![]() |
| ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ಅವರು ಸಸಿ ನೆಟ್ಟು ನೀರುಣಿಸುತ್ತಿರುವುದು. |
ಚನ್ನಮ್ಮನ
ಕಿತ್ತೂರು: ತಾಲೂಕ ಪಂಚಾಯತ ಚನ್ನಮ್ಮನ ಕಿತ್ತೂರ ಹಾಗೂ ಸಾಮಾಜಿಕ ಅರಣ್ಯ ವಲಯ ಮತ್ತು ಪ್ರಾದೇಶಿಕ ಅರಣ್ಯ ವಲಯ ಬೈಲಹೊಂಗಲ ಇಚರುಗಳ ಸಹಯೋಗದಲ್ಲಿ ತಾಲೂಕಿನ ಉಗರಖೋಡ ಗ್ರಾಮ ಪಂಚಾಯತ ವ್ಯಾಪ್ತಿಯ ದೇಮಟ್ಟಿ ಗ್ರಾಮದ ಉರ್ದು ಶಾಲೆಯ ಆವರಣದಲ್ಲಿ ಹಾಗೂ ಗ್ರಾಮದ
ಗೈರಾಣು ಜಾಗೆಯಲ್ಲಿ ಗುರುವಾರ
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ "ತಾಯಿಯ ನೆನಪಿಗಾಗಿ ಸಸಿ ನೆಡು " ವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಘೋರ್ಪಡೆ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ
, ಕಾರ್ಯದರ್ಶಿ ರಾಮಣ್ಣ ವನ್ನೂರು , ತಾಂತ್ರಿಕ ಸಹಾಯಕ ಶಿವಾನಂದ ನಂದೆಣ್ಣವರ, ಐಇಸಿ ಸಂಯೋಜಕಿ ಎಸ್ ಬಿ ಜವಳಿ, ಅಕ್ಬರ್ ಅತ್ತಾರ, ಮಂಜನಾಥ ಪೂಜಾರ, ಸುಂದರ ತೆಳಗಡೆ, ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.

0 Comments