ಕಳೆದ ವರ್ಷ ಮಳೆ ಅಭಾವದಿಂದಾಗಿ ಜಲಾಶಯ ಭರ್ತಿಯಾಗಿರಲಿಲ್ಲ. ಇದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಆದರೆ, ಈ ವರ್ಷ ಜಲಾಶಯ ಭರ್ತಿಯಾಗಿದೆ. ಜಲಾಶಯದ ಗರಿಷ್ಟ ಮಟ್ಟ 2079.5 ಅಡಿ, 37.731 ಟಿಎಂಸಿ ಸಾಮರ್ಥ್ಯವಿದ್ದು, ಪೂರ್ತಿ ನೀರು ಸಂಗ್ರಹವಾಗಿದೆ. ಇಂದು ಎಲ್ಲರ ಜೊತೆ ಸೇರಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ್ದೇನೆ. ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದೇನೆ ಎಂದು ಹೆಬ್ಬಾಳ್ವರ್ ತಿಳಿಸಿದರು ಜಲಾಶಯದಲ್ಲಿ ಒಟ್ಟು 37 ಟಿಎಂಸಿ ನೀರು ತುಂಬಿದ್ದು, ಇದರಲ್ಲಿ 16 ಟಿಎಂಸಿ ನೀರು ಕುಡಿಯುವುದಕ್ಕೆ ಹಾಗೂ 16 ಟಿಎಂಸಿ ಕೃಷಿ ನೀರಾವರಿಗೆ ಬೇಕಾಗುತ್ತದೆ. ರೈತರಿಗೆ ನೆರವು ನೀಡುವುದೇ ನಮ್ಮ ಉದ್ದೇಶವಾಗಿದೆ. ಇನ್ನು ಈ ಜಲಾಶಯದ ಮೊದಲ ಆದ್ಯತೆ ಕುಡಿಯುವ ನೀರು. ಹಾಗೆಯೇ, ರೈತರ ಹಿತ ಕಾಯುವುದಕ್ಕೆ ಕೂಡ ನಾವು ಬದ್ದ ಎಂದು ಭರವಸೆ ನೀಡಿದರು ವೇಳೆ ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ, ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದಾಶಿವಗೌಡ ಪಾಟೀಲ್, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಎ.ಎಲ್.ವಾಸನದ, ಅಧೀಕ್ಷಕ ಇಂಜಿನಿಯರ್ ವಿ.ಎಸ್.ಮಧುಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಮತ್ತಿತರರು ಇದ್ದರು
ಕಿತ್ತೂರು ವಿಜಯ ಸುದ್ದಿ

0 Comments