ಹೊಸೂರ ಗ್ರಾಮದ ಸಮಾಜಸೇವಕ ದುಂಡಪ್ಪ ಬಾಳೆ ಕುಂದರಗಿ ನಿಧನ

ಕಿತ್ತೂರು ವಿಜಯ 
ಬೈಲಹೊಂಗಲ : ಸಮೀಪದ ಹೊಸೂರ ಗ್ರಾಮದ ಸಮಾಜ ಸೇವಕ ದುಂಡಪ್ಪಾ ಬಸಪ್ಪಾ ಬಾಳೇಕುಂದರಗಿ (84) ನಿಧನರಾದರು. 
ಮೃತರು ನಾಲ್ಕು ಜನ ಪುತ್ರರು ಸೇರಿದಂತೆ 
ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತ ದುಂಡಪ್ಪಾ ಅವರು, ಹೊಸೂರ ಗ್ರಾಮದಲ್ಲಿ ಹಿರೆತನ ಮಾಡುತ್ತಿದ್ದರು. ನ್ಯಾಯ, ನೀತಿಗೆ ಹೆಸರುವಾಸಿಯಾಗಿದ್ದರು. ಜೀವನದುದ್ದಕ್ಕೂ ಸಮಾಜಮುಖಿ
ಕಾರ್ಯಗಳನ್ನು ಮಾಡುವ ಮೂಲಕ ಪ್ರಸಿದ್ಧಿ
ಪಡೆದಿದ್ದರು. ಸಾವಿರಾರು ಪುಣ್ಯಕಾರ್ಯಗಳನ್ನು ಮಾಡಿದ ಕೀರ್ತಿ ಮೃತ ದುಂಡಪ್ಪಾ ಅವರಿಗೆ ಸಲ್ಲುತ್ತದೆ.
ಮೃತ ದುಂಡಪ್ಪ ಅವರ ಕುಟುಂಬಕ್ಕೆ ರಾಜಕೀಯ ನಾಯಕರು,  ಮಠಾಧೀಶರು, ಗಣ್ಯಮಾನ್ಯರು ಸಂತಾಪ ಸೂಚಿಸಿದ್ದಾರೆ.

Post a Comment

0 Comments