ಪೂರ್ವಭಾವಿ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಕ್ಯಾಪ್ಟನ್ ಶ್ರೀನಿವಾಸಗೌಡ ಮಾತನಾಡಿ ಏ 12 ರಂದು ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏ 19 ಕೊನೆಯ ದಿನವಾಗಿದೆ. ಏ 20 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಏ 22 ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದ್ದು ಮೇ 7 ರಂದು ಮತದಾನ ನಡೆಯಲಿದೆ. ಜೂನ 4 ರಂದು ಮತ ಎಣಿಕೆ ಮಾಡಲಾಗುವುದು ಜೂನ 6 ರಂದು ಚುನಾವಣಾ ಪ್ರಕ್ರೀಯೆ ಮುಕ್ತಾಯವಾಗುತ್ತದೆ ಎಂದು ಮಾಹಿತಿ ನೀಡಿದರು.
15- ಚನ್ನಮ್ಮನ ಕಿತ್ತೂರು ಮತಕ್ಷೇತ್ರದಲ್ಲಿ 100009 ಗಂಡು ಮಕ್ಕಳು, 98953 ಹೆಣ್ಣು ಮಕ್ಕಳು ಇತರೆ 4 ಸೇರಿ ಒಟ್ಟು 198966 ಮತದಾರರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 1539 ಜನ ಮತದಾರರು 85 ವರ್ಷ ಮೇಲ್ಪಟ್ಟವರು, 4226 ಜನ ಪಿಡಬ್ಲೂಡಿ, 1565 ಸೇವಾ ನಿರತ ಹಾಗೂ 5186 ಯುವ ಮತದಾರರು ಇದ್ದಾರೆ. ಒಟ್ಟು 138 ಮತಗಟ್ಟೆ ಸ್ಥಳದಲ್ಲಿ 230 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರೀಯೆ ನಡೆಯಲಿದ್ದು 5 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿವೆ ಎಂದು ತಿಳಿಸಿದರು.
ಚನ್ನಮ್ಮನ ಕಿತ್ತೂರು ಮತಕ್ಷೇತ್ರದಲ್ಲಿ ಕುಲವಳ್ಳಿ ಕ್ರಾಸ್, ರಾಷ್ಟ್ರೀಯ ಹೆದ್ದಾರಿ-4 (ಶಿವ ಪೆಟ್ರೋಲ್ ಪಂಪ್ ಹತ್ತಿರ) ಹಾಗೂ ನೇಸರಗಿ ಕ್ರಾಸ್ ಹತ್ತಿರ ಮೂರು ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಚುನಾವಣಾ ಅಕ್ರಮ ತಡೆಯಲು 9 ಜನ ಸದಸ್ಯರನ್ನು ಹೊಂದಿದ 3 ಪ್ಲೈಯಿಂಗ್ ಸ್ಕ್ವಾಡ್, 9 ಜನ ಸದಸ್ಯರನ್ನು ಹೊಂದಿದ 3 ಎಸ್ಎಸ್ಟಿ, 02 ವಿಎಸ್ಟಿ,1 ವಿವಿಟಿ, 18 ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಒಬ್ಬರು ಚುನಾವಣಾ ವೀಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಬ್ಯಾನರ್, ಕಟೌಟ ಸೇರಿದಂತೆ ಇತರೆ ಜಾಹಿರಾತುಗಳ ಫಲಕಗಳನ್ನು ತೆರವುಗೊಳಿಸಲಾಗಿದ್ದು ನದರು ಚೂಕದಿಂದ ಯಲ್ಲಿಯಾದರು ಉಳಿದಿದ್ದರೆ ಅವುಗಳನ್ನು ಇಂದು ಸಾಯಂಕಾಲದೊಳಗೆ ತರವುಗೊಳಿಸಲಾಗುವುದು ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಯಾವುದೇ ತರಹದ ಅಪರಾಧ ಹಾಗೂ ಅಹಿತಕರ ಘಟನೆಗಳು ನಡೆದ್ದು ಕಂಡು ಬಂದರೆ ಸಾರ್ವಜನಿಕರು ಟೋಲ್ ಫ್ರೀ ನಂಬರ್ 1950 ಅಥವಾ 08288286106 ಸಂಖ್ಯೆಗೆ ದೂರವಾಣಿ ಮೂಲಕ ದೂರು ಸಲ್ಲಿಸಬಹುದು. ದೂರು ಸಲ್ಲಿಸಿದವರ ಹೆಸರು ಮತ್ತು ವಿಳಾಸ ಗುಪ್ತವಾಗಿ ಇಡಲಾಗುವುದು ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ರಮೇಶ ರಡ್ಡಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
0 Comments