ಅತ್ಯಾಚಾರ ಪ್ರಕರಣದಲ್ಲಿ ವಿದೇಶಕ್ಕೆ ತೆರಳಿದ್ದ. ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲಿಮೆರಿಸಿಕೊಂಡಿದ್ದರು. ಇಂದು ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ ಇಂದು ಲುಕ್ಯಾನ್ ಏರ್ಲೈನ್ಸ್ ವಿಮಾನದ ಬ್ಯುಸಿನಸ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 2 ಗಂಟೆಗೆ ಜರ್ಮನಿಯಿಂದ ವಿಮಾನ ಹೊರಡಲಿದ್ದು ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಎಸ್ಐಟಿ ತಂಡದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದಾರೆಂದು ತಿಳಿದು ಬಂದಿದೆ.ಈ ಹಿಂದೆ ಹಲವಾರು ಸಲ ಟಿಕೆಟ್ ಬುಕ್ ಮಾಡಿ. ಕ್ಯಾನ್ಸಲ್ ಮಾಡಿದ ಪ್ರಜ್ವಲ್ ರೇವಣ್ಣ. ಈಗ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು ಒಟ್ಟಿನಲ್ಲಿ ಇಂದು ಬೆಂಗಳೂರಿಗೆ ಮಧ್ಯರಾತ್ರಿ ಬರುವ ನಿರೀಕ್ಷೆ ಇದೆ
ಕಿತ್ತೂರು ವಿಜಯ ಸುದ್ದಿ. ಬೆಂಗಳೂರು.
0 Comments