Kittur : ಮಹಿಳೆಯರು ಸ್ವಯಂ ಸ್ವಾವಲಂಬಿ ಉದ್ಯೋಗಗಳನ್ನು ಆಯ್ದುಕೊಳ್ಳಲು ಮನವಿ : ಶ್ರೀಮತಿ ಮಂಗಳಾ ನೀಲಗುಂದ

ಮಹಿಳೆಯರು ಸ್ವಯಂ ಸ್ವಾವಲಂಬಿ ಉದ್ಯೋಗಗಳನ್ನು ಆಯ್ದುಕೊಳ್ಳಲು ಮನವಿ : ಶ್ರೀಮತಿ ಮಂಗಳಾ ನೀಲಗುಂದ

ಚನ್ನಮ್ಮನ ಕಿತ್ತೂರು:- ಇಂದು ಕೇವಲ ಸರಕಾರಿ ಅಥವಾ ಇನ್ನಿತರ ಖಾಸಗೀ ಉದ್ಯೋಗಗಳನ್ನೇ
ನಂಬಿಕೊಳ್ಳದೆ ಸ್ವಯಂ ಸ್ವಾವಲಂಬಿ ಉದ್ಯೋಗಗಳನ್ನು ಆಯ್ದುಕೊಂಡು ಉತ್ತಮ ಮತ್ತು ಸುಖೀ ಜೀವನ
ನಡೆಸುವಂತೆ ಗದಗ ಜಿಲ್ಲೆಯ ಮುಳಗುಂದ ದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ವಿಜೇತೆ ಶ್ರೀಮತಿ ಮಂಗಳಾ
ನೀಲಗುಂದ ಮಹಿಳೆಯರಲ್ಲಿ ಮತ್ತು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದರು. ಅವರು ಸಾಹಿತ್ಯ ಆಕಾಡೆಮಿ ಹೊಸದಿಲ್ಲಿ ಇವರು ಚನ್ನಮ್ಮನ ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ,ಬೆಳ್ಳಿಚುಕ್ಕಿ
ಮಹಿಳಾ ಮಂಡಳ ಮತ್ತು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಗಳ
ಸಹಯೋಗದೊಂದಿಗೆ “ಮಹಳಾ ಅಸ್ಥಿತಿ” ಕುರಿತು ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ
ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ನನಗೆ ಅನೇಕ ಸರಕಾರಿ ನೌಕರಿಗಳು ಬಂದರೂ ಅವುಗಳನ್ನು ತಿರಸ್ಕರಿಸಿ ಮನೆಯಲ್ಲಿಯೇ ಕುಟುಂಬದ ಮತ್ತು ಸ್ನೇಹಿತರ ಸಹಕಾರದಿಂದ ಟೆಗರು ಸಾಕಾಣಿಕೆ,ಕೋಳಿ ಸಾಕಾಣಿಕೆ, ಕುಂಕುಮ ತಯಾರಿಕೆ,ಖಾರದ ಪುಡಿ
ತಯಾರಿಕೆ,ಅಡುಗೆ ತಿಂಡಿಗಳ ತಯಾರಿಕೆ,ಕೃಷಿ ಸಂಬಂಧಿಸಿದಂತೆ ಗಿಡಗಳನ್ನು ಬೆಳೆಸುವದರ ಮೂಲಕ ಇಂದು ಉತ್ತಮ ಆದಾಯ ಪಡೆಯುತ್ತಿರುವ ವಿಧಾನವನ್ನು ಅತ್ಯಂತ ಮಾರ್ಮಿಕವಾಗಿ ಕೃಷಿ ಕ್ಷೇತ್ರದ ತಮ್ಮ ಸಾಧನೆಯ ಅನುಭವಗಳನ್ನು ಹಂಚಿಕೊಂಡರು.
66 ಶ್ರೀ ಚನ್ನಪ್ಪ ಅಂಗಡಿ ಸದಸ್ಯರು ಕನ್ನಡ ಭಾಷಾ ಸಲಹಾ ಮಂಡಳಿ ಸಾಹಿತ್ಯ ಅಕಾಡೆಮಿ ಹೊಸದಿಲ್ಲಿ
ಇವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸಾಹಿತ್ಯ ಅಕಾಡೆಮಿಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತಾ ಯುವಕರಿಗೆ ಅಧ್ಯಯನ ಕೈಗೊಳ್ಳಲು ಅವಶ್ಯಕವಿರುವ ಸಹಾಯ ಮಾಡಲಾಗುವದೆಂದು ತಿಳಿಸಿದರು. 
ಮಹಿಳಾ ಸಾಹಿತ್ಯದ ದಿಗ್ಗಜರಾದ ಶ್ರೀಮತಿ
