ಚೆನೈ : ಬಿಜು ಜನತಾ ದಳದ (BJD) ಹಿರಿಯ ಮಾಜಿ ಶಾಸಕಿ ಖಲ್ಲಿಕೋಟ್ ರಾಣಿ ಎಂದು ಖ್ಯಾತಿ ಹೊಂದಿದ ವಿ. ಸುಜ್ಞಾನ ಕುಮಾರಿ
ದೇವೊ (87) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಚೆನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬಾರದಲೋಕಕ್ಕೆ ಪಯಣ ಬೆಳಿಸಿದ್ದಾರೆ.
ರಾಜ ಮನೆತನಕ್ಕೆ ಸೇರಿದ ಇವರು ಒಡಿಶಾ ವಿಧಾನಸಭೆಯಲ್ಲಿ 10 ಬಾರಿ ಶಾಸಕಿಯಾಗಿ ಕಾರ್ಯ ನಿರ್ವಹಿಸಿದ್ದರು. 10 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರೂ ಮಂತ್ರಿಯಾಗಲು ನಿರಾಕರಿಸಿದ ಇವರು 1961 ರಿಂದ 2019ರವರೆಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು.
ಅವರ ನಿಧನಕ್ಕೆ ಪ್ರಧಾನ ಮಂತ್ರಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಸಂತಾಪ
ಸೂಚಿಸಿದ್ದಾರೆ.
0 Comments