವಾಗಿ ಜರುಗಲಿ ಮತ್ತು ದೇಶ ರಕ್ಷಣೆಗೆ ಹಗಲಿರುವ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ರಿಯಾಶೀಲರಾಗಿರುವ ಸೈನಿಕ ರ ಮಹತ್ವ ವನ್ನು ತಿಳಿಸಲು ಬರಲಿರುವ ಪ್ರತಿ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಒಬ್ಬ ಮಾಜಿ ಅಥವಾ ಹಾಲಿ ಸಾಧಕ ಸೈನಿಕರನ್ನು ಗೌರವಿಸೋಣ ಎಂದು ಆಶೀರ್ವದಿಸಿದರು. ಶ್ರೀ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶ್ರೀ ಬಸವರಾಜ ಆಸಂಗೀಮಠ ಸ್ವಾಗತಿಸಿದರು. ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಮಾಸಿಕ ಶಿವಾನುಭವದ ಉದ್ದೇಶಗಳನ್ನು ತಿಳಿಸುವದರ ಜೊತೆಗೆ ಅತಿಥಿಗಳನ್ನು ಪರಿಚಯಿಸಿದರು. ಶ್ರೀ ಈಶ್ವರ ಗಡಿಬಿಡಿ, ಶ್ರೀ ಪ್ರಲ್ಲಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳಿ ಇವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು. ಶ್ರೀ ಕುಮಾರ ಪರದೇಶಿ ವಂದಿಸಿದರು. ಶ್ರೀ ಬಸವಪ್ರಭು ಪಾಟೀಲ ನಿರೂಪಿಸಿದರು. ಪ್ರಸಾದ ಸೇವೆ ಗೈದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎ.ಆರ್.ಕುಬಸದ, ಇತಿಹಾಸ ಸಂಶೋಧಕರಾದ ಶ್ರೀ ಮಹೇಶ ಚನ್ನಂಗಿ, ಕ್ಯೂರೇಟರ ಶ್ರೀ ರಾಘವೇಂದ್ರ ಮತ್ತು ಕಿತ್ತೂರ ನಾಡಿನ ಹಿರಿಯರು,ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಶರಣ ಶರಣೆಯರು ಭಾಗವಹಿಸಿದ್ದರು.
 

Post a Comment

0 Comments