Belagavi: ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ 4 ತಲೆಬುರುಡೆ ಪತ್ತೆ, ಬೆಚ್ಚಿಬಿದ್ದ ಜನ!

ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ 4 ತಲೆಬುರುಡೆ ಪತ್ತೆ, ಬೆಚ್ಚಿಬಿದ್ದ ಜನ!
 ಬೆಳಗಾವಿ ಜಿಲ್ಲೆಗೆ ಅಂಟಿಕೊಂಡಿರುವ ಕೊಲ್ಲಾಪುರದ ದೂದಗಂಗಾ ನದಿಯ ಪಕ್ಕದಲ್ಲೇ 4 ತಲೆಬುರುಡೆ ಪತ್ತೆಯಾಗಿದ್ದು, ಊರಿನ ಜನರನ್ನು ಬೆಚ್ಚಿಬೀಳಿಸಿದೆ.

ಬೆಳಗಾವಿ (ಜು.1): ಮಹಾರಾಷ್ಟ್ರದ ಕೊಲ್ಲಾಪುರದ ಜನತೆಯನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ. ಕಾಗಲ್ ತಾಲೂಕಿನ ಸಿದ್ದನೇರಳ್ಳಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆ ನದಿ ಪಾತ್ರದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಲ್ಲಿರುವ ಈ ಘಟನೆ ಬೆಳಕಿಗೆ ಬಂದಿದೆ. ಗಡಿ ಜಿಲ್ಲೆ ಬೆಳಗಾವಿಗೆ ಹೊಂದಿಕೊಂಡಿರುವ ಶಿದ್ನಳ್ಳಿ ಗ್ರಾಮದಲ್ಲಿ ತಲೆಬುರುಡೆ ಪತ್ತೆಯಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಕರ್ನಾಟಕ ಮತ್ತು  ಮಹಾರಾಷ್ಟ್ರದಲ್ಲಿ ಹರಿಯುವ ದೂದಗಂಗಾ ನದಿಯ ಪಕ್ಕದಲ್ಲೇ ತಲೆಬುರುಡೆ ಪತ್ತೆಯಾಗಿದೆ. ಜಾನುವಾರುಗಳ ಮೈ ತೊಳೆಯಲು ಹೋದ ರೈತರ ಕಣ್ಣಿಗೆ ಈ ತಲೆಬುರುಡೆಗಳು ಕಾಣಿಸಿತು. ಇದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು, ಕಾಗಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಮಹಾರಾಷ್ಟ್ರದ ಕಾಗಲ್ ಠಾಣೆಯಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನದಿ ಪಾತ್ರದಲ್ಲಿದ್ದ ಮಾನವ ತಲೆಬುರುಡೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಕರ್ನಾಟಕ-ಮಹಾರಾಷ್ಟ್ರ ಪೊಲೀಸರಿಗೆ ತಲೆ ಬುರಡೆಗಳು ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿ ಮಹಾರಾಷ್ಟ್ರ ಪೊಲೀಸರು ಮಾಹಿತಿ ಪಡೆದಿದ್ದಾರೆ. ನದಿ ಪಕ್ಕ ಸಿಕ್ಕ ತಲೆಬುರುಡೆಗಳನ್ನು ಕಾಗಲ್ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಳೆಯಿಂದಾಗಿ ದೂಧಗಂಗಾ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿದೆ. ಇದರಿಂದಾಗಿ ಈ ತಲೆಬುರುಡೆಗಳು ಪತ್ತೆಯಾಗಿವೆ. ಒಂದೇ ಸ್ಥಳದಲ್ಲಿ 4 ಮಾನವ ತಲೆಬುರುಡೆಗಳು ಪತ್ತೆಯಾಗಿರುವುದರಿಂದ ಅಚ್ಚರಿ ವ್ಯಕ್ತವಾಗುತ್ತಿದೆ. ದೂಧಗಂಗಾ ನದಿಯಲ್ಲಿ ತಲೆಬುರುಡೆಗಳನ್ನು ನೋಡಲು ನಾಗರಿಕರು ಜಮಾಯಿಸಿದ್ದರು.

Post a Comment

0 Comments