ಟೆಕ್ವಾಂಡೋ ಚಾಂಪಿಯನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಚನ್ನಮ್ಮನ ಕಿತ್ತೂರಿನ ಕುಮಾರಿ ಸುಪ್ರಿಯಾ ಹನಮಂತ ಲಂಗೋಟಿ ಇವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕಿತ್ತೂರಿನ ಯುವ ಪ್ರತಿಭೆಗಳು ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಕ್ರಿಯಾಶೀಲರಾದೆರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸುತ್ತ ತಮ್ಮ ಈ ಸಾಧನೆಗೆ ತಂದೆ ತಾಯಿಗಳ,ಗುರು ಹಿರಿಯರ ಮತ್ತು ಸ್ನೇಹಿತರ ಪ್ರೋತ್ಸಾಹಗಳೇ ಕಾರಣ ಎಂದು ತಿಳಿಸುತ್ತಾ ಗೌರವ ಸನ್ಮಾನ ನೀಡಿದ ಪೂಜ್ಯರಿಗೆ ಮತ್ತು ಸಂಘಟಿಕರಿಗೆ ಧನ್ಯವಾದಗಳನ್ನು ತಿಳಿಸಿದರು. ಕಿತ್ತೂರ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎ.ಆರ್.ಕುಬಸದ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಈ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಕಲ್ಮಠದ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಾಸಿಕ ಶಿವಾನುಭವ ಕಾರ್ಯಕ್ರಮ ಬಹು ಸುಂದರ ಹಾಗೂ ಅರ್ಥ ಪೂರ್ಣವಾಗಿ ನಡೆಯುತ್ತಿರುದಕ್ಕೆ ಹರ್ಷ ವ್ಯಕ್ತ ಪಡಿಸಿದರು.
ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ನಮ್ಮಲ್ಲಿ ಆಚರಿಸಲಾಗುತ್ತಿರುವ ಪ್ರತಿಯೊಂದು ಹಬ್ಬವು ತನ್ನದೇ ಆದ ವೈಶಿಷ್ಟö್ಯ್ಯವನ್ನು ಹೊಂದಿದ್ದು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸಲು ಪ್ರತಿಯೊಬ್ಬರು ಸಡಗರ ಸಂಭ್ರಮಗಳಿAದ ಆಚರಿಸುವಂತಾಗಬೇಕು ಎಂದು ಆಶೀರ್ವದಿಸುತ್ತಾ ಬಂಗಾರದ ಪದಕ ಮತ್ತು ಬೆಳ್ಳಿ ಪದಕ ಪಡೆದ ಕಿತ್ತೂರಿನ ಯುವ ಪ್ರತಿಭೆಗಳಿಗೆ ಶುಭ ಕೋರಿದರು. ಶ್ರೀ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶ್ರೀಮತಿ ಅನ್ನಪೂರ್ಣಾ ಹೊಸಪೇಟಿ ಸ್ವಾಗತಿಸಿದರು. ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಮಾಸಿಕ ಶಿವಾನುಭವದ ಉದ್ದೇಶಗಳನ್ನು
ಅರಿತ್ತು ಅತಿಥಿಗಳನ್ನು ಪರಿಚಯಿಸುವದರ ಜೊತೆಗೆ ಪ್ರತಿ ತಿಂಗಳು ನಡೆಯುತ್ತಿರುವ ಮಾಸಿಕ ಶಿವಾನುಭವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿರುವ ಪ್ರತಿಯೊಬ್ಬರಿಗೆ ಧನ್ಯವಾದಗಳನ್ನು ತಿಳಿಸಿದರು. ಪ್ರತಿ ತಿಂಗಳು ಮನಡೆಯುತ್ತಿರುವ ಶಿವಾನುಭವ ಕಾರ್ಯಕ್ರಮಗಳ ಛಾಯಾ ಚಿತ್ರಗಳನ್ನು ಒಳಗೊಂಡಿರುವ ಅಲ್ಬಮ್ ನ್ನು ಪೂಜ್ಯರು ಬಿಡುಗಡೆಗೊಳಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ಈಶ್ವರ ಗಡಿಬಿಡಿ, ಶ್ರೀ ಪ್ರಲ್ಹಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳಿ, ರಾಣಿ ಚನ್ನಮ್ಮ ಮಹಿಳಾ ವೇದಿಕೆ ಮತ್ತು ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ಮಂಡಳದವರಿAದ ಸಂಗೀತ ಕಾರ್ಯಕ್ರಮಗಳು ಜರುಗಿದವು.ಹಿರೇನಂದಿಹಳ್ಳಿಯ ಪ್ರೌಢ ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ಬಸವರಾಜ ಬಿದರಿ ವಂದಿಸಿದರು. ಶ್ರೀ ಬಸವಪ್ರಭು ಪಾಟೀಲ ನಿರೂಪಿಸಿದರು..ಸಮಾರಂಭದಲ್ಲಿ ಕಿತ್ತೂರ ನಾಡಿನ ಹಿರಿಯರಾದ ಶ್ರೀ ಅರುಣಕುಮಾರ ಬಿಕ್ಕಣ್ಣವರ, ಶ್ರೀ ಯಲ್ಲಪ್ಪ ವಕ್ಕುಂದ, ಶ್ರೀ ಸುನೀಲ ಸಾಣಿಕೊಪ್ಪ, ಶ್ರೀ ಹನುಮಂತ ಲಂಗೋಟಿ ,ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ನಾಡಿನ ಶರಣ ಶರಣೆಯರು ಉಪಸ್ಥಿತರಿದ್ದರು.
0 Comments