*ಬೆಳಗಾವಿ ನಗರದದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ, ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ಗೋಷ್ಠಿ ಗೆ ಸಮಸ್ತ ಮಾಧ್ಯಮ ಮಿತ್ರರು ಆಗಮಿಸಬೇಕೆಂದು ವಿನಂತಿ* :- ಆತ್ಮೀಯ  ಬೆಳಗಾವಿ ಮಾಧ್ಯಮ ಮಿತ್ರರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಚರಾದ ಬಂಗ್ಲೆ ಮಲ್ಲಿಕಾರ್ಜುನ ಮಾಡುವ ನಮಸ್ಕಾರಗಳು.
ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ದಿನಾಂಕ:-27/12/2022 ರಂದು ನಮ್ಮ ಕಾನಿಪ ಧ್ವನಿ ಸಂಘಟನೆಯಿಂದ ರಾಜ್ಯದ ಹಲವಾರು ಜಿಲ್ಲೆ ಹಾಗೂ ತಾಲೂಕುಗಳಿಂದ ಒಂದು ದಿನದ ಧರಣಿ ಸತ್ಯಾಗ್ರಹದ ಹೋರಾಟಕ್ಕೆ ಆಗಮಿಸಲಿದ್ದು,ರಾಜ್ಯದ 16,000 ಸಾವಿರ ಪತ್ರಕರ್ತರ ಜ್ವಲಂತ ಸಮಸ್ಯ ಹಾಗೂ ಮೂಲಭೂತ ಸೌಕರ್ಯ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಒಂದು ಸಾವಿರಕ್ಕೂ ಅಧಿಕ ಪತ್ರಕರ್ತರು ಈ ಹೋರಾಟಕ್ಕೆ ಆಗಮಿಸಲಿದ್ದು,ರಾಜ್ಯದ ಮಾಧ್ಯಮ ಇತಿಹಾಸದಲ್ಲೇ ಹದಿಮೂರು ಪ್ರಮುಖ ಬೇಡಿಕೆಗಳಿಗಾಗಿ ಈ ಹೋರಾಟ ಸಾಗಿದ್ದು,ಸಂಕಷ್ಟದಲ್ಲಿರುವ ನಾಡಿನ ಪತ್ರಕರ್ತರು ಹಾಗೂ ಅವರ ಕುಟುಂಬಗಳ ಹಿತ ರಕ್ಷಣೆಗಾಗಿ ಈ ಹೋರಾಟ ಹಮ್ಮಿಕೊಳಲಾಗಿದ್ದು ಈ ಕುರಿತಂತೆ ನಾಳೆ ಬೆಳಿಗ್ಗೆ ಬೆಳಗಾವಿ ನಗರದ ಚೆನ್ನಮ್ಮ ಸರ್ಕಲ್ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ತಾವುಗಳು ಪತ್ರಿಕಾ ಗೋಷ್ಟಿಗೆ ಹಾಜರಾಗಿ ನೊಂದಂತ ಪತ್ರಕರ್ತರ ಪರ ಧ್ವನಿಯಾಗಿ ತಮ್ಮ ಮಾಧ್ಯಮಗಳ ಮೂಲಕ  ಸರ್ಕಾರ ಗಮನ ಹರಿಸುವಂತೆ ಮಾಡಬೇಕೆಂದು ತಮ್ಮಲ್ಲಿ ವಿನಂತಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಚರು,ಕಾನಿಪ ಧ್ವನಿ ಸಂಘಟನೆ.ಮೋ:-9535290300
 
   
0 Comments