ಕಿತ್ತೂರು ಉತ್ಸವ ನಿಮಿತ್ತ ಕೈಗಾರಿಕಾ ವಸ್ತು ಪ್ರದರ್ಶನ.


 ಕಿತ್ತೂರು ವಿಜಯ ಸುದ್ದಿ.ಚ ಕಿತ್ತೂರು:ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ದಿನಾಂಕ 23-10-2025 ರಿಂದ

25-10-2025 ರ ವರೆಗೆ ಚೆನ್ನಮ್ಮನ ಕಿತ್ತೂರ ಉತ್ಸವವನ್ನು ಜರುಗಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಚೆನ್ನಮ್ಮನ ಕಿತ್ತೂರ ಉತ್ಸವದ ಸಮಯದಲ್ಲಿ ಜಿಲ್ಲೆಯಲ್ಲಿ ತಯಾರಿಸಲಾಗುವ ಖಾದಿ ಗ್ರಾಮೋದ್ಯೋಗ, ಗೃಹ

ಕೈಗಾರಿಕೆ ಹಾಗೂ ಕರಕುಶಲ ವಸ್ತುಗಳು, ಕೈಮಗ್ಗದ ವಸ್ತ್ರಗಳು ಮತ್ತು ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ

ಮಾರಾಟವನ್ನು ಏರ್ಪಡಿಸಲಾಗಿದೆ. ಈ ಉತ್ಸವದಲ್ಲಿ ಸುಮಾರು 2 ರಿಂದ 3 ಲಕ್ಷ ಜನರು ಭೇಟಿ ನೀಡುವವರಿದ್ದು,

ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಅವಕಾಶವಿರುತ್ತದೆ. ಆದುದರಿಂದ ವಿವಿಧ ಸೂಕ್ಷ್ಮ/ಸಣ್ಣ

ಕೈಗಾರಿಕಾ ಘಟಕಗಳು/ಕುಶಲ ಕರ್ಮಿಗಳು/ ಸ್ವ ಸಹಾಯ ಸಂಘ/ ಸಂಸ್ಥೆಗಳವರು ಹಾಗೂ ಸರಕಾರಿ

ಇಲಾಖೆಯವರು ಇದರ ಪ್ರಯೋಜನ ಪಡೆಯಲು ಕೋರಿದೆ. ಮಳಗೆಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

18-10-2025 ಆಗಿರುತ್ತದೆ. ಪ್ರತಿ ಮಳಗೆಗೆ ಸರಕಾರಿ ಇಲಾಖೆಯವರು ರೂ. 5000-00, ಸೂಕ್ಷ್ಮ/ಸಣ್ಣ

ಕೈಗಾರಿಕಾ ಘಟಕದವರು ರೂ. 4500-00, ಆಹಾರ ಮಳಿಗೆಯವರು ರೂ. 7500-00 ಹಾಗೂ ಸ್ವ ಸಹಾಯ

ಸಂಘಗಳು ಹಾಗೂ ಕುಶಲಕರ್ಮಿಗಳಿಗೆ ರೂ. 1500-00 ಬಾಡಿಗೆ ನಿಗದಿ ಪಡಿಸಲಾಗಿದೆ. ಉತ್ಸವದಲ್ಲಿ

ಮಳಗೆಯನ್ನು ಪಡೆಯಲು ಇಚ್ಛಿಸುವವರು ಬಾಡಿಗೆಯನ್ನು ಡಿ.ಡಿ. ರೂಪದಲ್ಲಿ (Assistant Commissioner

Bailhongal Kittur Utsav 2025) Payable at Dharwad, ಇವರ ಹೆಸರಿನಲ್ಲಿ ಪಡೆದು ಈ ಕಚೇರಿಗೆ

ಅರ್ಜಿಯೊಂದಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ,

ಉದ್ಯಮಬಾಗ, ಬೆಳಗಾವಿ ಇವರನ್ನು ಕಚೇರಿ ದೂರವಾಣಿ ಸಂ: 0831-2440187 ಸಂಪರ್ಕಿಸಲು ಕೋರಿದೆ.

ಹಾಗೂ ಶ್ರೀ ಎ.ಐ.ಪಠಾಣ, ಸಹಾಯಕ ನಿರ್ದೇಶಕರು-1, ಬೆಳಗಾವಿ ಮೊಬೈಲ್‌ ಸಂಖ್ಯೆ : 9448866919

ಇವರನ್ನು ಸಂಪರ್ಕಿಸಬಹುದಾಗಿದೆ.

 ವರದಿಗಾರರು ರಾಜಶೇಖರ ಕೋಟಿ ಚೆನ್ನಮ್ಮನ ಕಿತ್ತೂರು.

Post a Comment

0 Comments