ಕಿತ್ತೂರು ವಿಜಯ
ಬೈಲಹೊಂಗಲ : ದನ-ಕರುಗಳಿಗೆ ಮೇವಿನ ಕಣಿಕೆ ಹೊತ್ತು ಸಾಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿಗೆ ಆಹುತಿಯಾದ ಘಟನೆ ಸಮೀಪದ ಇಂಚಲ ರಸ್ತೆಯಲ್ಲಿ ಸೋಮವಾರ ಸಂಜೆ ಜರುಗಿತು. ಆಕಸ್ಮಿಕ ಬೆಂಕಿ ಬೆಂಕಿಯನ್ನು ನೊಂದಿಸಲು ಹರಸಾಹಸ ಪಟ್ಟ ಅಗ್ನಿಶಾಮಕ ದಳದವರು.ಇದು ಇಂಚಲ ಗ್ರಾಮದಲ್ಲಿ ಆಗುತ್ತಿರುವ ಮೂರನೆಯ ದುರಂತವಾಗಿದೆ. ಇದಕ್ಕೆ ಕೆಇಬಿ ಇಲಾಖೆಯವರ ನಿರ್ಲಕ್ಷತನವೇ ಕಾರಣವಾಗಿದೆ. ಎಲ್ಲಿ ನೋಡಿದರಲ್ಲಿ ಲೈಟು ಕಂಬಗಳ ತಂತಿಯ ವಾಯರಗಳು ಕೆಳಗೆ ಜೂತು ಬಿದ್ದಿವೆ. ಕೆ.ಇ.ಬಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಡೆಗೆ ಸ್ವಲ್ಪ ಗಮನಹರಿಸಬೇಕು.
ಇದು ಇಂಚಲ ಗ್ರಾಮದಲ್ಲಿ ಆಗುತ್ತಿರುವ ಮೂರನೆಯ ದುರಂತವಾಗಿದೆ.
ಲಾರಿಯು ಇಂಚಲ ರಸ್ತೆ ಮಾರ್ಗವಾಗಿ ಯರಗಟ್ಟಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ವಿದ್ಯುತ್ ತಂತಿ ತಗುಲಿದೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣವೆಂದು ಸಾರ್ವಜನಿಕರು ದೂರಿದ್ದಾರೆ. ಈ ಕುರಿತು ಅವರಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಕೂಡಾ ಪ್ರಯೋಜನವಾಗಿಲ್ಲೆಂದು ಆರೋಪಿಸಿದರು. ಕಣಿಕೆಗೆ ಹತ್ತಿದ ಬೆಂಕಿ ಜ್ವಾಲೆಯಂತೆ ಹೊತ್ತಿ ಊರಿಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿಲು ಹರಸಾಹಸ ಪಟ್ಟರು. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಠಾಣಾಧಿಕಾರಿ ತಿಪ್ಪಣ್ಣಾ ನಾವದಗಿ ತಿಳಿಸಿದರು. ಲಾರಿಗೆ ಬೆಂಕಿ ಹತ್ತಿದ್ದನ್ನು ವಾಹನ ಸವಾರರು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟರು. ಲಾರಿ ಅರ್ಧಭಾಗ, ಕಣಿಕೆ ಸುಟ್ಟು ಕರಕಲಾಯಿತು.


0 Comments