ಕಿತ್ತೂರು ವಿಜಯ ಸುದ್ದಿ ಸಾಗುವಳಿ ಭೂಮಿ ಬಿಟ್ಟು ಕೊಡುವುದಿಲ್ಲ ರೈತ ಮುಖಂಡರು ಬಿಷ್ಟಪ್ಪ ಶಿಂದೆ.

ಸಾಗುವಳಿ ಭೂಮಿ ಬಿಟ್ಟು ಕೊಡುವುದಿಲ್ಲ ರೈತ ಮುಖಂಡರು ಬಿಷ್ಠಪ್ಪ ಶಿಂಧೆ
ಚನ್ನಮ್ಮನ ಕಿತ್ತೂರು:- ತಾಲೂಕಿನ ದೇಗಾಂವ ಗ್ರಾಮದ 14 ರೈತರು ಸುಮಾರು 80 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ.  ಈ ಭೂಮಿಯ ಪಕ್ಕದಲ್ಲಿ ಇರುವ ಸಾಗುವಳಿ ಇರುವ ಭೂಮಿಯನ್ನು  ರೈತರು ಕಾನೂನ ಮೂಲಕ ಪಹಣಿ ಪತ್ರದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಅದೇ ಪ್ರಕಾರ ಈ 14 ಜನ ರೈತರ ಭೂಮಿಯ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ರೈತರು ಉಳುಮೆ ಮಾಡಿದ ಭೂಮಿಯನ್ನು ಬಿಡುವ ಪ್ರಶ್ನೆ ಇಲ್ಲ ಎಂದು ರೈತ ಮುಖಂಡ ಬಿಷ್ಠಪ್ಪ ಶಿಂಧೆ ಹೇಳಿದರು.
ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ದಿಡೀರನೆ ಅರಣ್ಯ ಇಲಾಖೆಯ ಅಧಿಕಾರಿಗಳು 12 ಜೆಸಿಬಿ ಯಂತ್ರಗಳನ್ನು ತಂದು ರೈತರ ಭೂಮಿಯನ್ನು ತೆರವುಗೊಳಿಸಲು ಆಗಮಿಸುತ್ತಿದ್ದರು. ಭೂಮಿಯನ್ನು ಉಳಿಮೆ ಮಾಡುತ್ತಿದ್ದ ಎಲ್ಲ ರೈತರು ತಮ್ಮ ತಮ್ಮ ಕುಟುಂಬ ಸಮೇತವಾಗಿ ಆಗಮಿಸಿ ಉಳುಮೆ ಮಾಡುತ್ತಿದ್ದ ಭೂಮಿಗೆ ಹೋಗುವ ರಸ್ತೆಯ ಮೇಲೆ ವಿಷದ ಬಾಟಲಿ ಕೈಯಲ್ಲಿ ಹಿಡಿದುಕೊಂಡು ಸುಮಾರು 5 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಸುತ್ತಲಿನ ಇನ್ನೂ ಅನೇಕ ರೈತರು ಪ್ರತಿಭಟನೆಗೆ ಬೆಂಬಲ ನೀಡಿದರು.

Post a Comment

0 Comments