ಕಿತ್ತೂರ ವಿಜಯ
ಚನ್ನಮ್ಮನ ಕಿತ್ತೂರು: ಐತಿಹಾಸಿ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಇತಿಹಾಸ ಪ್ರಸಿದ್ಧ ಕಿತ್ತೂರು ಸಂಸ್ಥಾನದ ಧ್ವಜದಲ್ಲಿ ವಿರಾಜಮಾನವಾಗಿರುವ ನಾಲ್ಕನೆಯ ಶತಮಾನದ ರಥೋತ್ಸವ ವೈಭವದಿಂದ ಜರುಗಿತು ಧಾರ್ಮಿಕ ಸುಕ್ಷೇತ್ರ ನಂದಿಹಳ್ಳಿ ಉದ್ಭವ (ಶ್ರೀ ನಂದಿಶ್ವರ) ಶ್ರೀ ಬಸವೇಶ್ವರ ಮತ್ತು ಸಂಗಮೇಶ್ವರ ರಥೋತ್ಸವ ಸೋಮವಾರ ವೈಭವದಿಂದ ಜರುಗಿತು.
ಕಿತ್ತೂರು ಸಂಸ್ಥಾನಕ್ಕೆ ಸಂಕಷ್ಟ ಬಂದಾಗ ಸಂಸ್ಥಾನದ ಪ್ರತಿಯೊಬ್ಬ ರಾಜರು ಮತ್ತು ರಾಣಿಯರು ನಂದಿಹಳ್ಳಿ ಬಸವೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಕಷ್ಟವನ್ನು ಪರಿಹರಿಸು ಎಂದು ಪ್ರಾರ್ಥನೆ ಮಾಡುತ್ತಿದ್ದರು. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಿಂದ ವಿಶ್ವಗುರು ಬಸವಣ್ಣನವರ ಅಳಿಯ ಜ್ಞಾನಿ ಚೆನ್ನಬಸವಣ್ಣನವರು ಉಳವಿ ಕ್ಷೇತ್ರಕ್ಕೆ ಹೋಗುವಾಗ ಇಲ್ಲಿ ವಿಶ್ರಾಂತಿ ಪಡೆದು ಇಷ್ಟ ಲಿಂಗ ಪೂಜೆ ಮಾಡಿಕೊಂಡು ಹೋಗಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.
ಪಕ್ಕದ ಖೋದಾನಪೂರ ಗ್ರಾಮದ ಕೆ. ಜಿ. ಚನ್ನವೀರಪ್ಪ ಹಾಗೂ ಪಾರೋತೆವ್ವ ಗುರುಲಿಂಪ್ಪ ಖೊದಾನಪೂರ ಇವರು ಬೆಂಗಳೂರಿನಲ್ಲಿ ಅಭಿಯಂತರರಾಗಿ (ಇಂಜಿನಿಯರ್) ಕಾರ್ಯನಿರ್ವಹಿಸುತ್ತಾರೆ. ಈ ದಂಪತಿಗಳು ನಂದಿಶ್ವರನಲ್ಲಿ ಹರಕೆ ಹೊತ್ತು ಭಕ್ತಿಯಿಂದ ಪೂಜಿಸಿ ಹರಕೆ ಇಡೇರಿದ ಮೇಲೆ ದೇವಸ್ಥಾನ ಜೀರ್ನೊದ್ದಾರ ಮಾಡಿದ್ದಾರೆ ಎಂದು ಹಿರೇ ನಂದಿಹಳ್ಳಿ ಗ್ರಾಮಸ್ಥರು ಹೇಳುತ್ತಾರೆ. ಇವತ್ತಿಗೂ ಇತಿಹಾಸ ಪ್ರಸಿದ್ಧ ಈ ಕ್ಷೇತ್ರಕ್ಕೆ ಹರಕೆ ಕಟ್ಟಿಕೊಂಡು ಬರುವ ಭಕ್ತರ ಮನೋಕಾಮನೆಗಳು ನೆರೆವೆರುತ್ತಾ ಬಂದಿವೆ. ಈವತ್ತಿಗೂ ಇಲ್ಲಿಗೆ ಭಕ್ತಿಯಿಂದ ಭೇಟಿ ನೀಡಿದ ಭಕ್ತರ ಆಸೆಗಳು ಈಡೇರುತ್ತವೆ ಎಂದು ಭಕ್ತರ ನಂಬಿಕೆ ಇದೆ.
ದೇಶದಲ್ಲಿರುವ ದೇವಸ್ಥಾನಗಳ ಜಾತ್ರೆ ವರ್ಷಕ್ಕೆ ಒಂದು ಸಾರಿ ಆಗುತ್ತವೆ ಆದರೆ ಸುಕ್ಷೇತ್ರ ನಂದಿಹಳ್ಳಿಯಲ್ಲಿ ಶ್ರೀ ಬಸವೇಶ್ವರ ಜಾತ್ರೆಯು ವರ್ಷದಲ್ಲಿ ಎರಡು ಬಾರಿ ಅಂದರೆ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಆಗುತ್ತದೆ. ಶಿವರಾತ್ರಿ ಅಮವಾಸ್ಯೆಯಂದ ಬೆಳಿಗ್ಗೆ ವಿಶೇಷವಾಗಿ ಪೂಜೆ, ಹೋಮ-ಹವನದಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇಡೀ ದಿನ ಭಕ್ತರು ಸರದಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ಬಸವಣ್ಣನ ದರ್ಶನ ಪಡೆದರು. ಸುಕ್ಷೇತ್ರದೆಲ್ಲೆಡೆ 'ಹರ ಹರ ಮಹಾದೇವ' ಉದ್ಘೋಷ ಮಾರ್ದನಿಸಿತು.
