ಸಂಸ್ಕೃತಿಯ ಸೊಬಗು ತಿಳಿಸಲು ಹಬ್ಬಗಳ ಆಚರಣೆ ಅವಶ್ಯಕ- ಡಾ. ರಾಮು ಮೂಲಗಿ -MK Vani

ಸಂಸ್ಕೃತಿಯ ಸೊಬಗು ತಿಳಿಸಲು ಹಬ್ಬಗಳ ಆಚರಣೆ ಅವಶ್ಯಕ- ಡಾ. ರಾಮು ಮೂಲಗಿ 
ಚನ್ನಮ್ಮನ ಕಿತ್ತೂರು: ನಮ್ಮ ಸಂಸ್ಕೃತಿಯ ಸೊಬಗನ್ನು ಹಾಗೂ ಹಬ್ಬ-ಹರಿದಿನಗಳ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸಲು 
ಶೈಕ್ಷಣಿಕ ಕೇಂದ್ರಗಳಲ್ಲಿ ಹಬ್ಬಗಳನ್ನು ಆಚರಿಸುವುದರೊಂದಿಗೆ ಜಾನಪದ ಕಲೆಯನ್ನು ಅರಿಯಬೇಕು ಎಂದು ಜಾನಪದ ತಜ್ಞ ಡಾ. ರಾಮು 
ಮೂಲಗಿ ಕರೆನೀಡಿದರು. 
 
ಸ್ಥಳೀಯ ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಹಿಳಾ 
ವೇದಿಕೆ, ಪರಂಪರೆ ಕೂಟ ಹಾಗೂ ವಿದ್ಯಾರ್ಥಿ ಒಕ್ಕೂಟ ಇವುಗಳ ಸಂಯುಕ್ತಾಶ್ರದಲ್ಲಿ ಆಯೋಜಿಸಲಾಗಿದ್ದ "ಸಂಕ್ರಾAತಿ ಪ್ರಯುಕ್ತ ಗ್ರಾಮ 
ಸಂಭ್ರಮ" ಉದ್ಘಾಟಿಸಿ ಮಾತನಾಡಿದ ಡಾ. ರಾಮು ಮೂಲಗಿ ಇಂದಿನ ಯಾಂತ್ರಿಕ ಯುಗದಲ್ಲಿ ನಾವು ನಮ್ಮ ಸಂಸ್ಕೃತಿಯನ್ನು 
ಮರೆಯುತ್ತಿದ್ದೇವೆ, ಅಲ್ಲದೇ ನಮ್ಮ ಪೂರ್ವಜರು ಪ್ರತಿಯೊಂದು ಕಾಲದಲ್ಲಿ ಅದಕ್ಕೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಿದ್ದರು 
ಇದರಿಂದ ನಮ್ಮ ಆರೋಗ್ಯ ಸುಧಾರಣೆಯೊಂದಿಗೆ ನಮ್ಮ ಬಾಂಧವ್ಯಗಳು ಸಹ ಬೆಸೆಯಲ್ಪಡುತ್ತಿದ್ದವು. ಆದರೆ ಇಂದಿನ ಪೀಳಿಗೆ ಕೇವಲ 
ಯಂತ್ರಗಳಿಗೆ ಮೊರೆಹೋಗಿ ಇಡೀ ವಿಶ್ವವನ್ನೆ ಒಂದು ಯಂತ್ರದಲ್ಲಿ ಹಿಡಿದಿಟ್ಟರು ನಾವು ನಮ್ಮ ಮನೆಯಲ್ಲಿಯೇ ಅಪರಿಚಿತರಾಗುತ್ತಿದ್ದೇವೆ. 
ಆದ್ದರಿಂದ ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಹಬ್ಬಗಳ ಆಚರಣೆ ಇಂದು ನಾವು ನಮ್ಮ ಶೈಕ್ಷಣಿಕ ಕೇಂದ್ರದಲ್ಲಿಯೇ ಆಚರಿಸಿ 
ಅವುಗಳ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡುವುದಲ್ಲದೆ, 
ಎಲ್ಲರೊಂದಿಗೆ ಬಾಂಧವ್ಯ ಬೆಸೆಯಲು ನೇರವಾಗುತ್ತದೆ. ಜಾನಪದ ನಮ್ಮ ಪ್ರತಿಯೊಂದು ಹಬ್ಬದ ಮಹತ್ವವನ್ನು ಹಾಡಿ ಜನರಿಗೆ 
ಸರಳವಾಗಿ ಮನಮುಟ್ಟುವಂತೆ ತಿಳಿಹೇಳುತ್ತದೆ. ಜಾನಪದ ಕಲೆಯು ನಮ್ಮ ಸಂಸ್ಕೃತಿಕ ಪ್ರತಿಕವಾಗಿದೆ. ಜಾನಪದ ಕೇವಲ ಕಲೆಯಲ್ಲ 
ಅದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಜಾನಪದ ಕಲೆಯನ್ನು ಇಂದು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದರು. 
 
