ಕಿತ್ತೂರ ವಿಜಯ
ಬೈಲಹೊಂಗಲ. ಮಾದಕ ವಸ್ತುಗಳ ಸೇವನೆ ಹಾಗೂ ದುಶ್ಚಟಗಳಿಂದ ಯುವ ಸಮುದಾಯ ಗಂಭೀರವಾದ ದೈಹಿಕ, ಮಾನಸಿಕ ಸಮಸ್ಯೆಗಳೊಂದಿಗೆ ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ. ಇವರಲ್ಲಿ ಜಾಗೃತಿ ಮೂಡಿಸಿ ಸದೃಡ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಅವರು ಭಾನುವಾರ ಪಟ್ಟಣದ ಕಿತ್ತೂರು ಚನ್ನಮ್ಮ ಸಮಾಧಿ ಹತ್ತಿರ ನಡೆದ ಕರ್ನಾಟಕ ರಾಜ್ಯ ಪೂಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಆಚರಣೆ, ಸರ್ವರಿಗೂ ಸದೃಡ ಆರೋಗ್ಯ ಮತ್ತು ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಂಗವಾಗಿ ಮ್ಯಾರಾಥನ್ 5 ಕೆ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಡಿವೈಎಸ್‍ಪಿ ರವಿ ನಾಯ್ಕ ಮಾತನಾಡಿ, ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿರಬೇಕು. ಇವುಗಳಿಂದ ದೂರವಿದ್ದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಅಥಣಿ ಡಿವೈಎಸ್‍ಪಿ ಶ್ರೀಪಾದ ಜಲ್ದೆ, ಸಿಪಿಐಗಳಾದ ಮಹಾದೇವ ಶಶಟ್ಟಿ, ಎಂ.ಎಸ್.ಹೂಗಾರ, ಮಹಾಂತೇಶ ತುರಮರಿ ಉಪವಿಭಾಗದ ಪೊಲೀಸ್ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.
ಮ್ಯಾರಥಾನ್ ಪಟ್ಟಣದ ಚನ್ನಮ್ಮ ಸಮಾಧಿಯಿಂದ ಹೊರಟು ಬಜಾರ ರಸ್ತೆ ಮಾರ್ಗವಾಗಿ ಅಮಟೂರ ಬಾಳಪ್ಪ ವೃತ್ತ, ಚನ್ನಮ್ಮ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಮರಳಿ ಚನ್ನಮ್ಮ ಸಮಾಧಿ ತಲುಪಿತು.
ಮ್ಯಾರಥಾನ್‍ಲ್ಲಿ ಖಾನಾಪುರದ ಪ್ರಥಮೇಶ ಪೊರಮಕರ ಪ್ರಥಮ, ಬೆಳಗಾವಿಯ ಬೈರನಾಯ್ಕ ದ್ವೀತಿಯ, ಖಾನಾಪುರದ ಬಿಜಂತಾ ಸಾಡಿಯಾ ತೃತಿಯ ಸ್ಥಾನ ಪಡೆದು ನಗದು ಬಹುಮಾನ ಪಡೆದರು.
ಈ ವೇಳೆ ನಗರದ ನಾಗರಿಕರು, ಕ್ರೀಡಾ ಪ್ರೇಮಿಗಳ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
✍️ ವರದಿ: ಬಸವರಾಜ ಲಕ್ಕನ್ನವರ
ಬೈಲಹೊಂಗಲ ತಾಲೂಕಾ ವರದಿಗಾರರು
0 Comments