ಸಂವಿಧಾನ ಬದಲಾವಣೆ ಹೇಳಿಕೆ; ಸಂಸದ ಅನಂತಕುಮಾರ್ ಹೆಗಡೆಗೆ ಟಿಕೇಟ್‌ ಡೌಟ್..?

 



ಕಿತ್ತೂರ ವಿಜಯ

ಚನ್ನಮ್ಮನ ಕಿತ್ತೂರು: ಸಂಸದರಾಗಿ ಐದು ವರ್ಷ ಕಳೆದರೂ ಕೋವಿಡ್ ಹಾಗೂ ನೆರೆ ಹಾವಳಿಯಂತಹ ಸಂಕಷ್ಟ ಸಮಯದಲ್ಲಿ ಕ್ಷೇತ್ರದಲ್ಲಿ ಕ್ಷೇತ್ರದ ಮತದಾರರಿಗೆ ನೆರವಾಗದ ಸಂಸದ ಅನಂತಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ವಿವಾದತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕ್ಷೇತ್ರಕ್ಕೆಎಂಟ್ರಿ ಕೊಟ್ಟಿದ್ದು ಸಂವಿಧಾನ ಬದಲಾವಣೆ ಹೇಳಿಕೆಯನ್ನು ನೀಡುವ ಮೂಲಕ ಪಕ್ಷವನ್ನುಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಅನೇಕರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ನಾಲಿಗೆ ಹರಿಬಿಟ್ಟು ವಿವಾದ ಮಾಡಿಕೊಂಡಿದ್ದ ಹೆಗಡೆ, ಇದೀಗ ಪುನಃ ಸಂವಿಧಾನ ಬದಲಾವಣೆಯ ಹೇಳಿಕೆಯಿಂದ  ಸಾರ್ವಜನಿಕರಕೆಂಗಣ್ಣಿಗೆಗುರಿಯಾಗಿದ್ದಾರೆ.

Aವಿಧಾನವನ್ನು ಬದಲಾಯಿಸಲು ಭಾರತೀಯಜನತಾ ಪಕ್ಷಕ್ಕೆ 400 ಸ್ಥಾನಗಳು ಬೇಕು ಎಂದು ಬಿಜೆಪಿ ಸಂಸದಅನAತಕುಮಾರ್ ಹೆಗಡೆಇತ್ತೀಚೆಗೆ ಹೇಳಿಕೆ ನೀಡಿದ್ದರು ಹೇಳಿಕೆ ಬಿಜೆಪಿ ಪಕ್ಷಕ್ಕೆ ಮುಜುಗರಉಂಟು ಮಾಡಿದ್ದು ಇದರಿಂದಾಗಿಯೇ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ರಾಜ್ಯ ಮತ್ತುರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಉತ್ತರಕನ್ನಡ ಸಂಸದರಸಂವಿಧಾನ ಬದಲಾವಣೆ ಹೇಳಿಕೆಯಿಂದ ಬಿಜೆಪಿ ಹಿರಿಯ ನಾಯಕರುಅಂತರಕಾಯ್ದುಕೊAಡಿದ್ದು, ಅದುಅವರ ವೈಯಕ್ತಿಕಅಭಿಪ್ರಾಯ ಹೊರತು ಪಕ್ಷದ ನಿಲುವು ಅಲ್ಲಎಂದು ಹೇಳಿದೆ.ಐದು ಬಾರಿ ಬಿಜೆಪಿ ಸಂಸದರಾಗಿರುವಅವರಿA ಬಿಜೆಪಿ ಶಿಸ್ತು ಸಮಿತಿಕಾರಣ ಕೇಳಿ ನೋಟಿಸ್ ನೀಡುವ ಮೂಲಕ ಪಕ್ಷ ವಿವರಣೆ ಕೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಲ್ಪಸAಖ್ಯಾತರ ಮತ್ತು ಪ್ರಗತಿಪರರ ಕುರಿತು ತನ್ನ ದ್ವೇಷ ಭಾಷಣಗಳನ್ನು ಪುನರಾವರ್ತಿಸುತ್ತಿರುವ ಅನಂತಕುಮಾರ ಹೆಗಡೆ, ಬಿಜೆಪಿ ನಾಯಕತ್ವವನ್ನುಇಕ್ಕಟ್ಟಿಗೆ ಸಿಲುಕಿಸುವ ರೀತಿ ಹಲವಾರು ಟೀಕೆಗಳನ್ನು ಮಾಡಿದ್ದಾರೆ. ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ವರಿಷ್ಠರುಕಸರತ್ತು ನಡೆಸುತ್ತಿರುವ ಹೊತ್ತಿನಲ್ಲಿ, ಹೆಗಡೆ ನೀಡಿರುವ ಹೇಳಿಕೆಗಳು ಅವರ ಟಿಕೆಟ್ ಮೇಲೆ ಪರಿಣಾಮ ಬೀರಬಹುದುಎಂದು ಪಕ್ಷದ ಮೂಲಗಳು ಹೇಳಿವೆ. ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಹೆಗಡೆ ತೀವ್ರ ಲಾಬಿ ನಡೆಸುತ್ತಿದ್ದಾರೆಎಂದು ತಿಳಿದುಬಂದಿದೆ.

