Kitturu Police : ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದ ಕಿತ್ತೂರು ಪೋಲೀಸರು

ಕಿತ್ತೂರು :  ಕಿತ್ತೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಲಾಂಗ್ ತೋರಿಸಿ ದರೋಡೆ ಮಾಡಿದ್ದ ಹುಬ್ಬಳ್ಳಿ ಮೂಲದ ಇಬ್ಬರು ದರೋಡೆಕೋರರನ್ನುಬಂಧನ ಮಾಡುವಲ್ಲಿ ಕಿತ್ತೂರು ಪೋಲಿಸರು ಯಶಸ್ವಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅಂಬಡಗಟ್ಟಿ ಕ್ರಾಸ್ ಬಳಿಯ ಸವಿ೯ಸ್ ರಸ್ತೆಯಲ್ಲಿ ನಿಂತಿದ್ದ ವಾಹನ ಮಾಲೀಕರಿಗೆ ಲಾಂಗ್ ತೋರಿಸಿ ಅವರ ಬಳಿಯಿದ್ದ ಹಣವನ್ನೂ ದೋಚಿಕೊಂಡು ಪರಾರಿಯಾದ ಕುರಿತು ಕಿತ್ತೂರು ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
 ಕಿತ್ತೂರು ಪೋಲಿಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಮಹಾಂತೇಶ್ ಹೊಸಪೇಟೆ ನೇತೃತ್ವದ ತಂಡ ದರೋಡೆ ಮಾಡಿ ಪರಾರಿಯಾದ ದರೋಡೆಕೋರರ್ ಪತ್ತೆಗೆ ಮುಂದಾದಾಗ ಆರೋಪಿಗಳು ಹುಬ್ಬಳ್ಳಿ ಮೂಲದವರು ಎಂದು  ತಿಳಿದು ಬಂದಿದೆ. 
ಈ ಹಿಂದೆ ಕೂಡ ಆರೋಪಿಗಳು ಇದ್ದ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇನ್ಸ್ಪೆಕ್ಟರ್ ಮಹಾಂತೇಶ್ ಅವರು ಖಚಿತ ಮಾಹಿತಿಯ ಮೇರೆಗೆ ಆರೋಪಿಗಳಾದ ವೀರಾಪುರ ಓಣಿಯ ಸುರೇಶ್ ಹಾಗೂ ಬಸವರಾಜ ನನ್ನು ಬಂದನ ಮಾಡಿ ಆರೋಪಿಗಳು ಕೃತ್ಯಕ್ಕೆ ಬಳಸಿದ ಲಾಂಗ್ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Post a Comment

0 Comments