Kitturu : ಶಿಶು ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟ ಹೆಣ್ಣು ಹಸುಗೂಸಿನ ಸಾವಿಗೆ ಯಾರು ಹೊಣೆ ?


ಶಿಶು ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟ ಹೆಣ್ಣು ಹಸುಗೂಸಿನ ಸಾವಿಗೆ ಯಾರು ಹೊಣೆ ?

ಚನ್ನಮ್ಮನ ಕಿತ್ತೂರು :- ಬೆಳಗಾವಿ ರಾಮತಿರ್ಥ ನಗರದಲ್ಲಿ ನಡೆದಿದ್ದ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಎಲ್ಲರಿಗೂ ತಿಳಿದ ವಿಷಯ.

ಶಿಶು ಮಾರಾಟ ಜಾಲವನ್ನು ಪತ್ತೆಹಚ್ಚಲು ಮುಂದಾದ ಅಧಿಕಾರಿಗಳು  ಮಹಾದೇವಿ ಎಂಬ ಯುವತಿಯ ಹತ್ತಿರ ಇರುವ ಕೇವಲ 30 ದಿನದ ಹೆಣ್ಣು ಮಗು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗು ಮಾರಾಟದ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಆ ಮಗುವಿನ ಆರೈಕೆ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ  ಇಡಲಾಗಿತ್ತು.

ಮಾರಾಟ ಆಗುತ್ತಿದ್ದ  ಶಿಶು ಲಾಡಖಾನ ವೈದ್ಯನ ಹತ್ತಿರ ಒಂದು ತಿಂಗಳ ಆರೈಕೆ ಯಾಗಿದ್ದು ಪುಷ್ಟಿಕರವಾದ ಮಗುವನ್ನು ಮಾರುವ ಸಮಯದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿತ್ತು. 

ಸರಕಾರಿ ವೈದ್ಯರು ಮಗುವಿಗೆ ಅತಿ ಹೆಚ್ಚಿನ ಕಾಳಜಿ ಹಾಗೂ  ಉತ್ತಮ ಚಿಕಿತ್ಸೆ ನೀಡಿ ಮಗುವನ್ನು ರಕ್ಷಿಸಿ ಮಗುವಿಗೆ ಒಂದು ಉತ್ತಮ ಭವಿಷ್ಯ ನೀಡಬಹುದಿತ್ತು. ಆದರೆ ಯಾವುದೇ ಹೆಚ್ಚಿನ ಸೌಲಭ್ಯಗಳಿಲ್ಲದೆ  ಲಾಡಖಾನ್ ಹತ್ತಿರ ಇದ್ದ ಮಗು ಒಂದು ತಿಂಗಳು  ಆರೈಕೆ ಯಾಗಿತ್ತು. ಸರ್ಕಾರಿ ಅಧಿಕಾರಿಗಳ ಆಧೀನದಲ್ಲಿದ್ದ ಹಸುಗುಸುಗೆ ಎಲ್ಲ ಸೌಲಭ್ಯ ಸೌಕರ್ಯಗಳು ಇದ್ದರೂ ಸಹ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಜನರ ಮಾತು ಕೇಳಿ ಬರುತ್ತಿದೆ , 

ಮಗು ಅನಾಥ ವಾದಲ್ಲಿ ಆ ಮಗುವನ್ನು ಅತಿ ಹೆಚ್ಚಿನ ಕಾಳಜಿ ವಹಿಸಿ ರಕ್ಷಿಸಲು ಮುಂದಾಗುವ ಅಧಿಕಾರಿಗಳು ಈ ಪ್ರಕರಣದಲ್ಲಿ ಮಗುವನ್ನು ರಕ್ಷಿಸಲು ಹೇಗೆ ಸಾಧ್ಯವವಾಗಿಲ್ಲ ಎಂಬುವುದು ಒಂದು ಜನರ ಪ್ರಶ್ನೆ ಆಗಿದೆ.

ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ  ಮಗುವಿನ ಚಿಕಿತ್ಸೆ ಸರಿಯಾದ ಮಟ್ಟಿನಲ್ಲಿ ನಡೆದಿಲ್ಲ ಎಂದು ಖಚಿತ ಅನಿಸುತ್ತಿದೆ. ಈ ಮಗುವಿಗೆ ಆದ ಪರಿಸ್ಥಿತಿಯು ಕುಟುಂಬಸ್ಥರ ಮಗುವಿಗೆ ಆಗಿದ್ದರೆ ? 

ಆ ಕುಟುಂಬಸ್ಥರು ಅಧಿಕಾರಿಗಳಿಗೆ ಸರಿಯಾದ ಪಾಠ ಕಳಿತ್ತಿದ್ದರು.

ಆದರೆ ಈ ಪ್ರಕರಣದಲ್ಲಿ ಮಗುವಿನ ತಂದೆ ತಾಯಿ ಸಾಕುತ್ತಿದ್ದ ವೈದ್ಯ ಜೈಲು ಪಾಲಾದರೆ ಮಗುವಿಗೆ ಸಾವೇ ನಿಶ್ಚಿತವೆ ?

ಈ ಹಿಂದೆ ಹಿರಿಯರು ಮಾಡಿದ ಒಗಟಿನಂತೆ ಗಂಡ ಹೆಂಡರ ನಡುವೆ ಕೂಸು ನಾಶ ಎಂಬಂತೆ ನಕಲಿ ಹಾಗೂ ಅಸಲಿ ವೈದ್ಯರ ನಡುವೆ ಕೂಸು ನಾಶ ವಾಯಿತೆ ?

‌ಸಂಬಂಧ ಪಟ್ಟ ಮೇಲಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸುಗೂಸಿನ ಪ್ರಾಣದ ಜೊತೆ ಆಟವಾಡಿದಾರೆ ಎಂಬುವುದು ತಿಳಿಯಬೇಕಾಗಿದೆ ಜಿಲ್ಲಾಸ್ಪತ್ರೆಯಲ್ಲಿ ಆ ಮಗುವಿಗೆ ಈ ತರಹದ ಚಿಕಿತ್ಸೆ ನೀಡಿರುವ ವೈದ್ಯರು ಜನ ಸಾಮಾನ್ಯರಿಗೆ ಯಾವ ತರಹದ ಚಿಕಿತ್ಸೆ ನೀಡುತ್ತಾರೋ ಎಂಬುವುದು ತಿಳಿಯುತ್ತಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


Post a Comment

0 Comments