ವಿವಿಧ ಧಾರ್ಮಿಕ ಆಚರಣೆಗಳು : ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆಯಿಂದ ಭಕ್ತರು ದೀಡು ನಮಸ್ಕಾರ, ಜವಳ, ಅಭಿಷೇಕ ದಂತಹ ಧಾರ್ಮಿಕ ಕಾರ್ಯಗಳನ್ನು ಭಕ್ತರು ಭಕ್ತಿಭಾವದಿಂದ ನೆರವೇರಿಸಿದರು.
ಚಿಕ್ಕನಂದಿಹಳ್ಳಿಯ ಗ್ರಾಮಸ್ಥರು ಬಸವೇಶ್ವರ ರಥಕ್ಕೆ ಬೃಹತ್ ಹೂ ಮಾಲೆಯನ್ನು ಸಂಗೀತ ನೃತ್ಯ ವಾದ್ಯಗಳೊಂದಿಗೆ ತೆಗೆದುಕೊಂಡು ಬಂದು ರಥಕ್ಕೆ ಹಾಕಿ ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತೆ ಅಪಾರ ಭಕ್ತರು 'ಹರ ಹರ ಮಹಾದೇವ" "ಶಂಭೋ ಹರ ಹರ ಮಹಾದೇವ" ಜಯಘೋಷದೊಂದಿಗೆ ರಥೋತ್ಸವ ಪ್ರಾರಂಭವಾಯಿತು.
ರಥಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ನಮಿಸಿದರು. ರಥವು ಪಾದಗಟ್ಟೆವರೆಗೂ ತೆರಳಿ ಮೂಲ ಸ್ಥಳಕ್ಕೆ ಹಿಂತಿರುಗಿತು.
ಹಿರೇನಂದಿಹಳ್ಳಿಯ ಗ್ರಾಮಸ್ಥರು ನಾಲ್ಕನೆಯ ಶತಮಾನದಿಂದ ನಡೆಸಿಕೊಂಡು ಬದಂತ್ತಾ ಪದ್ದತ್ತಿ ನಂದಿಕೋಲ, ಹಳೆ ಬಂಡಿ, ಸಮಾಳ, ಡೋಲು, ಹಲಗೆ, ಕರಡಿ ಮಜಲು, ಭ್ಯಾಂಡ್ ಬಾಜ್, ಅಲಂಕರಿಸಿದ ಎತ್ತು ಚಕ್ಕಡಿಗಳು ಭಜನೆ ಮೆರವಣಿಗೆ ನಡೆಸಿದರು. ನೂರಾರು ವರ್ಷಗಳಿಂದ ನಡೆದು ಬಂದ ನಂದಿಕೋಲ ಕುಣಿತ ಹಲಗೆ ಶಬ್ದ ಮಂಗಳ ವಾದ್ಯಗಳಿಗೆ ಹೆಜ್ಜೆಗಳನ್ನು ಹಾಕುತ್ತಾ ಕುಣಿಯುವುದು ನೊಡುಗರಲ್ಲಿ ವಿಜೃಂಭಣೆಯ ರಥೋತ್ಸವದ ಮೆರುಗು ಹೆಚ್ಚಿಸಿದವು.
ಚನ್ನಮ್ಮನ ಕಿತ್ತೂರು ಬೈಲಹೊಂಗಲ, ಸವದತ್ತಿ, ಖಾನಾಪುರ, ಧಾರವಾಡ, ರಾಮದುರ್ಗ, ಬೆಳಗಾವಿ ತಾಲ್ಲೂಕುಗಳು ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಅಪಾರ ಭಕ್ತ ಸಮೂಹ ರಥೋತ್ಸವದಲ್ಲಿ ಪಾಲ್ಗೊಂಡು ನಂದಿಶ್ವರ ಸ್ವಾಮಿಯ ದರ್ಶನ ಪಡೆದರು.
ಧರ್ಮದತ್ತಿ ಇಲಾಖೆ ಹಾಗೂ ಕಮಿಟಿಯರ ನಿಗದಿತ ಸಮಯದಂತೆ ಸಾಯಂಕಾಲ ನಂದಿಶ್ವರನ ಮಾಹಾರಥೋತ್ಸವ ಶ್ರೀ ನಾಗಭೂಷಣ ಶಿವಯೋಗೇಶ್ವರ ಮಠದ ಪ್ರಣವಾನಂದ ಮಹಾಸ್ವಾಮಿಗಳು, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ನಿಚ್ಚನಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಇವರ ನೇತ್ರತ್ವದಲ್ಲಿ ಮಹಾ ಮಂಗಳಾರತಿ ಹಾಗೂ ಮಾಹಾ ಪೂಜೆಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ವಿಶೇಷವಾಗಿ ಪಿ.ಎಸ್.ಐ ಪ್ರವೀಣ ಗಂಗೋಳ ಅವರ ನೇತೃತ್ವದಲ್ಲಿ ಪೋಲಿಸ್ ಇಲಾಖೆ ಸಿಬ್ಬಂದಿಗಳು ವಿದ್ಯುತ್ ಪೂರೈಕೆ ಸಿಬ್ಬಂದಿಗಳು, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು, ರಥೋತ್ಸವ ಕಮಿಟಿ ಸರ್ವ ಸದಸ್ಯರು, ಯುವಕರು, ಗ್ರಾಮ ಪಂಚಾಯತಿ ಹಿರೇನಂದಿಹಳ್ಳಿ ಪಧಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಳತ್ವ ವಹಿಸಿ ಭಕ್ತಿಯಿಂದ ಸೇವೆ ಸಲ್ಲಿಸಿದರು.




0 Comments