kittur,: ಐತಿಹಾಸಿಕ ಚನ್ನಮ್ಮನ ಕಿತ್ತೂರು ಮತ್ತು ಎಂ ಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಅಧಿಸೂಚನೆ

ಐತಿಹಾಸಿಕ ಚನ್ನಮ್ಮನ ಕಿತ್ತೂರು ಹಾಗೂ ಎಂ ಕೆ ಹುಬ್ಬಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅಧಿಸೂಚನೆ ತಹಸಿಲ್ದಾರ್ ರವೀಂದ್ರ ಹಾದಿಮನಿ
ಚನ್ನಮ್ಮನ ಕಿತ್ತೂರು :- ಕಿತ್ತೂರು ತಾಲೂಕಿನ ಎರಡು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅಧಿಸೂಚನೆ ಮಾನ್ಯ ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದು ಅದರಂತೆ ತಹಸಿಲ್ದಾರ್ ರವೀಂದ್ರ ಕೆ ಹಾದಿಮನಿ ಕಿತ್ತೂರು ಇವರು ಗೊತ್ತುಪಡಿಸಿದ್ದ ಅಧಿಕಾರಿಗಳಾಗಿದ್ದು ಎಲ್ಲ ಪಂಚಾಯತಿ ಸದಸ್ಯರಿಗೆ ಜನಪ್ರತಿನಿಧಿಗಳಿಗೆ ನೋಟಿಸ್ ಮುಖಾಂತರ ಮಾಹಿತಿ ನೀಡಲಾಗಿದೆ ಕಿತ್ತೂರು ಪಟ್ಟಣಕ್ಕೆ ಸಂಬಂಧಿಸಿದಂತೆ ಎಂ ಕೆ ಹುಬ್ಬಳ್ಳಿಯ ಪಟ್ಟಣ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ಜರಗಿಸುವ ಕುರಿತು ದಿ 02-09-2024 ರಂದು ಎಂ ಕೆ ಹುಬ್ಬಳ್ಳಿ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಸ್ಥಾನವು "ಸಾಮಾನ್ಯ" ವರ್ಗಕ್ಕೆ ಹಾಗೂ ಉಪಾಧ್ಯಕ್ಷರ ಸ್ಥಾನವು " ಹಿಂದುಳಿದ ಅ " ವರ್ಗಕ್ಕೆ ಮೀಸಲಾಗಿದೆ ಹಾಗೂ ಕಿತ್ತೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ಜರಗಿಸುವ ಕುರಿತು ದಿ 03-09-2024 ರಂದು ಪಟ್ಟಣ ಪಂಚಾಯತ್ ಕಿತ್ತೂರು ಸಭಾ ಭವನದಲ್ಲಿ ಸಭೆ ಜರುಗಲಿದ್ದು ಅಧ್ಯಕ್ಷ ಸ್ಥಾನವು" ಸಾಮಾನ್ಯ " ವರ್ಗಕ್ಕೆ ಹಾಗೂ ಉಪಾಧ್ಯಕ್ಷರ ಸ್ಥಾನವು "ಸಾಮಾನ್ಯ" ಮಹಿಳೆ ವರ್ಗಕ್ಕೆ ಮೀಸಲಾಗಿದೆ ಎಂದು ತಿಳಿಸಿದರು.

Post a Comment

0 Comments