ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ಬಿಜೆಪಿ ಸದಸ್ಯನ ಅಪಹರಣ ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ಠಾಣೆ ಮುತ್ತಿಗೆ

 

‌                                                 ಅಪಹರಣಕ್ಕೋಳಗಾದ ನಾಗರಾಜ ಅಸುಂಡಿ 

ಚನ್ನಮ್ಮನ ಕಿತ್ತೂರು: ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪಟ್ಟಣದ 2 ನೇಯ ವಾರ್ಡಿನ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಅಪಹರಣ ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಪಟ್ಟಣದ ಚೌಕಿಮಠದ ಕ್ರಾಸ್ ಹತ್ತಿರ ನಾಗರಾಜ ಅಸುಂಡಿ ಅವರನ್ನು ಅಪರಿಚಿತರು ಅಪಹರಿಸಿದ್ದಾರೆ ಎಂದು ತಂದೆ ಅವರ ಬಸವರಾಜ ಅಸುಂಡಿ ದೂರು ದಾಖಲಿಸಿದ್ದಾರೆ

ಸೆಪ್ಟೆಂಬರ್ 3 ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆ ಇದ್ದು, ಬಿಜೆಪಿ 9 ಕಾಂಗ್ರೆಸ್ನ 5 ಹಾಗೂ 4 ಜನ ಸ್ವತಂತ್ರ ಸದಸ್ಯರು ಆಯ್ಕೆಯಾಗಿದ್ದರು. ಸ್ವತಂತ್ರವಾಗಿ ಆಯ್ಕೆಯಾಗಿದ್ದ 4 ಜನ ಸದಸ್ಯರು ಆಡಳಿತಾರೂಡ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆಯಾಗಿದ್ದು ಸಂಖ್ಯಾಬಲ ಸಮವಾಗಿತ್ತು. ಸಂಖ್ಯಾಬಲ ಹೆಚ್ಚಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರಮುಖರು ಕಿಡ್ನಾಪ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.

                              ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು


ಪ್ರತಿಭಟನೆ: ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಶಾಸಕರ ಚೇಲಾಗಳು ಕಅಪಹರಣ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಗರು ಇಂದು ಚನ್ನಮ್ಮನ ಕಿತ್ತೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಪಕ್ಷವು ಇಂತಹ ನೀಚ ಕೃತ್ಯ ಎಸಗಿದ್ದು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಆದಂತಿದೆ, ಕೃತ್ಯಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕರು ಕುಮಕ್ಕು ನೀಡಿದ್ದಾರೆ, ಘಟನೆಯ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೂಡಲೇ ಇದನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಸ್ಥಳೀಯ ಶಾಸಕರು ಮತ್ತು ಕೃತ್ಯ ಎಸಗಿದ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಿಡ್ನಾಪ್ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ನಾಗರಾಜ್ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಾಗರಾಜ್ ಅಪಹರಣ ಸಂಬಂಧ ಕಿತ್ತೂರ ಶಾಸಕ ಬಾಬಾಸಾಹೇಬ್ ಪಾಟೀಲ್ ಆಪ್ತ ನಿಚ್ಚಣಕಿ ಗ್ರಾಪಂ ಸದಸ್ಯ ಅಶೋಕ ಮಾಳಗಿ, ಮಾಜಿ ತಾಪಂ ಸದಸ್ಯ ಬಸವರಾಜ ಸಂಗೊಳ್ಳಿ ಹಾಗೂ ಸುರೇಶ ಕಡೆಮನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ನಾಗರಾಜ್ ಅಸುಂಡಿ ಅಪಹರಿಸಿದ ಆರೋಪಪಿಗಳ ಪತ್ತೆಗೆ ಮೂರು ತಂಡಗಳ ರಚನೆ ಮಾಡಲಾಗಿದೆ ಎಂದು ಸಿಪಿಐ ಶಿವಾನಂದ ಗುಡಗನಟ್ಟಿ ಮಾಹಿತಿ ನೀಡಿದ್ದು ಆದಷ್ಟು ಬೇಗನೆ ಆರೋಪಿಗಳ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

Post a Comment

0 Comments