ಮುಖ್ಯಅತಿಥಿಗಳಾದ ಸಮಾಜ ಸೇವಕಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ರೋಹಿಣಿ ಬಾಬಾಸಾಹೇಬ 
ಪಾಟೀಲ, ಮಕ್ಕಳಲ್ಲಿ ಇಂದು ಸಂಸ್ಕೃತಿಯ ಪ್ರಜ್ಞೆ ಕಡಿಮೆಯಾಗುತ್ತಿದ್ದು, ನಮ್ಮ ಸಂಸ್ಕೃತಿಯ ಸೊಬಗು ಹಾಗೂ ಹಿರಿಮೆಯನ್ನು 
ಯುವಪೀಳಿಗೆಗೆ ತಿಳಿಸಬೇಕಾದದ್ದು ಹಿರಿಯರ ಕರ್ತವ್ಯವಾಗಿದೆ. ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಇವರು ಮಹಿಳೆಯರಿಗೆ 
ಸ್ಪೂರ್ತಿಯಾಗಿದ್ದು ಅವರುಗಳ ಜೀನಗಾತೆ ನಮಗೆ ದಾರಿದೀಪವಾಗಿದೆ ಅವರುಗಳ ನಲೆದಲ್ಲಿ ನಾವುಗಳು ಹುಟ್ಟಿರುವುದು ನಮ್ಮ 
ಸೌಭಾಗ್ಯವಾಗಿದೆ. ಅವರುಗಳ ಚರಿತ್ರೆಯನ್ನು ನಾವು ಅರಿತು ಅವರು ನಮಗೆ ಆದರ್ಶ ಮೂರ್ತಿಗಳಾಗಬೇಕು ಎಂದರು. 
 
