ಮೇಟ್‌ ಮೇಳ ಯಶಸ್ವಿ : ಸುಭಾಷ್‌ ಸಂಪಗಾಂವಿ-belagavi


ಬೈಲಹೊಂಗಲ : ತಾಲೂಕು ಪಂಚಾಯತ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನರೇಗಾ ಕಾಯಕ ಬಂಧುಗಳಿಗಾಗಿ ಕಾರ್ಯಾಗಾರ ಎಂಬ ವಿನೂತನವಾದ “ಮೇಟ್‌ ಮೇಳ” ವನ್ನು ಹಮ್ಮಿಕೊಳ್ಳಲಾಗಿತ್ತು. 
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಶ್ರೀ ಎಸ್‌ ಎಸ್‌ ಸಂಪಗಾಂವಿ  ಕಾರ್ಯನಿರ್ವಾಹಕ ಅಧಿಕಾರಿಗಳು ಬೈಲಹೊಂಗಲ ರವರು ಚಾಲನೆ ನೀಡಿದರು.
 ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಬರುವಂತೆ ಪ್ರೇರೆಪಣೆ ಮಾಡುವ ಕಾಯಕ ಬಂಧುಗಳಿಗಾಗಿ ಕಾರ್ಯಾಗರವನ್ನು ಹಮ್ಮಿಕೊಂಡು ಯೋಜನೆಯಲ್ಲಿರುವ ಸೌಲಭ್ಯ ಮತ್ತು ಕಾಯಕ ಬಂಧುಗಳ ಕರ್ತವ್ಯಗಳ ಕುರಿತು ಮಾಹಿತಿಯನ್ನು ನೀಡಿದರು. 
ಒಬ್ಬ ಕಾಯಕ ಬಂಧು ಕನಿಷ್ಟ 50 ಜನ ಕೂಲಿಕಾರರನ್ನು ಕೆಲಸಕ್ಕೆ ಕರೆ ತಂದು ಗ್ರಾಮ ಪಂಚಾಯತಗೆ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಗ್ರಾಮೀಣ ಆಸ್ತಿಗಳನ್ನು ಸುಭದ್ರಗೊಳಿಸುವಂತಾಗಿದೆ ಎಂದು ತಿಳಿಸಿದರು.
ಮುಂದುವರೆದು ನರೇಗಾ ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಎನ್‌ ಎಮ್‌ ಎಮ್‌ ಎಸ್‌ ಮೂಬೈಲ ಹಾಜರಾತಿ ಪಡೆಯಬೇಕು ಮತ್ತು ಕೂಲಿಕಾರರು ಹಾಗೂ ಕಾಯಕ ಬಂಧುಗಳು ಯೋಜನೆಯ ವರ್ಷದ 100 ದಿವಸಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಧೃಡರಾಗಬೇಕೆಂದು ಕರೆ ನೀಡಿದರು.
ಶ್ರೀ ವಿಜಯ ಪಾಟೀಲ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮಗಳ ಅಭಿವೃದ್ಧಿ ಆಗುತ್ತದೆ ಅದು ನರೇಗಾ ಕೂಲಿಕಾರರ ಶ್ರಮದಿಂದ ತಾಲೂಕಿನಲ್ಲಿ ಹೊಸ ಕೆರೆ, ಶಾಲಾ ಅಭಿವೃದ್ಧಿ ಕಾಮಗಾರಿಗಳು ಹಾಗೂ ವೈಯಕ್ತಿಕ ಕಾಮಗಾರಿಗಳನ್ನ ಪಡೆದುಕೊಳ್ಳುವುದರ ಮೂಲಕ ಗ್ರಾಮೀಣ ಆಸ್ತಿಗಳ ಸೃಜನೆ ಮಾಡುವಂತಾಗಿದೆ ಎಂದು ಕರೆ ನೀಡಿದರು.
ಶ್ರೀ ರಘು ಬಿ ಎನ್‌ ಸಹಾಯಕ ನಿರ್ದೇಶಕರು (ಪಂ.ರಾಜ್) ರವರು ಮಾತನಾಡಿ ನರೇಗಾ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳು ಪಡೆದುಕೊಂಡು ಆರ್ಥೀಕವಾಗಿ ಸಧೃಡರಾಗಬೇಕು ಎಂದು ಕರೆ ನೀಡಿದರು
ತಾಲೂಕು ಪಂಚಾಯತ ನರೇಗಾ ಸಿಬ್ಬಂದಿಗಳು ಎಮ್‌ ಬಿ ಶಿವಾಪೂರ, ಎಸ್‌ ವ್ಹಿ ಹಿರೇಮಠ, ಸುನೀಲ್‌ ಅವರನಾಳ, ಶಿವಾನಂದ ಬಡಿಗೇರ ಬೇರಪೂಟ್‌ ಟೇಕ್ನಿಷಿಯನಗಳು, ಬಾಳಪ್ಪ ಮಹೇಶ ಪ್ರದೀಪ್‌ ರವಿ ಶೀದ್ರಾಮಯ್ಯಾ ಗ್ರಾಮ ಕಾಯಕ ಮಿತ್ರರು ಹಾಗೂ ಕಾಯಕ ಬಂಧುಗಳು ಹಾಗೂ ಇತರರು ಹಾಜರಿದ್ದರು
ಕಾರ್ಯಕ್ರಮದ ನಿರೂಪಣೆ ಮತ್ತು ವಂದನೆ: ಎಸ್‌ ವ್ಹಿ ಹಿರೇಮಠ ನಡೆಸಿಕೊಟ್ಟರು.

Post a Comment

0 Comments