ಕಿತ್ತೂರು ವಿಜಯ ಸುದ್ದಿ ಕಾಂಗ್ರೆಸ್ ಹಿರೀಯ ಶಾಸಕ, ಕರ್ನಾಟಕ ರಾಜಕೀಯ ಭೀಷ್ಮ ಎಂದೇ ಖ್ಯಾತಿ ಪಡೆದಿದ್ದ ಶಾಮನೂರು ಶಿವಶಂಕರಪ್ಪ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ದಾವಣಗೆರೆ ಎಂದರೇ ಶಾಮನೂರು ಸ್ಗ್ವಶಂಕರಪ್ಪ ಎಂಬಷ್ಟರಮಟ್ಟಿಗೆ ಗಮನಸೆಳೆದಿದ್ದ ರಾಜಕೀಯ ಧುರೀಣ, ಶಿಕ್ಷಿಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದಿದ್ದ ನಾಯಕನ ಅಗಲಿಕೆ ಹಿನ್ನೆಲೆಯಲ್ಲಿ ಇಂದು ದಾಅಣಗೆರೆ ನಗರ ವ್ಯಾಪ್ತಿಯ ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ ನೀಡಲಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಅಮಿ ತಿಳಿಸಿದ್ದಾರೆ.ಇಂದಿನ ರಜೆಯನ್ನು ಮುಂದಿನ ಶನಿವಾರ ಡಿ.27ರಂದು ಪೂರ್ಣ ದಿನ ಶಾಲೆ ನಡೆಸಿ ಸರಿದೂಗಿಸಲಾಗುವುದು ಎಂದು ತಿಳಿಸಿದ್ದಾರೆ.ಇಂದು ಶಾಮನೂರು ಶಿವಶಮ್ಕರಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಳಿಗ್ಗೆ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರ ಮನೆಯಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗುತ್ತಿದೆ. ಬಳಿಕ ಹೈಸ್ಕೂಲು ಮೈದಾನಕ್ಕೆ ಶಾಮನೂರು ಅವರ ಪಾರ್ಥೀವ ಶರೀರ ರವಾನಿಸಲಾಗುತ್ತದೆ. ಅಲ್ಲಿ ಅಂತಿಮ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ. ಸಂಜೆ ೪ ಗಂಟೆಯವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.ಬಳಿಕ ಸಂಜೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಪತ್ನಿ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.
0 Comments