ಅಧ್ಯಕ್ಷತೆವಹಿಸಿ ಮಾತನಾಡಿದ ಕಿನಾವಿವ ಸಂಘದ ಚೇರಮನ್ನರಾದ ಜಗದೀಶ ವಸ್ತçದ, ನಮ್ಮ ಸಂಸ್ಕೃತಿಕ ಸೊಬಗನ್ನು 
ಸವಿಯಬೇಕಾದರೆ ಅದು ನಮ್ಮ ಹಬ್ಬಹರಿದಿನಗಳಲ್ಲಿ ಮಾತ್ರ ಸಾಧ್ಯ, ಇಂದು ಅನೇಕ ಹಬ್ಬಗಳನ್ನು ನಾವು ಕೇವಲ ಒಂದು ಸಂಪ್ರದಾಯ 
ಎನ್ನುವ ರೀತಿಯಲ್ಲಿ ಆಚರಿಸುತ್ತಿದ್ದೇವೆ. ನಮ್ಮ ಹಬ್ಬಗಳು ಒಂದು ಕಾಲದಲ್ಲಿ ಭಾವೈಕತೆಯ ಪ್ರತೀಕವಾಗಿದ್ದವು. ಇಡೀ ಸಮಾಜದಲ್ಲಿ 
ಎಲ್ಲರೂ ಸೇರಿ ಆಚರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ವಿಭಜಿತ ಕುಟುಂಬ ಪದ್ಧತಿಯಲ್ಲಿ ಹಬ್ಬಗಳ ಆಚರಣೆ 
ಕಡಿಮೆಯಾಗುತ್ತಿರುವುದರಿಂದ ನಾವು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದೇವೆ ಇದಕ್ಕೆ ಕಾರಣ ನಮ್ಮ ಹಿರಿಯರು ಪ್ರತಿಯೊಂದು 
ಕಾಲಮನಕ್ಕೆ ತಕ್ಕಂತೆ ಒಂದೊAದು ಹಬ್ಬಗಳನ್ನು ಆಚರಿಸಿ ಆಯಾ ಹಬ್ಬಗಳಲ್ಲಿ ಆಯಾ ಕಾಲಮನಕ್ಕೆ ನಮ್ಮ ದೇಹಕ್ಕೆ ಹಾಗೂ 
ಆರೋಗ್ಯಕ್ಕೆ ಅವಶ್ಯಕವಾಗುವ ಆಹಾರ ಸಿದ್ಧಪಡಿಸಿ ಹಬ್ಬಗಳನ್ನು ಎಲ್ಲರೊಂದಿಗೆ ಕೂಡಿ ಆಚರಿಸುತ್ತಿದ್ದರು ಇದರಿಂದ ಸಮಾಜದಲ್ಲಿ 
ಐಕ್ಯತೆ ಬರಲುಸಾಧ್ಯ ಎಂದು ಹೇಳಿದರು. 
 
ಸಂಕ್ರಾAತಿ ಸಂಭ್ರಮ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಮಹಿಳಾ ವೇದಿಕೆ ಚೇರಮನ್ನರಾದ ಶ್ರೀಮತಿ ಪ್ರಿಯಂಕಾ 
ದಾಮೋಣೆ ಪ್ರತಿ ವರ್ಷದಂತೆ ಈ ವರ್ಷವು ನಮ್ಮ ಮಹಾವಿದ್ಯಾಲಯದಲ್ಲಿ ಸಂಕ್ರಾAತಿ ಹಬ್ಬವನ್ನು ಆಚರಿಸುತ್ತಿದ್ದು ಇದು ಇಂದಿನ 
ಯುವ ಪಿಳೀಗೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತದೆ. ಅಲ್ಲದೇ ಇಂದಿನ ಜಟಿಲ ಕಾರ್ಯಗಳಲ್ಲಿ ಒಂದು ದಿನ 
ವಿದ್ಯಾರ್ಥಿಗಳಿಗೆ ಮನರಂಜನೆಯೊAದಿಗೆ ನಮ್ಮ ಸಂಸ್ಕೃತಿ ಆಚರಣೆಗಳನ್ನು ಅರಿಯಲು ಸಹಕಾರಿಯಾಗಿದೆ ಎಂದರು. 
 