ಕಿತ್ತೂರು ಹಾಗೂ ಖಾನಾಪುರ ಮತಕ್ಷೇತ್ರಗಳು ಉತ್ತರಕನ್ನಡ ಲೋಕಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ ಅವರು ಸಂಸದರಾಗಿ ಆಯ್ಕೆ ಆದಾಗಿನಿAದಲೂ ವರೆಗೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇರುವುದರಿಂದ ಕ್ಷೇತ್ರದ ಕಾAಗ್ರೆಸ್ಕಾರ್ಯಕರ್ತರು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ಅನಂತಕುಮಾರ ಎಂದು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಕುಟುಕಿದ್ದಾರೆ.

ಖಾನಾಪುರ ಮಾಜಿ ಶಾಸಕಿ ಡಾಅಂಜಲಿ ನಿಂಬಾಳ್ಕರ್ ಅವರ ಬಗ್ಗೆ ರಿಜೆಕ್ಟೆಡ್ ಪೀಸ್ಅನ್ನೋ  ಹಗುರವಾದ ಹೇಳಿಕೆ ನೀಡಿರುವ ಬಗ್ಗೆ ಕೂಡ ಕೆಪಿಸಿಸಿ ಸಂಯೋಜಕ ಪುಂಡಲೀಕ ನೀರಲಕಟ್ಟಿಅವರುತಮ್ಮ ಫೇಸ್ಬುಕ್ ಲೈವ್ ಮೂಲಕ ಸಂಸದರನ್ನುತರಾಟೆಗೆತೆಗೆದುಕೊAಡಿದ್ದರು. ಅಭಿವೃದ್ಧಿ ಶೂನ್ಯ ಸಂಸದರಿಗೆ ಬಾರಿಜನತಕ್ಕ ಪಾಠ ಕಲಿಸಲಿದ್ದಾರೆಅನ್ನೋಚರ್ಚೆ ಶುರುವಾದ ಹೊತ್ತಲ್ಲೇಅವರಿಗೆ ಬಾರಿ ಟಿಕೆಟ್ಅನುಮಾನ ಅನ್ನೋ ಸುದ್ದಿ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ಕಾರ್ಯಕರ್ತರಲ್ಲಿ ಸಮಾಧಾನ ತಂದಿದ್ದಂತು ಸತ್ಯ.

ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಿಕೇಟ್ ಕೈ ತಪ್ಪಿದರೆ ನಿಕಟಪೂರ್ವ ಸಭಾಪತಿ ವಿಶ್ವೇಶಶ್ವರ ಹೆಗಡೆ ಕಾಗೇರಿ ಅಥವಾ ಹಿರಿಯ ಪತ್ರಕರ್ತರಾದ ಹರಿಪ್ರಕಾಶ ಕೋಣೆಮನೆ ಅವರಿಗೆ ಬಿಜೆಪಿ ಟಿಕೇಟ್ ನೀಡಬಹುದು ಎಂದು ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಕಿತ್ತೂರು ಮತ್ತು ಖಾನಪೂರ ಮತಕ್ಷೇತ್ರಗಳ ಜೊತೆ ಒಳ್ಳೆಯ ಒಡನಾಟ ಹೊಂದಿದ ಕ್ರೀಯಾಶೀಲ ವ್ಯಕ್ತಿಅಂದರೆ ನಿಕಟಪೂರ್ವ ಸಭಾಪತಿ ವಿಶ್ವೇಶಶ್ವರ ಹೆಗಡೆಕಾಗೇರಿಅವರು.ಅವರಿಗೆ ಬಿಜೆಪಿ ಟಿಕೇಟ್ ನೀಡಿದರೆ ಉತ್ತಮ ಎಂದು ಸ್ವತಃ ಬಿಜೆಪಿ ಮುಖಂಡರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

 

 

Post a Comment

0 Comments