ಬೆಳಗಾವಿಗೆ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ರಥ -Belagavi

ಜನವರಿ ತಿಂಗಳು ಆರು ಏಳು ಎಂಟ ರಂದು ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥವು ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿಗೆ ಇಂದು ಮುಂಜಾನೆ 11ಗಂಟೆಗೆ ಆಗಮಿಸಿತು.
 ಕನ್ನಡ ರಥವನ್ನ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಂಗಲಾ ಮೆಟಗುಡ್, ಜಿಲ್ಲಾ ಕಾರ್ಯದರ್ಶಿ ಕಾರ್ಯದರ್ಶಿಗಳಾದ ಶ್ರೀ ಮೆಣಸಿನಕಾಯಿ, ಮಾಜಿ ಅಧ್ಯಕ್ಷರಾದ ಮೋಹನ್ ಪಾಟೀಲ್, ತಾಲೂಕ ಅಧ್ಯಕ್ಷರಾದ ಎಸ್ ಬಿ ದಳವಾಯಿ, ತಹಶೀಲ್ದಾರ್ ಕಚೇರಿಯ ಶ್ರೀ ನೇಸರ್ಗಿ ಮತ್ತು ಸಿಬ್ಬಂದಿ ಬಳಗ, ಪಟ್ಟಣ ಪಂಚಾಯತಿ ಅಧಿಕಾರಿಗಳಾದ ಶ್ರೀ ಮಠದ ಮತ್ತು ಸಿಬ್ಬಂದಿ ಬಳಗ, ಪಟ್ಟಣ ಪಂಚಾಯತಿಯ ಸದಸ್ಯರು ಬರಮಾಡಿಕೊಂಡರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲಿಂಗರಾಜ್ ಅಂಗಡಿ,ಎಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು,ಪ್ರಾಂಶುಪಾಲರುಗಳು, ಕಿತ್ತೂರು ಕಸಾಪ ಪದಾಧಿಕಾರಿಗಳು, ಕ್ಯೂರೇಟರ್ ಶ್ರೀ ರಾಘವೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್ ಟಿ ಬಳಿಗಾರ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ  ಶಕ್ತಿ ಸಂಘದ ಸದಸ್ಯರು  , ಪೊಲೀಸ್ ಅಧಿಕಾರಿ ಬಳಗ ಮತ್ತು ಸಿಬ್ಬಂದಿ, ಕಿತ್ತೂರು ನಾಡಿನ ಅಪಾರ ಜನತೆ  ಉಪಸ್ಥಿತರಿದ್ದರು.

Post a Comment

0 Comments