ಕಿತ್ತೂರು ಸಂಸ್ಥಾನದ ಮಹಾರಾಣಿ ವೀರ ವನಿತೆ ರಾಣಿ ಚೆನ್ನಮ್ಮ ಅವರ 1824ರ ಮೊಟ್ಟ ಮೊದಲ ಬ್ರಿಟಿಷರ ವಿರುದ್ಧ ಸಂಗ್ರಾಮದ ವಿಜಯಕ್ಕೆ ಇದೇ ಅಕ್ಟೋಬರ್ 23 ಕ್ಕೆ 200 ವರ್ಷ ಪೂರೈಸಿದ್ದು, ಈ ಐತಿಹಾಸಿಕ ವಿಜಯದ ಸಲುವಾಗಿ ರಾಣಿ ಚೆನ್ನಮ್ಮ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಾದ ಶ್ರೀ Jyotiraditya M Scindia ಅವರನ್ನು ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರೊಂದಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi, ರವರು ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರು, ರಾಜ್ಯಸಭಾ ಸಂಸದರಾದ ಶ್ರೀ Iranna Kadadi - MP, ಸಂಸದಾರಾದ ಶ್ರೀ Vishweshwar Hegde Kageri, ಶಾಸಕರಾದ ಅರವಿಂದ ಬೆಲ್ಲದ್, ಶ್ರೀ ಅಭಯ್ ಪಾಟೀಲ್, ಮಾಜಿ ಸಂಸದರಾದ ಶ್ರೀ Annasaheb S. Jolle, ಮಾಜಿ ಶಾಸಕರಾದ ಶ್ರೀ ವಿಶ್ವನಾಥ್ ಪಾಟೀಲ್, ಡಾ . ರವಿ ಪಾಟೀಲ, ಮಲ್ಲಣ್ಣ ಯಾದವಾಡ ಹಾಗೂ ಪಕ್ಷದ ಪ್ರಮುಖರು ಮುಖಂಡರು ಉಪಸ್ಥಿತರಿದ್ದರು. ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಅವರನ್ನು ಕಿತ್ತೂರು ಕರ್ನಾಟಕ ನಿಯೋಗದೊಂದಿಗೆ ಭೇಟಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ವರ್ಷಾಚರಣೆ ನಿಮಿತ್ಯ ಬೆಳಗಾವಿ ವಿಮಾನ ನಿಲ್ದಾಣಕ್ಕೆ "ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ" ಎಂದು ನಾಮಕರಣ ಹಾಗೂ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಚನ್ನಮ್ಮನ ಭವ್ಯವಾದ ಪ್ರತಿಮೆ ಸ್ಥಾಪನೆ ಮಾಡುವಂತೆ ವಿನಂತಿಸಲಾಯಿತು. ಜೊತೆಗೆ ಬೆಳಗಾವಿ- ಬೆಂಗಳೂರು ವಿಮಾನಯಾನ ಸೇವೆ ರದ್ದು ಮಾಡದೇ ಮುಂದುವರೆಸುವುದು, ಪುಣೆ, ಚೆನ್ನೈ ಕೊಚ್ಚಿನ್, ಲಖನೌ, ಮೈಸೂರು, ಮುಂಬಯಿ ನಗರಗಳಿಗೂ ಸಹ ವಿಮಾನಯಾನ ಸೇವೆಯನ್ನು ಒದಗಿಸುವಂತೆ ಮಾನ್ಯ ಸಚಿವರಿಗೆ ಆಗ್ರಹಪೂರ್ವಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi, ಸಂಸದರಾದ ಶ್ರೀ Vishweshwar Hegde Kageri, Dជ ជជជ Iranna Kadadi - MP,ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶ್ರೀ ಅರವಿಂದ ಬೆಲ್ಲದ, ಶ್ರೀ ಅಭಯ ಪಾಟೀಲ, ಮಾಜಿ ಶಾಸಕಾರದ ಡಾ. ವಿ.ಆಯ್. ಪಾಟೀಲ. ಡಾ. ರವಿ ಪಾಟೀಲ, ಶ್ರೀ ಮಲ್ಲಣ್ಣ ಯಾದವಾಡ. ಮಾಜಿ ಶಾಸಕರಾದ ಮಹಾಂತೇಶ ದೊಡ್ಡ ಗೌಡರ. ಸಿರಿದಂತೆ ಇನ್ನೂ ಅನೇಕ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು
ಕಿತ್ತೂರು ವಿಜಯ ಸುದ್ದಿ ಚನ್ನಮ್ಮನ ಕಿತ್ತೂರು.


0 Comments