kittur vijay news. ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ಕಲ್ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112 ನೆಯ ಸಂಸ್ಥಾಪನಾ ದಿನಾಚರಣೆ.

ಮಂಗಳವಾರ ಕಲ್ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112 ನೆಯ ಸಂಸ್ಥಾಪನಾ ದಿನಾಚರಣೆ.

ಚನ್ನಮ್ಮನ ಕಿತ್ತೂರು :- ರಾಜಗುರು ಸಂಸ್ಥಾನ ಕಲ್ಮಠ ದ ಸಹಯೋಗದಲ್ಲಿ ಮಂಗಳವಾರ ದಿನಾಂಕ

05.05 2026 ರಂದು ಮುಂಜಾನೆ 10.30 ಗಂಟೆಗೆ ಶ್ರೀ ಶಂಕರ ಚಂದರಗಿ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ ನೆಯ ಸಂಸ್ಥಾಪನಾ ದಿನಾಚರಣೆ ಯ ಅಂಗವಾಗಿ "ಕನ್ನಡ ಭಾಷೆಯ . ಮಾಧ್ಯಮದ ಉಳಿವು-ಬೆಳವಣಿಗೆಯಲ್ಲಿ ಪರಿಷತ್ತಿನ ಪಾತ್ರ" ಎಂಬ ವಿಷಯ ಕುರಿತು ಉಪನ್ಯಾಸ, ರಾಜಗುರು ಶಾಲಾ ಮಕ್ಕಳಿಂದ ಕನ್ನಡ ಪರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಿತ್ತೂರು ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎಸ್.ಬಿ.ದಳವಾಯಿ ವಹಿಸಲಿರುವರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ವಾಯ್.ತುಬಾಕಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಗಾಯತ್ರಿ ಅಜ್ಜನ್ನವರ ಅತಿಥಿಗಳಾಗಿ ಆಗಮಿಸುವರು. ಕಿತ್ತೂರು ತಾಲೂಕು ಕರ್ನಾಟಕ ರಕ್ಷಣಾ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಕಡಕೋಳ ಉಪನ್ಯಾಸ ನೀಡಲಿರುವರು. ವಿಶೇಷವಾಗಿ ಇತ್ತೀಚೆಗೆ ನಡೆದ ಎಸ್.ಎಸ್,ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ, ನಾಲ್ಕನೆಯ ಮತ್ತು ಆರನೆಯ ಸ್ಥಾನ ಗಳಿಸಿ ಕಿತ್ತೂರು ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ಸಂಜನಾ ಉಮೇಶ ಅವರಾದಿ, ರೋಷಿಣಿ ವಿರೂಪಾಕ್ಷಿ ಎಮ್ಮಿ, ಅನನ್ಯಾ ವೀರಭದ್ರಪ್ಪ ನೇಸರಗಿ, ಲಕ್ಷ್ಮೀ ಈರಣ್ಣ ಕೋಟಗಿ, ಅನು ಮಹೇಶ ಮೂಲಿಮನಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದಾರ್ಥಿಗಳನ್ನು, ರಾಜಗುರು ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಗುವದು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಸಮಾರಂಭಕ್ಕೆ ಆಗಮಿಸಲು ಸಂಘಟಕರು ಮನವಿ ಮಾಡಿದ್ದಾರೆ.

Post a Comment

0 Comments