ಸಂಕ್ರಾಂತಿ ಪ್ರಯುಕ್ತವಾಗಿ ಲಕ್ಷಿö್ಮ ಪೂಜೆ, ಭತ್ತದ ರಾಶಿ, ಗಂಗಾ ಮಾತೆ ಹಾಗೂ ಬಸವಣ್ಣನ ಪೂಜೆಯನ್ನು ನೆರವೇರಿಸಿ 
ಎಳ್ಳು-ಬೆಲ್ಲವನ್ನು ಬೀರುವುದರ ಮೂಲಕ ಸಂಕ್ರಾAತಿ ಆಚರಣೆಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಜಾನಪದ ಗೀತೆಯನ್ನು ಹಾಗೂ 
ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ವರ್ಗಕೋಣೆಗಳಲ್ಲಿ ಹಳ್ಳಿಗಳ ಜೀವನದ ಮಾದರಿಯನ್ನು ಪದರ್ಶಿಸಿದರು. 
ಸಂಕ್ರಾAತಿಯ ಪ್ರಯುಕ್ತ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ಎಲ್ಲರಿಗೂ ಉಣಬಡಿಸಿ, ಸಾಂಸ್ಕೃತಿಕ ಸೀರೆ, ದೋತಿ, 
ಕುರ್ತಾ ಹಾಗೂ ಎತ್ತು ಚಕ್ಕಡಿಗಳೊಂದಿಗೆ ಅತೀ ಉತ್ಸಾಹದಿಂದ ಸಂಕ್ರಾAತಿ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. 
ಕಿನಾವಿವ ಸಂಘದ ಗೌರವ ಕಾರ್ಯದರ್ಶಿಗಳಾದ ಜೆ.ಎಸ್.ಬಿಕ್ಕಣ್ಣವರ ನಿರ್ದೇಶಕರುಗಳಾದ ಎಸ್.ಎಸ್.ವಂಸAಗ, ಎನ್.ಎಸ್.ಹಿರೇಮಠ, 
ಡಿ.ಆರ್.ಪಾಟೀಲ, ವ್ಹಿ.ಆರ್.ಪಾಟೀಲ, ಜಗದೀಶ ಘಟ್ನಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಪಾಟೀಲ ಇತರರು 
ಕಾರ್ಯಕ್ರಮದಲ್ಲಿ ಹಾಜರಿದ್ದರು. 
 
ಸಂಗೀತ ವಿಭಾಗದ ವಿದ್ಯಾರ್ಥಿಗಳು ಸ್ವಾಗತ ಹಾಗೂ ರೈತ ಗೀತೆಯನ್ನು ಹಾಡಿದರು, ವಿದ್ಯಾರ್ಥಿನಿ ಅಕ್ಷತಾ ಮಾಟೊಳ್ಳಿ 
ಸ್ವಾಗತಿಸಿದರು, ಪ್ರಾಚಾರ್ಯ ಡಾ. ಜಿ ಕೆ ಭೂಮನಗೌಡರ ವಂದಿಸಿದರು, ಕುಮಾರಿ ಸುಷ್ಮಿತಾ ಕುರಿ, ರಕ್ಷಿತಾ ಪುಡಕಲಕಟ್ಟಿ ಹಾಗೂ 
ಶ್ರವಣ ಬಾಳೆಕುಂದ್ರಿ ಕಾರ್ಯಕ್ರಮ ನಿರೂಪಿಸಿದರು. 
 
ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಹಿಳಾ 
ವೇದಿಕೆ, ಪರಂಪರೆ ಕೂಟ ಹಾಗೂ ವಿದ್ಯಾರ್ಥಿ ಒಕ್ಕೂಟ ಇವುಗಳ ಸಂಯುಕ್ತಾಶ್ರದಲ್ಲಿ ಆಯೋಜಿಸಲಾಗಿದ್ದ "ಸಂಕ್ರಾAತಿ ಪ್ರಯುಕ್ತ ಗ್ರಾಮ 
ಸಂಭ್ರಮ"ದಲ್ಲಿ ಲಕ್ಷಿö್ಮ ಪೂಜೆಯನ್ನು ಸಮಾಜ ಸೇವಕಿ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ ನೆರವೇರಿಸಿದರು, ಜನಾಪದ ತಜ್ಞ 
ಡಾ. ರಾಮು ಮೂಲಗಿ, ಚೇರಮನ್ನರಾದ ಜಗದೀಶ ವಸ್ತçದ, ಕಾರ್ಯದರ್ಶಿಗಳಾದ ಜಿ. ಎಸ್. ಬಿಕ್ಕಣ್ಣವರಪ್ರಾಚಾರ್ಯ ಡಾ. 
ಜಿ.ಕೆ.ಭೂಮನಗೌಡರ ಇತರರು ಚಿತ್ರದಲ್ಲಿದ್ದಾರೆ.

Post a Comment

0 Comments