ಭುವನಾ ಹಿರೇಮಠ “ ಅಕ್ಷರದಲ್ಲಿ ಸ್ತ್ರೀ ಸಂವೇದನೆ” , ಶ್ರೀಮತಿ ಉಮಾದೇವಿ ಬಾಗಲಕೋಟ “ ವೃತ್ತಿನಿಗತ
ಮಹಿಳೆ ಮತ್ತು ಸಾಹಿತ್ಯ, ಡಾ.ನಿರ್ಮಲಾ ಬಟ್ಟಲ “ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆ",ಡಾ. ಪ್ರಜ್ಞಾ ಮತ್ತಿಹಳ್ಳಿ "
ಮಹಿಳಾ ಹೋರಾಟದ ಸಾಹಿತ್ಯಕ ದಾಖಲೆಗಳು” ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಪ್ರಾಚಾರ್ಯರಾದ ಡಾ.ತಿಪ್ಪಣ್ಣ ಕೋಲಕಾರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಈ ಉತ್ತಮ
ಸಮಾರಂಭವನ್ನು ತಮ್ಮ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಿರುವ ಸಂಘಟಕರನ್ನು
ಅಭಿನಂದಿಸುತ್ತ ಇಂದಿನ ದಿನಗಳಲ್ಲಿ ಒಬ್ಬ ಮಹಿಳೆಯ ಸಾಧನೆಯನ್ನು ಇತರ ಮಹಿಳೆಯರೂ
ಗೌರವಿಸುವದಾಗಬೇಕೆಂದು ಮನವಿ ಮಾಡಿದರು. ಕಿತ್ತೂರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ವಿಶ್ರಾಂತ ಪ್ರಾಚಾರ್ಯರೂ ಆದಂತಹ ಡಾ.ಎಸ್.ಬಿ.ದಳವಾಯಿ, ಅರುಣಕುಮಾರ ಬಿಕ್ಕಣ್ಣವರ, ಉಮೇಶ ಹೊಂಗಲ,ಬಸವರಾಜ ಬಿದರಿ,ಮಂಜುನಾಥ ಕಳಸಣ್ಣವರ,ಸೌಮ್ಯಾ ರಾಘವೇಂದ್ರ, ಉಮಾದೇವಿ ಬಿಕ್ಕಣ್ಣವರ,
ಪ್ರಭಾ ಲದ್ದಿಮಠ, ಮಹಾಂತೇಶ ಗೆಟಪತಿ. ,ಬೆಳ್ಳಿಚುಕ್ಕಿ ಮಹಿಳಾ ಮಂಡಳದ ಸದಸ್ಯರು,ಮಹಾವಿದ್ಯಾಲಯದ
ಸಿಬ್ಬಂದಿ,ವಿದ್ಯಾರ್ಥಿ ವಿದ್ಯಾರ್ಥಿನಿಯರು,ಇತರ ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಕಿತ್ತೂರಿನ ಶಾಸಕರಾದ
ಸನ್ಮಾನ್ಯ ಶ್ರೀ ಬಾಬಾಸಾಹೇಬ ಪಾಟೀಲ ಇವರ ಜನ್ಮ ದಿನದ ನಿಮಿತ್ತ ಶ್ರೀಮತಿ ರೋಹಿಣಿ ಬಾಬಾಸಾಹೇಬ
ಪಾಟೀಲ ಮತ್ತು ಶಾಸಕರ ಅಭಿಮಾನಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ನೋಟಬುಕ್ಕ ಮತ್ತು ಪೆನ್ನುಗಳನ್ನು
ವಿತರಿಸಿದ್ದು ವಿಶೇಷವಾಗಿತ್ತು. ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ “ಮಹಳಾ ಅಸ್ಮಿತೆ'ಕುರಿತು
ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತ ಪಡಿಸುತ್ತ ಶುಭ ಕೋರಿದರು. ಕುಮಾರಿ ಮುಸ್ಕಾನ್
ಲಾಡನವರ ಪ್ರಾರ್ಥಿಸಿದಳು. ಡಾ.ಕವಿತಾ ಕುಲಕರ್ಣಿ ಸ್ವಾಗತಿಸಿದರು.ಸಹಾಯಕ ಪ್ರಾಧ್ಯಾಪಕರಾದ ಪ್ರತಾಪಿ
ಈರಗಾರ ವಂದಿಸಿದರು. ಕನ್ನಡ ಉಪನ್ಯಾಸಕರಾದ ಮೀನಾಕ್ಷಿ ನಿರೂಪಿಸಿದರು.

ವರದಿ : ಮಾಹಾಂತೇಶ್ ಕರಬಸಣ್ಣನವರ್

Post a Comment

0 Comments