ಸಿಗ್ನಲ್ ಬಿತ್ತು ಅಂತ ಸುಮ್ಮನೆ ಮುಂದಕ್ಕೆ ಹೋಗುವುದು, ಪೊಲೀಸರು ಕಾಣುತ್ತಿಲ್ಲ ಅಂತ ಹೆಲ್ಮೆಟ್ ಧರಿಸದೇ ಓಡಾಡುವುದು, ರೋಡಿನಲ್ಲಿ ಹೇಗೆ ಬೇಕೋ ಹಾಗೆ ಗಾಡಿ ಓಡಿಸುವುದು ಸೇರಿದಂತೆ ಹಲವು ಸಂಚಾರ ನಿಯಮಗಳ ಉಲ್ಲಂಘನೆಗಳು ಇನ್ಮುಂದೆ ನಡೆಯುವುದಿಲ್ಲ. ಏಕೆಂದರೆ ನಗರದ ವಾಹನ ಸವಾರರನ್ನು ಕಾಯಲಿವೆ ಅತ್ಯಾಧುನಿಕ ಕ್ಯಾಮೆರಾಗಳು.
ಹೌದು, ಬೆಂಗಳೂರು ಪೊಲೀಸರು ನಗರದಲ್ಲಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಯನ್ನು ಗುರುತಿಸಲು ತಂತ್ರಜ್ಞಾನದ ಮೊರೆಹೋಗಿದ್ದಾರೆ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (Intelligent Traffic Management System) ಬಳಸಿಕೊಂಡು ರೂಲ್ಸ್ ಬ್ರೇಕ್ ಮಾಡುವವರಿಗೆ ಪಾಠ ಕಲಿಸಲು ಹೊರಟಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಅನ್ನು ಪರಿಚಯಿಸಿಲಿದ್ದು, ಇದರಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲಾಗುತ್ತೆ.
ನಿಯಮ ಉಲ್ಲಂಘನೆ ಪತ್ತೆ ಮಾಡಲಿವೆ ಕ್ಯಾಮೆರಾಗಳು
ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಆಧಾರಿತ ಕ್ಯಾಮೆರಾಗಳು ಏಳು ವಿಧದ ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತವೆ. ಜೊತೆಗೆ ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ವಾಹನ ಮಾಲೀಕರಿಗೆ ಕ್ಷಣದಲ್ಲೇ ಫೈನ್ ಚಲನ್‌ಗಳನ್ನು ಕಳುಹಿಸುತ್ತದೆ.
ಸ್ವಯಂಚಾಲಿತವಾಗಿ ಕೆಲಸ ಮಾಡುವ ಈ ಕ್ಯಾಮೆರಾಗಳು ಸಂಚಾರಿ ಪೊಲೀಸರ ಕಾರ್ಯಗಳಿಗೆ ನೆರವಾಗುತ್ತದೆ. ಅವರ ಕೆಲಸವನ್ನು ಮತ್ತಷ್ಟು ಸುಲಭವನ್ನಾಗಿಸುತ್ತದೆ.
50 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮೆರಾ
ಈ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ನಗರದ ಪ್ರಮುಖ 50 ಜಂಕ್ಷನ್ ಗಳಲ್ಲಿ ಈ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತವೆ. ಜೊತೆಗೆ ಫೈನ್ ರಸೀದಿಗಳನ್ನು ಮಾಡಿ ಅವುಗಳನ್ನು ಎಸ್‌ಎಂಎಸ್ ಮತ್ತು ಪೇಪರ್ ಚಲನ್‌ಗಳ ಮೂಲಕ ವಾಹನ ಸವಾರರಿಗೆ ಕಳುಹಿಸಲಾಗುತ್ತದೆ.
ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಕ್ರಮಗಳು
'ಬೆಂಗಳೂರು ಟ್ರಾಫಿಕ್ ಪೊಲೀಸರು ತಂತ್ರಜ್ಞಾನವನ್ನು ಬಳಸಿಕೊಂಡು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಕೂಡ ಅಂತಹ ಒಂದು ಉಪಕ್ರಮವಾಗಿದೆ. ಇದು ಸಂಚಾರ ನಿಯಮಗಳ ಉಲ್ಲಂಘನೆಗಳ ಬಗ್ಗೆ ಸ್ವಯಂಚಾಲಿತ ಕ್ರಮವನ್ನು ತೆಗೆದುಕೊಳ್ಳುತ್ತದೆ. ಸಂಚಾರ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವುದು ಮತ್ತು ಕಡಿಮೆ ಮಾನವ ಹಸ್ತಕ್ಷೇಪದೊಂದಿಗೆ ಉಲ್ಲಂಘಿಸುವವರಿಗೆ ಸ್ವಯಂ ರಚಿಸಿದ ಚಲನ್‌ಗಳನ್ನು ಕಳುಹಿಸುವುದು ಇದರ ಉದ್ದೇಶವಾಗಿದೆ. ವಿವಿಧ ಸಂಚಾರ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಐಟಿಎಂಎಸ್ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಗಳನ್ನು ಬಳಸಿಕೊಳ್ಳುತ್ತದೆ' ಎಂದು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂಎ ಸಲೀಂ ಹೇಳಿದ್ದಾರೆ.
ಇನ್ನು, ಮುಂದಿನ ಎರಡು ಮೂರು ದಿನಗಳಲ್ಲಿ ಇನ್ನೂ ಐದು ಹೊಸ ಸಂಚಾರ ಠಾಣೆಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
0 Comments