ಕಿತ್ತೂರು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಲವಳ್ಳಿ ಗ್ರಾಮ ಪಂಚಾಯತಿಯ ಗ್ರಾಮ ಸಭೆ ಇಂದು ನಡೆಯಿತು.
ಆದರೆ ಸಭೆಗೆ ಬಂದಿದ್ದ ಗ್ರಾಮಸ್ಥರಿಗೆ ನಿರಾಶೆಯ ಜೊತೆಗೆ ತಮ್ಮ ನಿರೀಕ್ಷೆಗೆ ತಕ್ಕಂತೆ ಫಲಸಿಗದ ವಿಷಯ ತಿಳಿದು. ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಸಭೆಯನ್ನೆ ಮೂಂದೂಡಲು ಹಠ ಹಿಡಿದರು.
ಗ್ರಾಮಸ್ಥರ ಒತ್ತಡಕ್ಕೆ ಮಣಿದ ಕುಲವಳ್ಳಿ ಗ್ರಾಮ ಪಂಚಾಯತಿ ಸಭೆಯನ್ನ ಒಂದೆರೆಡು ದಿನಗಳ ಅವಧಿಯಲ್ಲಿ ಸಭೆಯನ್ನು ಮೂಂದೂಡಿದರು.
ಅಷ್ಟಕ್ಕೂ ಗ್ರಾಮ ಸಭೆಯಲ್ಲಿ ನಡೆದದ್ದು ಹಲವಾರು ಕೆಲಸಗಳಿಗೆ ಸಿಗಬೇಕಾದ ಸೌಕರ್ಯಗಳಾದ ಉತ್ತಾರ ಪಡೆಯುವಲ್ಲಿ ಪಂಚಾಯತಿಯಿಂದ ವಿಳಂಬ, ಮನೆ ಕಳೆದುಕೊಂಡವರಿಗೆ ಬಿಲ್ ವಿಳಂಬ, ಅನೇಕ ಪ್ರಗತಿಪರ ಕೆಲಸಗಳಿಗೆ ಸಂಬಂಧಿಸಿ ಪಂಚಾಯತಿಗೆ ಅಲೆದಾಡುವ ಸ್ಥಿತಿ, ಹೀಗೆ ಅನೇಕ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ಗ್ರಾಸವಾಗುತ್ತಿದ್ದಂತೆ.
ಸಭೆಗೆ ಆಗಮಿಸಿದ್ದ ಗ್ರಾಮಸ್ಥರು ರೊಚ್ಚಿಗೆದ್ದು ಹಲವು ವಿಷಯಗಳ ಚರ್ಚೆಗೆ ಪೂರ್ಣತೆಸಿಗದ ಕಾರಣ ಮತ್ತು ಸಭೆಯಲ್ಲಿ ಅನುಪಸ್ಥಿತಿ ಇದ್ದ ನೂಡಲ್ ಅಧಿಕಾರಿಯ ನಡೆಗೆ ಬೇಸರಗೊಂಡು ಗ್ರಾಮ ಸಭೆಯನ್ನು ಒಂದೆರಡು ದಿನಗಳ ಕಾಲ ಮೂಂದೂಡಿದರು.
ಒಟ್ಟಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಗ್ರಾಮ ಸಭೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು, ತದನಂತರ ಯಾವುದೇ ನಿರೀಕ್ಷೆಯ ಪ್ರಗತಿಪರ ಯೋಜನೆಗೆ ಅಧಿಕಾರಿಗಳ ಗೈರುಹಾಜರಿಯಲ್ಲಿ ಹಲವು ತಿಂಗಳುಗಳಿಂದ ಕಾಯುತ್ತಿದ್ದ ಗ್ರಾಮಸ್ಥರ ಗ್ರಾಮ ಸಭೆ ಹಾರಾಟ / ಚೀರಾಟದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿ ಗ್ರಾಮ ಸಭೆ ಆರಂಭದಲ್ಲಿಯೇ ಮೂಂದೂಡುವ ಹಂತಕ್ಕೆ ತಿರುಗಿತು.
ಗ್ರಾಮಸಭೆ ಹಲವು ತಿಂಗಳುಗಳಿಂದ ನಡೆದಿಲ್ಲ, ನಮ್ಮ ನೋವು-ಸಂಕಟವನ್ನ, ಸರ್ಕಾರದ ಅನುದಾನ ವಿಳಂಬದ ನಡೇ, ಉತ್ತಾರ ವಿಳಂಬ, ಅಧಿಕಾರಿಗಳಿಂದ ಮಾಹಿತಿ ಕೊಡುವಲ್ಲಿ ವಿಳಂಬ, ಪದೇ ಪದೇ ಅಲೆದಾಡುವ ಸ್ಥಿತಿ ನಿರ್ಮಾಣ, ಹೀಗೆ ಅನೇಕ ವಿಷಯಗಳ ಚರ್ಚೆ ನೊಡಲ್ ಅಧಿಕಾರಿಯ ಅನುಪ ಸ್ಥಿತಿಗೆ ಬಲಿಯಾಗಿ ಗ್ರಾಮ ಸಭೆ ಗ್ರಾಮದಲ್ಲೇ ಮೊಟಕುಗೊಂಡಿತ್ತು.
: ಅನುಮಾನದ ಮಧ್ಯದಲ್ಲೇ ಕುಲವಳ್ಳಿ ಪಂಚಾಯತಿಯ ಗ್ರಾಮ ಸಭೆ ಆರಂಭದಲ್ಲೇ ಮೂಂದೂಡಿಕೆ
ಮಹಿಬೂಬ್ ಸುಬಾನಿ ಕಲ್ಮೇಶ್ ಜಂಗಿನ್ಮಠ ಪ್ರಕಾಶ್ ಕಾಜಗಾರ್ ಪುಂಡಲಿಕ್ ಕಡಬಿ ರವಿ ಕರಿಯಪ್ಪನವರ್ ಬಾಬು ಮಲಿಕ್ ಬಾಯ್ ಗೋಪಾಲ್ ಕಣ್ಗಾವಿ ಮಂಜು ಪಾಟೀಲ್ ಸರಸ್ವತಿ ಹೈಬತ್ತಿ ಮಾರುತಿ ಹಟ್ಟಿ ವಳಿ ಕುಮಾರ್ ದಾಸೋಗ ಉಳುವೇಶ್ ಗರ್ಗದ್
0 Comments