ಅಡುಗೆ ಅನಿಲ ಟ್ಯಾಂಕರ್ ಸೋರಿಕೆ
ಧಾರವಾಡ: ಇಲ್ಲಿನ ಬೇಲೂರ ಸಮೀಪದ ಹೈಕೋರ್ಟ್ ಪೀಠದ ಹತ್ತಿರ ಅಡುಗೆ
ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯಾದ
ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಬೇಲೂರು ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಅಡುಗೆ ಅನಿಲ ತುಂಬಿದ ಸಾಗಲು ಯತ್ನಿಸಿದ ಸಂದರ್ಭದಲ್ಲಿ
ಅಂಡರ್‌ಪಾಸ್ ಚಾವಣಿಗೆ ಎಚ್‌ಪಿ ಕಂಪನಿಯ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಬಡಿದು ಟ್ಯಾಂಕರ್‌ನಲ್ಲಿದ್ದ ಅನಿಲ ಸೋರಿಕೆಯಾಗಿದೆ.
ಕೂಡಲೇ ಪೊಲೀಸರು ಜನರು ಟ್ಯಾಂಕರ್ ಹತ್ತಿರ ತೆರಳದಂತೆ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಮಾಡಿದರು. ಅಲ್ಲದೇ, ಸಮೀಪದ ಅಂಗಡಿಗಳನ್ನು
ಬಂದ್ ಮಾಡಿಸಿ ಅನಾಹುತ ನಡೆಯದಂತೆ ತಡೆದರು. ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಸುಮಾರು 2 ಕಿ.ಮೀ.ವರೆಗೆ ಅನಿಲದ ವಾಸನೆ
ಹರಡಿತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎಚ್‌ಪಿ ಕಂಪನಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿ ಅವಘಡ ಸಂಭವಿಸದಂತೆ ಕ್ರಮ ಕೈಗೊಂಡರು.
ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ರಾಷ್ಟ್ರೀಯ
ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸುಮಾರು 2 ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಪರ್ಯಾಯ ಮಾರ್ಗಕ್ಕೆ ಸೂಚನೆ ಅಡುಗೆ ಅನಿಲ ವಾಹನ ಅಪಘಾತಕ್ಕೀಡಾಗಿ
ಅನಿಲ ಸೋರಿಕೆಯಾಗುತ್ತಿರುವುದರಿಂದ ಕೆಲ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಲಾಗಿದೆ. ಪುಣೆ-ಬೆಂಗಳೂರು ಮಾರ್ಗದಲ್ಲಿ ತೆರಳುವವರು
ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
0 Comments