ಚನ್ನಮ್ಮನ ಕಿತ್ತೂರು-೧೭ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ, ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಛಾಪನ್ನು ಮೂಡಿಸಿದ್ದಾರೆಂದು ಮಂಜುಳಾ.ಮ.ದೊಡ್ಡಗೌಡರ ಹೇಳಿದರು.
ಪಟ್ಟಣದ ಕಲ್ಮಠ ಚಂದರಗಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರಾಣಿಚನ್ನಮ್ಮ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತ, ಕದಳಿ ಮಹಿಳಾ ವೇದಿಕೆ ಮತ್ತು ಶರಣ ಸಾಹಿತ್ಯ ಪರಿಷತ್ತ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ದೀಪ ಬೆಳಗಿಸಿ ಉದ್ಘಾಟಸಿ ಮಾನಾಡಿದವರು ಮಹಿಳೆಯರ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಸಂಯುಕ್ತ ರಾಷ್ಟçಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದರು. ದೌರ್ಜನ್ಯ ತಡೆಹಿಡಿಯಲು, ವಿರೋಧಿಸಲು ಹೆಣ್ಣು ಮಕ್ಕಳಿಗೆ ನಾವು ಶಿಕ್ಷಣ, ಧೈರ್ಯ, ಜಾಗೃತಿ, ಸಂಸ್ಕಾರ, ಜ್ಞಾನವೆಂಬ ಖಡ್ಗ ನೀಡಬೇಕೆಂದರು.
ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷಣಿ ಶಿಕ್ಷಕಿ ಮೀನಾಕ್ಷಿ ಸೂಡಿ ಉಪನ್ಯಾಸ ನೀಡಿ ಮಾತನಾಡಿದವರು. ಪ್ರತಿ ವರ್ಷ ಮಾರ್ಚ್ ೮ ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ ಇದಾಗಿದೆ. ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆಂದರು.
ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಬದಲಾವಣೆ ಎಂಬುವುದು ನಮ್ಮ ಮನೆಯಿಂದ ಪ್ರಾರಂಭವಾಗಿದೆ ಎಂದು ನಗೆ ಹಾಸ್ಯದ ಮೂಲಕ ಅವರಧರ್ಮಪತ್ನಿಯ ಮಾತುಗಳನ್ನು ನೆನೆದರು. ತಂದೆ ಮಕ್ಕಳನ್ನು ಬೆಳೆಸಿದರೆ ತಾಯಿ ಸಂಸ್ಕಾರ ನೀಡುತ್ತಾಳೆ. ತಾಯಿಯಲ್ಲಿ ತಾಳ್ಮೆಯಿರುತ್ತದೆ. ಎಂತಹ ಕಷ್ಟ ಬಂದರು ಎಲ್ಲವನ್ನು ತಾಳ್ಮೆಯಿಂದ ಪರಿಹರಿಸುತ್ತಾಳೆ ಹೆಣ್ಣುಮಕ್ಕಳು ತಮಗೆ ವಹಿಸಿದ ಕೆಲಸವು ಅಚ್ಚುಕಟ್ಟಾಗಿ ಮಾಡುತ್ತಾರೆ. ಗಂಡುಮಕ್ಕಳಿಗೆ ಹೆಗಲಿಗೆ ಹೆಗಲಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಮಹಿಳೆಯರಿಗೆ ಗೌರವ ಕೊಟ್ಟಾಗ ಮಾತ್ರ ಮಹಿಳಾ ದಿನಾಚರಣೆ ಆಚರಿಸಿದ್ದು ಸಾರ್ಥಕವಾಗುತ್ತದೆ ಅದಕ್ಕಾಗಿ ಹೆಣ್ಣುಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಧಾ ಮೂರ್ತಿಯವರನ್ನು ಸಜಸಭಾ ಸದಸ್ಯರನ್ನಾಗಿ ಮಾಡಿದ್ದಾರೆಂದರು.
ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಕಲ್ಮಠದ ಮಡಿವಾಳ ರಾಜಯೊಂಗೀದ್ರ ಸ್ವಾಮಿಜಿ ಹೆಣ್ಣುಮಕ್ಕಳನ್ನು ಪೂಜಿಸುವ ದೇಶ ಅದು ಭಾರತ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಲ್ಲಿ ನಾವು ಹಿಂದುಳಿದಿದ್ದು ಮಕ್ಕಳಿಗೆ ರಾಮಾಯಾಣ, ವiಹಾಭಾರತದಂತಹ ಕಥೆಗಳನ್ನು ಹೇಳಬೇಕು. ಅದರಿಂದ ಅವರಲ್ಲಿ ಸಂಸ್ಕಾರ ಬರುತ್ತದೆ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂದಿರುತ್ತಾರೆ. ಅವಕಾಶ ಸಿಕ್ಕಾಗ ಹೆಣ್ಣುಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕನ್ನಡ ಸಾಹಿತ್ಯ ಪರಿµತ್ತ ತಾಲೂಕಾಧ್ಯಕ್ಷ ಪ್ರೋ. ಎಸ್.ಬಿ. ದಳವಾಯಿ ಪ್ರಾಸ್ತಾವಿಕನುಡಿಯನ್ನಾಡಿದರು. ಇನ್ನು ಅನೇಕ ಅಥಿತಿಗಳು ಮಾತನಾಡಿದರು.
ಈ ವೇಳೆ ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಮಹಿಳಾ ಸಂಘಟನೆ ಸೇರಿದಂತೆ ಕಿತ್ತೂರ ಗಣ್ಯರು, ಮಹಿಳೆಯರು, ವಿವಿಧ ಮಹಿಳಾ ಸಂಘಟನೆಗಳು, ಸಾರ್ವಜನಿಕರು, ಪತ್ರಕರ್ತ, ಉದ್ಯಮಿ ಬಸವರಾಜ ಚಿನಗುಡಿ, ಗಂಗಣ್ಣಾ ಕರಿಕಟ್ಟಿ, ಸೇರಿದಂತೆ ಅನಕರಿದ್ದರು. ರಂಜನಾ ಬುಲಬುಲೆ ನಿರೂಪಿಸಿ ಸ್ವಾಗತಿಸಿದರು. ಸುಧಾ ಅಂಕಲಗಿಮಠ ವಂದಿಸಿದರು.
0 Comments