ಕಿತ್ತೂರು ವಿಜಯ
ಬೆಳಗಾವಿ : ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ ತವರು ಮನೆ ವಂಶಸ್ಥರಾದ ಕಾಕತಿ ಗ್ರಾಮದ ನೀಲಮ್ಮ ಈರಗೋoಡ ದೇಸಾಯಿ (91) ಇಂದು ಲಿಂಗೈಕ್ಯರಾಗಿದ್ದಾರೆ.
ಮೃತ ನೀಲಮ್ಮ ದೇಸಾಯಿ ಅವರಿಗೆ ಮೂರು ಗಂಡು ಮಕ್ಕಳು, ಒರ್ವ ಹೆಣ್ಣು ಮಗಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗನ್ನು ಅಗಲಿದ್ದಾರೆ.
ಇವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮಣ್ಣು ತಾವು ತೊಡಗಿಸಿಕೊಂಡು ಸಾರ್ವಜನಿಕರಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡುವ ಮೂಲಕ ಗ್ರಾಮಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.
ಹಿರಿಯರಾದ ರಾಚಯ್ಯ ಶಿವಪೂಜೆ, ಉದಯ, ಹಿರೇಮಠ ತಾಲೂಕಾ ಪಂಚಾಯತ್ ಮಾಜಿ ಸದಸ್ಯ ಯಲ್ಲಪ್ಪ ಕೋಳೆಕರ, ಕಾಕತಿ ಗ್ರಾಮದ ಪ್ರಮುಖರು, ಗುರುಹಿರಿಯರು ರಾಜಕೀಯ ನಾಯಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇನ್ನೂ ಅನೇಕರು ತಾಯಿ ನೀಲಮ್ಮ ದೇಸಾಯಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
0 Comments