ಕಿತ್ತೂರು
ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರು
ತಾಲ್ಲೂಕಿನ ಪ್ರವಾಸಿಮಂದಿರಕ್ಕೆ ಜೆಡಿಎಸ್
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಜೆಡಿಎಸ್
ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರಾಷ್ಟ್ರೀಯ
ಕಾರ್ಯದರ್ಶಿ ಪ್ರತಾಪ್ ಪಾಟೀಲ್, ರಾಣಿ
ಶುಗರ್ಸ್ ಅಧ್ಯಕ್ಷ ನಾಸಿರ್ ಬಾಗವಾನ್ ಹಾಗೂ
ಫೇಜುಲ್ಲಾ ಮಡಿವಾಳಿ ಹಾಗೂ ಜೆಡಿಎಸ್ ಬ್ಲ್ಯಾಕ್
ಅದ್ಯಕ್ಕ ಸೊಮ್ಮಣ್ಣನವರ್ ನೇತೃತ್ವದಲ್ಲಿ ಪತ್ರಿಕಾ
ಗೋಷ್ಠಿ ಕರೆಯಲಾಗಿತ್ತು, ಈ ಸಂದರ್ಭದಲ್ಲಿ
ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ರಾಜಕೀಯ
ಬೆಳವಣಿಗೆಗಳು ಹಾಗೂ ಹಲವಾರು ಮುಖಂಡರು
ಸಂಪರ್ಕದಲ್ಲಿ ಇದ್ದಾರೆ ಎಂದು ಅದನ್ನು ಶೀಘ್ರದಲ್ಲೇ
ಬಹಿರಂಗ ಪಡಿಸಲಾಗುವುದು ಎಂಬ ವಿಷಯಗಳ
ಬಗ್ಗೆ ಮುಕ್ತವಾಗಿ ವಿಷಯಗಳನ್ನು ಬಿಚ್ಚಿಟ್ಟರು,
ಈ ಸಂದರ್ಭದಲ್ಲಿ ಕಿತ್ತೂರು ವಿಧಾನಸಭಾ
ಕ್ಷೇತ್ರಕ್ಕೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ
ಮಾಡಲಾಯಿತು, ಈ ಸಂದರ್ಭದಲ್ಲಿ ಯುವ
ಕಾರ್ಯಕರ್ತರು ಆದ ಸಮೀಉಲ್ಲಾ ತಿಗಡೊಳ್ಳಿ,
ಮಲ್ಲಿಕ್ ಇರಾನಿ, ಹುಮಾಯೂನ್ ಹುಣಸಿಕಟ್ಟಿ
ಹಾಗೂ ಈರಣ್ಣ ಹಲಕಿ, ಸೇರಿದಂತೆ ಹಲವರು
ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments