ಚನ್ನಮ್ಮನ ಕಿತ್ತೂರು: ಇಂದು ಪಟ್ಟಣದ ಖಾಸಗಿ ಆಸ್ಪತ್ರೆಗಳ ಮೇಲೆ ಬೈಲಹೊಂಗಲ ತಾಲೂಕಾ ಆರೋಗ್ಯ ಅಧಿಕಾರಿ ಸಂಜೀವ ಸಿದ್ದನ್ನವರ ಹಾಗೂ ಚನ್ನಮ್ಮನ ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಇಮಾಧ ರಾಜಗೂಳಿ ಅವರ ನೇತೃತ್ವದಲ್ಲಿ ಎರಡು ಖಾಸಗಿ ಆಸ್ಪತ್ರೆಗಳ ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಬಿಎಎಮ್ಎಸ್ ಮತ್ತು ಬಿಎಚ್ಎಮ್ಎಸ್ ವೈದ್ಯಕೀಯ ಶಿಕ್ಷಣ ಕಲೆತು ಕೆಪಿಎಮ್ಇ ನೋಂದಣಿ ಪಡೆಯದೆ ಅನಧಿಕೃತವಾಗಿ ಅಲೋಪಥಿಕ್ ಮೆಡಿಸನ್ ಪ್ರ‍್ಯಾಕ್ಟೀಸ್ ಮಾಡುತ್ತಿದ್ದ ಕಿತ್ತೂರು ಪೊಲೀಸ್ ಠಾಣೆ ಹತ್ತಿರ ಬಳೆಗಾರ ಓಣಿಯಲ್ಲಿ ಇರುವ ಡಾ ಮಹೇಶ ಹಟ್ಟಿಹೊಳಿ ಅವರ ಧನ್ವಂತರಿ ಆಸ್ಪತ್ರೆ ಹಾಗೂ ಗುರುವಾರ ಪೇಠೆಯ ರೈತರ ಓಣಿ ಕ್ರಾಸ್ ಹತ್ತಿರ ಇರುವ ಡಾ ಇಬ್ರಾಹೀಂ ಜಮಾದಾರ ಅವರ ಜಮಾದಾರ ಆಸ್ಪತ್ರೆಯನ್ನು ತಪಾಸಣೆ ಮಾಡಿ ಕೆಪಿಎಂಇ ನೊಂದಣಿ ಪಡೆದು ಪುನಃ ಪ್ರಾಕ್ಟೀಸ್ ಮಾಡಲು ಸೂಚಿಸಲಾಯಿತು ಎಂದು ಬೈಲಹೊಂಗಲ ತಾಲೂಕಾ ಆರೋಗ್ಯ ಅಧಿಕಾರಿ ಸಂಜೀವ ಸಿದ್ದನ್ನವರ ತಿಳಿಸಿದ್ದಾರೆ.
“ಕಿತ್ತೂರು ಮಟ್ಟಣದಲ್ಲಿ ಸುಮಾರು 38 ಆಸ್ಪತ್ರೆಗಳು ಇದ್ದು ಕೇವಲ 22 ಜನರು ಕೆಪಿಎಂಇ ನೊಂದಣಿ ಪಡೆದಿದ್ದಾರೆ ಇನ್ನುಳಿದವರು ಕೆಪಿಎಂಇ ನೊಂದಣಿ ಪಡೆದಿಲ್ಲ.” ಸಂಜೀವ ಸಿದ್ದನ್ನವರ ತಾಲೂಕಾ ಆರೋಗ್ಯ ಅಧಿಕಾರಿ ಬೈಲಹೊಂಗಲ

0 Comments