ಕಿತ್ತೂರು ವಿಜಯ ಸುದ್ದಿ. 2 ನೂರು ವರ್ಷದ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ಕಿತ್ತೂರಿನ ಶಾಸಕ ಬಾಬಾ ಸಾಹೇಬ್ ಪಾಟೀಲ

200 ನೇ ಕಿತ್ತೂರು ವಿಜಯೋತ್ಸವಕ್ಕೆ ರೂ 40 ಕೋಟಿ; ಅನುದಾನ ಸಚಿವ ಕೃಷ್ಣ ಬೈರೇಗೌಡ

ಚನ್ನಮ್ಮನ ಕಿತ್ತೂರು: ದೇಶದಲ್ಲಿ ಪ್ರಥಮ ಸ್ವಾತಂತ್ರದ ಕಿಚ್ಚು ಹತ್ತಿಸಿದ ಕೀರ್ತಿ ಕಿತ್ತೂರಿನ ರಾಣಿ ಚನ್ನಮ್ಮನಿಗೆ ಸಲ್ಲುತ್ತದೆ. ಈ ಬಾರಿಯ ಉತ್ಸವ 200 ನೇ ವರ್ಷದ ವಿಜಯೋತ್ಸವವಾಗಿದ್ದು 200 ನೇ ವಿಜಯೋತ್ಸವ ರಾಷ್ಟ್ರಮಟ್ಟದ ಉತ್ಸವವಾಗಬೇಕು, ದೇಶದಾತ್ಯಂತ ಜನರು ಚನ್ನಮ್ಮನ ಕಿತ್ತೂರು ನಾಡಿನ ಕಡೆಗೆ ಪ್ರವಾಸಕ್ಕೆ ಆಗಮಿಸುವಂತೆ ಪ್ರಾವಾಸಿ ಹಬ್ಬ ನಿರ್ಮಾಣವಾಗಬೇಕು ಎನ್ನುವದು ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಒತ್ತಾಯವಾಗಿದ್ದು ಈ ವಿಚಾರವಾಗಿ 2024 ನೇ ಸಾಲಿನ ಚನ್ನಮ್ಮನ ಕಿತ್ತೂರು ವಿಜಯೋತ್ಸವವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸೋಮವಾರ ಬೆಂಗಳೂರ ವಿಕಾಸ ಸೌಧದಲ್ಲಿ ಕಂದಾಯ ಸಚಿವ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಅವಿರತ ಪ್ರಯತ್ನದಿಂದ 200ನೇ ಕಿತ್ತೂರು ವಿಜಯೋತ್ಸವದ ಉತ್ಸವಕ್ಕೆ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ತೀಮ ಪಾರ್ಕ್ ನಿರ್ಮಾಣ ಮಾಡಲು ರೂ 35 ಕೋಟಿ ಹಾಗೂ ಉತ್ಸವಕ್ಕೆ ರೂ 5 ಕೋಟಿ ಸೇರಿದಂತೆ ಒಟ್ಟು ರೂ 40 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಿದರು. 
ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿ.ಪಂ. ಸಿ.ಇ.ಓ. ರಾಹುಲ ಶಿಂಧೆ, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ಯೂರೇಟರ್ ರಾಘವೇಂದ್ರ, ಸಂತೋಷ ಹಾನಗಲ್ಲ, ಅಸ್ಪಾಕ ಹವಾಲ್ದಾರ, ಸೇರಿದಂತೆ ಇತರರಿದ್ದರು.

Post a Comment

0 Comments