ಕಿತ್ತೂರು ವಿಜಯ
ಚನ್ನಮ್ಮನ ಕಿತ್ತೂರು: ನೀವು ಗುಡಿಗಳ ಅಭಿವೃದ್ಧಿ ಮಾಡಿ ನಾನು ಶಾಲೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಐತಿಹಾಸಿಕ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಕೆಲವು ದಿನಗಳ ಹಿಂದೆ ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳುವ ಮೂಲಕ ರಾಜ್ಯದಾಧ್ಯಂತ ಸುದ್ದಿಯಾಗಿದ್ದರು. ಅವರು ಹೇಳಿದ ಮಾತಿನಂತೆ ತಾಲೂಕಿನ ಹೊಸ ಕಾದರವಳ್ಳಿ ಗ್ರಾಮದ ಶ್ರೀ ಎಸ ವಿ ಕುಲಕರ್ಣಿ ಸರಕಾರಿ ಪ್ರೌಢ ಶಾಲೆಗೆ ಅಭಿವೃದ್ಧಿಯ ಕಾಮಗಾರಿಗಳನ್ನು ಮಂಜೂರು ಮಾಡಿಸಿ ಶಾಲೆಯನ್ನು ಮಾದರಿ ಪ್ರೌಢಶಾಲೆಯ ಪಥದತ್ತ ಸಾಗಿಸಿದ್ದಾರೆ.
ಶಾಲೆ ಪ್ರಾರಂಭವಾಗಿ ಸುಮಾರು 20 ವರ್ಷ ಕಳೆದರು ಮೂಲಭೂತ ಸೌಕರ್ಯಯಗಳಾದ ಕುಡಿಯುವ ನೀರು, ಶೌಚಾಲಯ, ಹಾಗೂ ಶಾಲೆಗೆ ಸುರಕ್ಷ ಗೋಡೆ ಮತ್ತು ಮುಖ್ಯದ್ವಾರ ಹಾಗೂ ಅದಕ್ಕೆ ಗೇಟು ಇಲ್ಲದ ಕಾರಣ ಕಳ್ಳತನದ ಸಮಸ್ಯೆ ಹಾಗೂ ಕೊಠಡಿಗಳ ಸಮಸ್ಯೆ ಗಮನಿಸಿ ಶಾಸಕರ ಗಮನಕ್ಕೆ ತಂದಾಗ ಅದಕ್ಕೆ ತುರ್ತಾಗಿ ಸ್ಪಂದಿಸಿದ ಅವರು ಕೇವಲ ಐದಾರು ತಿಂಗಳುಗಳಲ್ಲಿ ಅಂದಾಜು ರೂ 20 ಲಕ್ಷ ಅನುದಾನದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ, ಮುಖ್ಯದ್ವಾರ, ಗೇಟ್, ಎರಡು ಕೊಠಡಿಗಳ ಮೇಲ್ಚಾವಣಿಗೆಗಳಿಗೆ ಶೀಟ್ ಹೊದಿಕೆ, ಕೊಳವೆಬಾವಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಶಾಲೆಯ ಚಿತ್ರಣವನ್ನು ಬದಲು ಮಾಡಿದ್ದಾರೆ.
ಅವರ ಈ ಕಾರ್ಯಕ್ಕೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಸಮಸ್ತ ಗ್ರಾಮಸ್ಥರು ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಅಭಿನಂದಿಸಿದ್ದಾರೆ.
0 Comments