
ಶಾಸಕ ಬಾಬಾಸಾಹೇಬ ಪಾಟೀಲ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಿದರು
ಎಂ. ಕೆ. ವಾಣಿ ನ್ಯೂಸ್
ಚನ್ನಮ್ಮನ ಕಿತ್ತೂರು: ಸೋಮವಾರ ಪೇಠೆಯಲ್ಲಿರುವ
ಪಟ್ಟಣ ಪಂಚಾಯತ ಹತ್ತಿರ ನೂತನ 194 ನೇಯ ನಂಬರಿನ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಬಾಬಾಸಾಹೇಬ
ಪಾಟೀಲ ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿ ಶಾಸಕ ಬಾಬಾಸಾಹೇಬ
ಪಾಟೀಲ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಕಲಿಸುವುದರಿಂದ ಮಕ್ಕಳು ಭವಿಷ್ಯದಲ್ಲಿ
ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದ ಅವರು ಸರ್ಕಾರದಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ
ಆಹಾರದ ಜೊತೆ ಉತ್ತಮವಾದ ಶಿಕ್ಷಣ ನೀಡುತ್ತಾರೆ. ಕಾರಣ ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿಗಳಿಗೆ
ಕಳಿಸಬೇಕು ಎಂದರು.
ಈ ವೇಳೆ ಸಿಡಿಪಿಓ ಅರುಣಕುಮಾರ, ಎಸಿಡಿಪಿಓ
ದೀಪಾ ಹೆಬ್ಬಳ್ಳಿ, ಅಂಗನವಾಡಿ ಮೇಲ್ವಿಚಾರಕಿ ಗೀತಾ ಕಮತಗಿ, ಅಂಗನವಾಡಿ ಶಿಕ್ಷಕಿ ಯಶೋದಾ ಗೋಂದಳಿ,
ಸಹಾಯಕಿ ರೂಪಾ ಲಂಗೋಟಿ, ಗುತ್ತಿಗೆದಾರ ರಾಜು ಜಾಂಗಟಿ, ಪ್ರವೀಣಗೌಡ ಚಿಕ್ಕನಗೌಡರ, ಅಸ್ಫಾಕ ಹವಾಲ್ದಾರ,
ಕೃಷ್ಣಾ ಬಾಳೇಕುಂದರಗಿ, ಶಂಕರ ಬಡಿಗೇರ, ಉಮೇಶ ಹುಂಬಿ, ಈರಣ್ಣ ಅಕ್ಕಿ, ಮಂಜುನಾಥ ಗಂಗಪ್ಪನವರ, ಸುರೇಶ
ಕಿತ್ತೂರು. ಆಕಾಶ ದಡ್ಡಿ, ಕುತಬು ನದೀಮುಲ್ಲಾ, ನಾಗರಾಜ ಅಸುಂಡಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು,
ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಮಕ್ಕಳು ಸೇರಿದಂತೆ ಇತರರಿದ್ದರು.
0 Comments