kitturu : ಬಾಬಾಸಾಹೇಬ ಪಾಟೀಲರಿಗೆ ಕನಾ೯ಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅದ್ದೂರಿಯಾಗಿ ಸನ್ಮಾನ

ನಿನ್ನೆ ಸಾಯಂಕಾಲ ಕನಾ೯ಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚ ಕಿತ್ತೂರು ಹಾಗೂ ವೃಂದ ಸಂಘಗಳ ವತಿಯಿಂದ ಚ ಕಿತ್ತೂರು ರಾಜಗುರು ಗುರುಭವನದಲ್ಲಿ ನೂತನ ಶಾಸಕರಾದ ಗೌರವಾನ್ವಿತ ಶ್ರೀ ಬಾಬಾಸಾಹೇಬ ಪಾಟೀಲ ಇವರನ್ನು ಕನಾ೯ಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅದ್ದೂರಿಯಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿದ ಜನಪ್ರಿಯ ಶಾಸಕರು ತಮ್ಮ ಅನುದಾನದಲ್ಲಿ 15 ಲಕ್ಷ ರೂಪಾಯಿಗಳನ್ನು ಕನಾ೯ಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೊದಲನೆಯ ಮಹಡಿ ಕಟ್ಟಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ತಮ್ಮಅವಧಿಯಲ್ಲಿ  ಎಲ್ಲ ಇಲಾಖೆಗಳ ನೌಕರರು ಸರ್ಕಾರದ ಯೋಜನೆಯನ್ನು ಜನಸಾಮಾನ್ಯರಿಗೆ ತ್ವರಿತವಾಗಿ ಮುಟ್ಟಿಸಲು ಶೃದ್ಧೆಯಿಂದ ಕತ೯ವ್ಯ ನಿವ೯ಹಿಸಲು ತಿಳಿಸಿದರು.ಶ್ರೀ ಕಲ್ಳಠದ ರಾಜಯೋಗೀಂದ್ರ ಮಡಿವಾಳ ಮಹಾ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು.ಶ್ರೀ ಎಸ್ ಎಸ್ ಹುಲಮನಿಯವರು ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶ್ರೀ ರವೀಂದ್ರ ಹಾದಿಮನಿ ತಾಲೂಕಾ ದಂಡಾಧಿಕಾರಿಗಳು,ಶ್ರೀ ಸುಭಾಸ ಸಂಪಗಾಂವಿ ಕಾಯ೯ನಿವಾ೯ಹಕ ಅಧಿಕಾರಿಗಳು,ಶ್ರೀ ರವೀಂದ್ರ ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀ ಪ್ರವೀಣ್ ಆರ್ ಹುಲಜಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ಶ್ರೀ ಸಿದ್ದಣ್ಣವರ ಸರ್ ಆರೋಗ್ಯ ಇಲಾಖೆ ಅಧಿಕಾರಿಗಳು,ಶ್ರೀಮತಿ ಗಾಯತ್ರಿ ಅಜ್ಜನ್ನವರ ಸಮನ್ವಯಾಧಿಕಾರಿಗಳು,ಅವಳಿ ಪಟ್ಟಣ ಪಂಚಾಯಿತಿಯ ಕಾಯ೯ನಿವಾ೯ಹಕ ಅಧಿಕಾರಿಗಳು,ಖಜಾನೆ ಇಲಾಖೆ ಅಧಿಕಾರಿಗಳು,ಶ್ರೀ ಹಿರೇಮಠ ಸರ ಪಶು ಅಧಿಕಾರಿಗಳು,ಶ್ರೀ ಆನಂದ ಮುಗಬಸವ ಸವದತ್ತಿ ನೌಕರ ಸಂಘದ ಅಧ್ಯಕ್ಷರು,ಶ್ರೀ ಶಿವಾನಂದ ಕುಡಸೋಮಣ್ಣವರ ಬೈಲಹೊಂಗಲ ನೌಕರ ಸಂಘದ ಅಧ್ಯಕ್ಷರು,ಶ್ರೀ ಬಸವರಾಜ ಯಳ್ಳೂರ ಖಾನಾಪುರ ನೌಕರ ಸಂಘದ ಅಧ್ಯಕ್ಷರು,ಮೂವರು ರಾಜ್ಯ ಪದಾಧಿಕಾರಿಗಳು,ಶ್ರೀ ಮಹಾದೇವ ಗೋಕಾಕ ಅಧ್ಯಕ್ಷರು ನಿಪ್ಪಾಣಿ ನೌಕರ  ಸಂಘದ ಅಧ್ಯಕ್ಷರು ಶ್ರೀ ಎಸ್ ಡಿ ಗಂಗಣ್ಣವರ ಉಪಾಧ್ಯಕ್ಷರು ಕ ರಾ ಪ್ರಾ ಶಾ ಶಿ ಸಂಘ ಬೆಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಕೆ ಎ ಜಾಯಕನವರ,ಸಹಕಾಯ೯ದಶಿ೯ಗಳು ಶಿಕ್ಷಣ ಸಂಯೋಜಕರು,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು,ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು,ಎಲ್ಲತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳು,ಆರೋಗ್ಯ ಅಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳು,ತೋಟಗಾರಿಕೆ,ಅರಣ್ಯ,ಸಬ್ ರಜಿಸ್ಟ್ರಾರ್ ಇಲಾಖೆ ಅಧಿಕಾರಿಗಳು ಪಿಡಿಓ ಅಧಿಕಾರಿಗಳು,ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರು BRC CRC ಸಂಪನ್ಮೂಲ ವ್ಯಕ್ತಿಗಳು,ಹಾಗೂ ಸಹಶಿಕ್ಷಕರು,ಎಲ್ಲ ಇಲಾಖೆಗಳ ನೌಕರರು ಮತ್ತು ನೌಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷ,ಕಾರ್ಯದರ್ಶಿ ಹಾಗೂ ಸವ೯ ಪದಾಧಿಕಾರಿಗಳನ್ನು ಹಾಗೂ ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.ತಾಲೂಕಿನ ಎಲ್ಲ ಸಂಘಗಳಿಂದ ಪ್ರತ್ಯೇಕವಾಗಿ ನೂತನ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಶ್ರೀ ಕೆ ಜಿ ಗಡಾದ ಕಾರ್ಯದರ್ಶಿಗಳು ಸ್ವಾಗತಿಸಿದರು,ಶ್ರೀ ಎಮ್ ಎಸ್ ಕಲ್ಮಠ  ಕಿತ್ತೂರು ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರು,ಪ್ರಾಸ್ತಾವಿಕ ನುಡಿ ಮಾತನಾಡಿದರು,ಶ್ರೀ ವ್ಹಿ ಎಸ್ ನಂದಿಹಳ್ಳಿ ಕಸಾಪ ಗೌರವ ಕಾರ್ಯದರ್ಶಿಗಳು ಮತ್ತು ಶ್ರೀಮತಿ ವೀಣಾ  ಹಿರೇಮಠ ಕ ರಾ ಪ್ರಾ ಶಾ ಶಿ ಸಂಘದ ನಿರ್ದೇಶಕರು ಕಾಯ೯ಕ್ರಮ ನಿರೂಪಿಸಿದರು.ಶ್ರೀವ್ಹಿ ಎಸ್ ಬರಗಾಲಿ ಕಾಯಾ೯ಧ್ಯಕ್ಷರು ವಂದಿಸಿದರು.

Post a Comment

0 Comments