kittur vijay news.ಕಿತ್ತೂರಿನ ವಿದ್ಯಾರ್ಥಿಗಳು ಕ್ರಿಕೆಟ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

ಶ್ರೇಯಸ್ ಪಾಟೀಲ.ಹರ್ಷ ಸೂರಗೊಂಡ.
ಚ ಕಿತ್ತೂರು: ಸ್ಥಳೀಯ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೇಯಸ್ ಪಾಟೀಲ( 10 ನೇ ತರಗತಿ) ಮತ್ತು ಹರ್ಷ ಸೂರಗೊಂಡ( 9 ನೇ ತರಗತಿ) ವಿಭಾಗೀಯ ಮಟ್ಟದಲ್ಲಿ ಜಯಶಾಲಿಗಳಾಗಿ ಡಿಸೆಂಬರ್ 9 ರಂದು ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಪ್ರೌಢಶಾಲಾ ಹಂತದ ಕ್ರಿಕೆಟ್ ಆಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲರಾದ ಸಿ, ಎಂ, ಪಾಗಾದ ತಿಳಿಸಿದ್ದಾರೆ. ದೈಹಿಕ ಶಿಕ್ಷಕರಾದ ಸಂಜೀವ ಮಗದುಮ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗುರುಸಿದ್ದಯ್ಯ ಕಲ್ಮಠ,ಎಲ್ಲ ಆಡಳಿತ ಮಂಡಳಿ ಸದಸ್ಯರು ಹಾಗು ಸರ್ವ ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post a Comment

0 Comments