ಚನ್ನಮ್ಮನ ಕಿತ್ತೂರು ತಾಲೂಕು, ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ ಜರುಗಿತು

 ಎಂ.ಕೆ. ವಾಣಿ ನ್ಯೂಸ್‌ 

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಪಟ್ಟಣ ಪಂಚಾಯತ ಆವರಣದಲ್ಲಿಯ ಬಿ ಆರ್‌ ಅಂಬೇಡ್ಕರ ಭವನದಲ್ಲಿ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ ಜರುಗಿತು.

 ಸಂವಿಧಾನ ಪೀಠಿಕೆ ಓದುವ ಮೂಲಕ ಪೂರ್ವಭಾವಿ ಸಭೆಗೆ ಚಾಲನೆ ನೀಡಲಾಯಿತು.

ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ಸವಿಂಧಾನ ಜಾರಿಗೆ ಬಂದು 75 ನೇ ವರ್ಷಾಚರಣೆಯ ಅಂಗವಾಗಿ ಜ 26 ರಿಂದ ರಾಜ್ಯದಾದ್ಯಂತ ಸಂವಿಧಾನ ಜಾಗೃತಿ ಜಾಥಾ ಏರ್ಪಡಿಸಲಾಗಿದದ್ದು ಫೆ 16 ರಂದು ಚನ್ನಮ್ಮನ ಕಿತ್ತೂರು ಪಟ್ಟಣಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದ ಅವರು ಸಂವಿದಾನದ ಮಹತ್ವ ಮತ್ತು ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವುದು ಜಾಥದ ಮುಖ್ಯ ಉದ್ದೇಶವಾಗಿದ್ದು ತಾಲೂಕಿನ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುದು ಎಂದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ. ಬಿ. ಯಮನೂರು ಮಾತನಾಡಿ ಸಂವಿಧಾನ ಜಾಗೃತಿ ಜಾಥಾ ಫೆ 14 ರಂದು ಐತಿಹಾಸಿಕ ಕಿತ್ತೂರು ತಾಲೂಕಿಗೆ   ಆಗಮಿಸಲಿದ್ದು ಫೆ 16 ರಂದು ಕಿತ್ತೂರು ಪಟ್ಟಣಕ್ಕೆ ಆಗಮಿಸಲಿದೆ. ನಂತರ ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾTಅ ವಾಹನ ಸಂಚರಿಸಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಗುವುದು. ಶಿಕ್ಷಣ ಇಲಾಖೆಯ ಮೂಲಕ ಶಾಲೆಗಳಲ್ಲಿ ಸಂವಿಧಾನದ ಕುರಿತು ಭಾಷಣ, ಕ್ವೀಜ್‌, ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲು ತಿಳಿಸಲಾಗಿದ್ದು ಅದರ ಜೊತೆ ಜೊತೆಗೆ ಫೆ 16 ರಂದು ಸಂವಿಧಾನ ಜಾಗೃತಿ ಜಾಥಾ ವಾಹನದ ಜೊತೆಗೆ ರೂಪಕಗಳನ್ನು ಮಾಡಲು ಸೂಚಿಸಲಾಗಿದೆ ಎಂದರು.                 

ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಮಾತನಾಡಿ ಸಂವಿಧಾನ ಜಾಗೃತಿ ಜಾಥಾ ತಾಲೂಕಿನ ಪ್ರತಿ ಗ್ರಾಮ ಪಂಚಾಯತಗೆ ಆಗಮಿಸಲಿದೆ ಕಾರಣ ಗ್ರಾಮ ಪಂಚಾಯತ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಯುವಕರು, ಯುವಕ ಮಂಡಳಗಳು. ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಸೇರಿ ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಗ್ರಾಮಗಳಲ್ಲಿ ವಾಹನದ ಜೊತೆ ಜಾಥಾದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಜೀವ ಲೋಕಾಪೂರ, ರಾಜು ಜಾಂಗಟಿ, ಗುರಿಸಿದ್ದ ಜಾಂಗಟಿ, ಫಕ್ಕಿರಪ್ಪ ಜಾಂಗಟಿ, ಬಸವರಾಜ ಕೆಳಗಡೆ, ಶ್ರೀನಿವಾಸ ಗುಂಜಿ, ಶಿವಪ್ಪ ಚಿನ್ನಣ್ಣವರ, ಮಡಿವಾಳೆಪ್ಪ ವಕ್ಕುಂದ, ಭೀಮಶಿ ದುರಗನ್ನವರ ಸೇರಿದಂತೆ ಇನ್ನೂ ಅನೇಕ ಮುಖಂಡರು ಮಾತನಾಡಿದರು. 

ಈ ವೇಳೆ  ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣದ ನಾಗರಿಕರು ಸೇರಿದಂತೆ ಇನ್ನೂ ಅನೇಕ ಮುಖಂಡರು ಇದ್ದರು.

ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಮಧ್ಯ ನಡೆದ ಚರ್ಚೆಯಲ್ಲಿ ವಗ್ವಾದ ನಡೆಯಿತು. ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ನಿಖರವಾದ ಉತ್ತರ ಕೊಡದ ಅಧಿಕಾರಿಗಳ ವಿರುದ್ಧ ಅನೇಕ ಮುಖಂಡರು ಬೇಸರ ವ್ಯಕ್ತ ಪಡಿಸಿ ಕಾರ್ಯಕ್ರಮದಿಂದ ಹೊರನಡೆದಿರುವ ಘಟನೆ ನಡೆಯಿತು.

 

 

 

 

Post a Comment

0 Comments