kittur vijay news.ಎಸ್, ಡಿ, ಪಿ, ಐ ಪಕ್ಷದ ಅಂಬೇಡ್ಕರ್ ಜಾಥಾ ಕಿತ್ತೂರಿನಲ್ಲಿ ಉದ್ಘಾಟನೆ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಗೆ ಚಲೊ.

ಕಿತ್ತೂರು ವಿಜಯ ಸುದ್ದಿ ಎಸ್, ಡಿ, ಪಿ, ಐ,ಪಕ್ಷದ ಅಂಬೇಡ್ಕರ್ ಜಾಥಾ ಕಿತ್ತೂರಿನಲ್ಲಿ ಉದ್ಘಾಟನೆ. 
ಚ ಕಿತ್ತೂರು: ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು 'ಬೆಳಗಾವಿಗೆ ನಡೆಯಿರಿ' ಎಂಬ ಎಸ್ , ಡಿ, ಪಿ, ಐ ಪಕ್ಷದ ಅಂಬೇಡ್ಕರ್ ಜಾಥಾ ಕಿತ್ತೂರಿನಲ್ಲಿ ಉದ್ಘಾಟನೆಯಾಯಿತು. 
ಜಾಥಾ ಉದ್ಘಾಟಿಸಿ ಮಾತನಾಡಿದ ಎಸ್, ಡಿ, ಪಿ, ಐ ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಹಾಗೂ ರೈತರ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದ ಅವರು 15 ನೇ ತಾರೀಕಿನಂದು ಬೆಳಗಾವಿಯಲ್ಲಿ ಅಧಿವೇಶನದ ಎದುರು ಬೃಹತ್ ಸಭೆ ಆಯೋಜಿಸಲಾಗುವುದು ಎಂದರು. 
2B ಮೀಸಲಾತಿ ಮೂರು ಸ್ಥಾಪಿಸಿ 8% ಗೆ ಏರಿಸುವುದು, ಜನರ ಸಂವಿಧಾನಾತ್ಮಕ ಅಸ್ತಿತ್ವ ಮತ್ತು ಭದ್ರತೆಗೆ ಧಕ್ಕೆ ತರಬಲ್ಲ ಎಸ್ಐಆರ್ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರದಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸುವುದು, ಒಳ ಮೀಸಲಾತಿ ಗೊಂದಲವನ್ನು ಪರಿಹರಿಸುವುದು, ರೈತ ವಿರೋಧಿ ಜಾನುವಾರ ಪ್ರತಿಬಂಧಕ ಕಾಯಿದೆಯನ್ನು ರದ್ದುಪಡಿಸುವುದು, ಖಾಲಿ ಹುದ್ದೆಗಳನ್ನು ಬರ್ತಿಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳು ಈ ಜಾಥಾದ ಮುಖ್ಯ ಉದ್ದೇಶಗಳಾಗಿವೆ ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಎಸ್, ಡಿ, ಪಿ, ಐ ಪಕ್ಷದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಾದ ಚಂದ್ರು ಅಂಗಡಿ, ಮೌಜಮ್ ಜಾ ಮುಲ್ಲಾನಿ, ಮುದಸ್ಸಿರ ಲಂಗೋಟಿ, ಮಕಸೂದ ಮಕಾಂದಾರ, ಮುಜಫ್ಘಿರ ಬಾಗವಾನ, ಇಮ್ರಾನ ಅಫ್ತಾರ, ಮೆಹಬೂಬ ಸುಬಾನಿ, ಅಬೂಬಕರ್ ಖಾದ್ರಿ, ಸಾಹಿತಿ ರಾಜಶೇಖರ ಕೋಟಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Post a Comment

0 Comments